Home » ರಾಜ್ಯದಲ್ಲಿ ‘ಚಡ್ಡಿ ಸುಡುವವ’ ರಿಗೆ ಹೆಚ್ಚಿದ ಬೇಡಿಕೆ !! | ಮಾಜಿ ಸಿಎಂ ಸಿದ್ದು ಹಾಗೂ ನಲಪಾಡ್ ಗೆ ಸುಡಲು ಚಡ್ಡಿ ಪಾರ್ಸಲ್

ರಾಜ್ಯದಲ್ಲಿ ‘ಚಡ್ಡಿ ಸುಡುವವ’ ರಿಗೆ ಹೆಚ್ಚಿದ ಬೇಡಿಕೆ !! | ಮಾಜಿ ಸಿಎಂ ಸಿದ್ದು ಹಾಗೂ ನಲಪಾಡ್ ಗೆ ಸುಡಲು ಚಡ್ಡಿ ಪಾರ್ಸಲ್

0 comments

ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ದ ಹೇಳಿಕೆ ಬಳಿಕ ರಾಜ್ಯದಲ್ಲೆಡೆ ಚಡ್ಡಿ ಭಾರೀ ಸುದ್ದಿ ಮಾಡುತ್ತಿದೆ. ಚಡ್ಡಿ ಹೇಳಿಕೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ನಾಯಕರಿಂದ ವಿವಿಧ ರೀತಿಯ ಹೇಳಿಕೆಗಳು ಕೇಳಿಬರುತ್ತಿವೆ. ಇದರ ನಡುವೆ ಚಡ್ಡಿ ವಾರ್ ಇದೀಗ ಅಚ್ಚರಿಯ ಹಂತಕ್ಕೆ ತಲುಪಿದ್ದು, ಚಡ್ಡಿ ಕುರಿತ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಡ್ಡಿ ಸುಡಲು ಸಹಾಯವೆಂಬಂತೆ ಹಿಂದು ಸೇನೆಯಿಂದ ಚಡ್ಡಿ ಕಳುಹಿಸಿಕೊಡಲಾಗಿದೆ.

RSS ಚಡ್ಡಿಗಳನ್ನು ರಾಜ್ಯಾದ್ಯಂತ ಸುಡಲಾಗುವುದು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೊನೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಹಿಂದು ಸಂಘಟನೆಯ ಸದಸ್ಯರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಲಪಾಡ್ ಅವರ ವಿಳಾಸಕ್ಕೆ ಚಡ್ಡಿಗಳನ್ನು ಕೊರಿಯರ್ ಮಾಡಿದ್ದಾರೆ.

ನೀವು ಇಬ್ಬರು ಎಲ್ಲೂ ಹೋಗಿ ಚಡ್ಡಿಗಳನ್ನು ಸುಡಬೇಡಿ. ನಮ್ಮ ಹಳೆಯ ಚಡ್ಡಿಗಳು ಕಳುಹಿಸಿದ್ದೇವೆ. ಇವನ್ನೇ ಸುಡಿ ಎಂದು ಪತ್ರವನ್ನೂ ಬರೆದಿದ್ದೇವೆ ಎಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತ ಶ್ರೀನಿವಾಸ ಮಸ್ಕಲ್ ಹೇಳಿದ್ದಾರೆ. ಹೀಗೆ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿರುವ ಚಡ್ಡಿ ಸುಡುವ ಹೇಳಿಕೆ ಕೊನೆಗೆ ಎಲ್ಲಿ ಹೋಗಿ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.

You may also like

Leave a Comment