Siddaramaiah speech :ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಈ ಕುಡುಕರಿಗೂ ಬಹುಶಃ ಏನೋ ಅವಿನಾಭಾವ ಸಂಬಂಧ ಇದೆಯೇನೊ ಅನ್ಸುತ್ತೆ ಅಲ್ವಾ? ಪಾಪ ಅವರು ಯಾವ್ದೇ ಸಭೆ ಸಮಾರಂಭಗಳಿಗೆ ಹೋಗಿ ಮೈಕ್ ಮುಂದೆ ಬಂದು ಭಾಷಣ ಶುರುಹಚ್ಚಿಕೊಂಡ ಕೂಡ್ಲೇ ಅಲ್ಲಿವರೆಗೂ ಮಂಗಮಾಯವಾಗಿದ್ದ ಕುಡುಕರೆಲ್ಲರೂ ಸ್ಟೇಟ್ ಎದುರು ಪ್ರತ್ಯಕ್ಷ ಆಗಿ ಬಿಡ್ತಾರೆ. ನಂತರ ಸಿದ್ದು ಡೈಲಾಗ್ ಗೆ ತಮ್ಮದೇ ಧಾಟಿಯಲ್ಲಿ ಕೌಂಟ್ರು ಕೊಡೋಕೆ ಶುರುಮಾಡುತ್ತಾರೆ. ಕೊನೆಗೆ ಸಿದ್ದು ಕೂಡ ತಮ್ಮ ಗಡಸಿನ ದ್ವನಿಯಲ್ಲೇ ಗದರಿ ಅವರನ್ನು ಆಚೆ ಹಾಕಿಸ್ತಾರೆ. ಹಿಂದೊಮ್ಮೆ ಇದೇ ರೀತಿಯಾಗಿ ‘ಹೌದು ಹುಲಿಯಾ’ ಡೈಲಾಗ್ ಫೇಮಸ್ಸಾಗಿದ್ದನ್ನೂ ನಾವು ನೋಡಿದ್ದೇವೆ. ಎಲ್ಲಾ ರಾಜಕೀಯ ಪ್ರೋಗ್ರಾಮ್ ಗಳಲ್ಲಿ ಇದು ಕಾಮನ್ ಆದ್ರೂ ಸಿದ್ದು ಕಾರ್ಯಕ್ರಮದಲ್ಲಿ ಇಂತದ್ದು ಸ್ವಲ್ಪ ಹೆಚ್ಚೆಂದೇ ಹೇಳಬಹುದು.
ಅಂತೆಯೇ ನಿನ್ನೆ(ಮಾರ್ಚ್ 2) ಧಾರವಾಡ(Dharawad) ಜಿಲ್ಲೆಯ ನವಲಗುಂದ(Navalagunda)ದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ(Prajadhwani Yatra) ಯಾತ್ರೆಯಲ್ಲಿ ಸಿದ್ಧು ಮಾತನಾಡುವಾಗ (Siddaramaiah speech) ಇಂತದೇ ಒಂದು ಪ್ರಸಂಗ ನಡೆದಿದೆ. ಆದ್ರೆ ಇಂತಹ ಸನ್ನಿವೇಶಗಳನ್ನ ಯಾವಾಗಲೂ ತಮಾಷೆಯಾಗಿ ತೆಗೆದುಕೊಳ್ಳುವ ಸಿದ್ದರಾಮಯ್ಯ, ನಿನ್ನೆ ಮಾತ್ರ ಭಾರೀ ರೊಚ್ಟಿಗೆದ್ದಿರದ್ದಾರೆ. ‘ಏ ಯಾವನಯ್ಯ ಅವನು, ಯಾರವನು ಗಲಾಟೆ ಮಾಡೋನು? ಕಳಿಸ್ರಿ ಆಚೆಗೆ. ಗಲಾಟೆ ಮಾಡಿದ್ರೆ ಟಿಕೆಟ್ ಕೊಡಲ್ಲ ನಾನು. ಕುಡಿಸಿ ಕರಕೊಂಡು ಬಂದು ಕುಣಿಸಿ ಕಳಿಸ್ತೀರಾ? ಎಂದು ಮಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಸಿದ್ದು, ಭಾಷಣ ಕೇಳಲು ಇಷ್ಟ ಇಲ್ಲ ಅಂದ್ರೆ ದಯವಿಟ್ಟು ಇಲ್ಲಿಂದ ಹೋಗಿ. ಎಲ್ಲದಕ್ಕೂ ಒಂದು ಮಿತಿ ಇರಬೇಕು. ಹೀಗಾದ್ರೆ ನಾನು ಭಾಷಣ ಮಾಡಲ್ಲ ಎಂದು ವೇದಿಕೆಯಿಂದ ಇಳಿದು ಸೀದಾ ಹೊರಟೇ ಬಿಟ್ಟಿದ್ದಾರೆ. ನಂತರ ಸ್ಥಳೀಯ ನಾಯಕರೆಲ್ಲರೂ ಮನವೊಲಿಸಿದ ಬಳಿಕ ಸಿದ್ದರಾಮಯ್ಯ ಭಾಷಣ ಮುಂದುವರಿಸಿದ ಘಟನೆ ನಡೆದಿದೆ.
ಪಾಪ ಸಿದ್ದರಾಮಯ್ಯ ಹೇಳೋದ್ರಲ್ಲೂ ಕೂಡ ಸತ್ಯವಿದೆ ಬಿಡಿ. ಎಲ್ಲದಕ್ಕೂ ಒಂದು ಮಿತಿ ಇರಲೇ ಬೇಕು ಅಲ್ವಾ? ಎಲ್ಲಿ ಹೋದ್ರೂ, ಯಾವಾಗಲೂ ಅದೇ ರಾಗವಾದರೆ ಯಾರಿಗೆ ತಾನೇ ಸಿಟ್ಟು ಬರಲ್ಲ ಹೇಳಿ. ಅದೂ ಅಲ್ಲದೆ ಇದೀಗ ಚುನಾವಣಾ ಕಾವು ಬೇರೆ ರಂಗೇರುತ್ತಿದೆ. ಬಿರುಸಿನ ಪ್ರಚಾರ ಬೇರೆ ಮಾಡಬೇಕು. ಪ್ರತಿದಿನ ಬಿಡುವಿಲ್ಲದ ಕ್ಷೇತ್ರದಿಂದ ಕ್ಷೇತ್ರಕ್ಕೆ ಪ್ರಯಾಣ, ಅಲ್ಲಲ್ಲಿ ಕಾರ್ಯಕ್ರಮ, ಭಾಷಣ ಎಲ್ಲವೂ ಅತೀವ ಅಯಸ್ಸನ್ನು ಉಂಟು ಮಾಡಿರುತ್ತೆ. ಇದರ ನಡುವೆ ಈ ಕಿರಿ ಕಿರಿ ಬೇರೆ. ಅಂತೆಯೇ ಸಿದ್ದು ಕೂಡ ತಮ್ಮ ತಾಳ್ಮೆ ಕಳೆದುಕೊಂಡು ಸಿಟ್ಟಾಗಿದ್ದಾರೆ.
