Kodi mutt shree :ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಜಿದ್ದಾಜಿದ್ದಿ ನಡೆಯುತ್ತಿವೆ. ಘಟಾನುಘಟಿಗಳು ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಪಕ್ಷಗಳು ಭಾರೀ ಪ್ರಚಾರ ನಡೆಸುತ್ತಿವೆ. ಈ ಮಧ್ಯೆ ಸಿದ್ದರಾಮಯ್ಯ(siddaramaiah) ಕೋಡಿಮಠದ ಶ್ರೀಗಳನ್ನು(kodi mutt shree) ಭೇಟಿ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಶ್ರೀಗಳೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಭವಿಷ್ಯ ಹಾಗೂ ಜ್ಯೋತಿಷ್ಯದ ಮೇಲೆ ಒಲವಿಲ್ಲದ ಸಿದ್ದರಾಮಯ್ಯ
ಶ್ರೀಗಳನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಸಿದ್ದರಾಮಯ್ಯ ಕೋಡಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಆಶೀರ್ವಾದ ಮಾಡಿದರು. ಜೊತೆಗೆ ಶ್ರೀಗಳು ಹಾಗೂ ಸಿದ್ದರಾಮಯ್ಯ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಸಿದ್ಧರಾಮಯ್ಯ ಅಷ್ಟು ಹೊತ್ತು ಏನು ಮಾತನಾಡಿರಬಹುದು. ಅದು ಕೂಡ ಭವಿಷ್ಯ ಹಾಗೂ ಜ್ಯೋತಿಷ್ಯದ ಮೇಲೆ ಒಲವಿಲ್ಲದ ಸಿದ್ದರಾಮಯ್ಯ ಶ್ರೀಗಳನ್ನು ಭೇಟಿ ಮಾಡಿ ಏನೆಲ್ಲಾ ಪ್ರಶ್ನೆ ಕೇಳಿರಬಹುದು? ಮಾಹಿತಿ ಪ್ರಕಾರ, ತಮ್ಮ ರಾಜಕೀಯ(politics) ಭವಿಷ್ಯ ಹೇಗಿದೆ? ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರುವುದು ಎಂದು ಶ್ರೀಗಳು ಹೇಳಿದರು ಎನ್ನಲಾಗಿದೆ. ಹಾಗೇ ಸಿದ್ದರಾಮಯ್ಯ ಕೋಡಿಮಠದಲ್ಲಿ ಊಟ ಮಾಡಿ ಬಂದಿದ್ದು, ಶ್ರೀಗಳ ಆಶಿರ್ವಾದ ಪಡೆದಿದ್ದಾರೆ. ಒಟ್ಟಾರೆ ಸಿದ್ದು ಜ್ಯೋತಿಷ್ಯದ ಮೊರೆ ಹೋಗಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
