2
PM Modi: ನವರಾತ್ರಿ ಹಿನ್ನೆಲೆ ನಡೆದ ವಿಶೇಷ ಪೂಜೆಯ ನಂತರ ಲೋಕಸಭಾ ಚುನಾವಣೆಯ ಕುರಿತು ಭವಿಷ್ಯವೊಂದನ್ನು ಮಹಾಲಿಂಗೇಶ್ವರ ದೇವಸ್ಥಾನದ ಮಹಾಲಿಂಗೇಶ್ವರ ಸ್ವಾಮೀಜಿ ನುಡಿದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಉಳಿಯುತ್ತೀರಿ, ಮೋದಿ (PM Modi) ಅವರನ್ನು ಆರಿಸಿ ತರಲಿಲ್ಲವೆಂದರೆ ಯಾರೂ ಉಳಿಯೋದಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಾಪುರ ಪಟ್ಟಣದ ಮಹಾಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ.
ವಿಶೇಷ ಪೂಜೆಯ ನಂತರ ಜಟ ಹಿಡಿದು ಭವಿಷ್ಯ ನುಡಿದಿರುವ ಸ್ವಾಮೀಜಿಯ ಮಾತಿಗೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ.
