Home » Kodi Shri:ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯಲ್ಲ – ಸಂಕ್ರಾಂತಿ ಬಳಿಕ ಸಿಎಂ ಬದಲಾವಣೆ ಎಂದಿದ್ದ ಕೋಡಿ ಶ್ರೀಗಳಿಂದ ಈಗ ಹೊಸ ಭವಿಷ್ಯ

Kodi Shri:ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯಲ್ಲ – ಸಂಕ್ರಾಂತಿ ಬಳಿಕ ಸಿಎಂ ಬದಲಾವಣೆ ಎಂದಿದ್ದ ಕೋಡಿ ಶ್ರೀಗಳಿಂದ ಈಗ ಹೊಸ ಭವಿಷ್ಯ

0 comments

Kodi Shri : ರಾಜ್ಯ ರಾಜಕೀಯದ ಕುರಿತು ಸಾಕಷ್ಟು ಭವಿಷ್ಯಗಳನ್ನು ನಡೆಯುವ ಕೋಡಿಮಠದ ಶ್ರೀಗಳು ಇದೀಗ ಸಂಕ್ರಾಂತಿ ನಂತರ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದಿದ್ದರು. ಆದರೆ ಈಗ ‘ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಕಷ್ಟ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ’ ಎಂದು ಹೇಳಿದ್ದಾರೆ.

 

ಹೌದು, ಕೋಡಿಮಠದ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮುಂದಿನ ವರ್ಷದ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಮುಖ್ಯಮಂತ್ರಿ ಬದಲಾವಣೆ ನಡೆಯುವುದು ಖಚಿತ ಎಂದು ಹೇಳಿದ್ದರು. ಆದರೆ ಈಗ ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ‘ಹಾಲುಮತ ಸಮಾಜದವರ ಕೈಗೆ ಅಧಿಕಾರ ಬಂದರೆ ಅದನ್ನು ಬಿಡಿಸಿಕೊಳ್ಳುವುದು ಬಹಳ ಕಷ್ಟ. ವಿಜಯನಗರ ಸಾಮ್ರಾಜ್ಯ ಕಟ್ಟಿದ ಹಕ್ಕಬುಕ್ಕರು, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕಾಶಿಯ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಇದೇ ಪ್ರಾಚೀನ ಸಮಾಜಕ್ಕೆ ಸೇರಿದವರು. ಹಾಲುಮತ ಸಮಾಜವು ದೈವತ್ವಕ್ಕೆ ಹತ್ತಿರವಾದದ್ದು. ಅಂತಹ ಸಮಾಜದ ಮೊಟ್ಟಮೊದಲ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಕ್ಕಿದೆ, ಅವರನ್ನು ಇಳಿಸುವುದು ಸುಲಭವಲ್ಲ’ ಎಂದು ವಿಶ್ಲೇಷಿಸಿದರು.

 

ಅಲ್ಲದೆ ಯುಗಾದಿ ಹಬ್ಬದವರೆಗೂ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಗಳು ಆಗುವ ಲಕ್ಷಣಗಳಿಲ್ಲ. ಅವರಾಗಿಯೇ ಮನಸ್ಸು ಮಾಡಿ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಬೇರೆಯವರು ಮುಖ್ಯಮಂತ್ರಿಯಾಗಬಹುದು. ಯುಗಾದಿ ಕಳೆದ ನಂತರ ಈ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿಸುತ್ತೇನೆ’ ಎಂದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮಗೆ ಆತ್ಮೀಯರು, ಆದರೆ ಅವರ ಸಿಎಂ ಪಟ್ಟದ ಬಗ್ಗೆ ಈಗಲೇ ಮಾತನಾಡುವ ಪ್ರಸಂಗ ಬಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು

You may also like