Home » Sullia : ಸುಳ್ಯ ವಿಧಾನಸಭಾ ಕ್ಷೇತ್ರ‌ : ಕಾಂಗ್ರೆಸ್‌,ಬಿಜೆಪಿ,ಎಸ್ಡಿಪಿಐ,ಆಪ್ ಸಂಭಾವ್ಯ ಅಭ್ಯರ್ಥಿಗಳು ಇವರೇ !

Sullia : ಸುಳ್ಯ ವಿಧಾನಸಭಾ ಕ್ಷೇತ್ರ‌ : ಕಾಂಗ್ರೆಸ್‌,ಬಿಜೆಪಿ,ಎಸ್ಡಿಪಿಐ,ಆಪ್ ಸಂಭಾವ್ಯ ಅಭ್ಯರ್ಥಿಗಳು ಇವರೇ !

by Praveen Chennavara
1 comment
Sullia Assembly Constituency

Sullia Assembly Constituency : ಮಂಗಳೂರು : ದ.ಕ. ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರ(Sullia Assembly Constituency)ದಲ್ಲಿ ಈ ಬಾರಿ ಕಾಂಗ್ರೆಸ್‌,ಬಿಜೆಪಿ,ಎಸ್ಡಿಪಿಐ,ಆಪ್ ಅಭ್ಯರ್ಥಿಗಳು ಬಹುತೇಕ ಫಿಕ್ಸ್ ಆಗಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

ಕಳೆದ ಚುನಾವಣೆಗಳಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಬಿಜೆಪಿಯ ಅಂಗಾರ ಹಾಗೂ ಕಾಂಗ್ರೆಸ್‌ನ ಡಾ.ರಘು ಅವರ ಪೈಕಿ ಡಾ.ರಘು ಅವರು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಡಾ.ರಘು ಬದಲಿಗೆ ಕೊಡಗಿನ ನಂದ ಕುಮಾರ್ ಅವರು ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್‌ನಿಂದ ನಂದ ಕುಮಾರ್ ಹಾಗೂ ಕೃಷ್ಣಪ್ಪ ಅವರು ಈಗಾಗಲೇ ಕ್ಷೇತ್ರ ಸಂಚಾರ ನಡೆಸಿದ್ದು, ಮತದಾರರನ್ನು ಬೇಟಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಇವರ ಪೈಕಿ ನಂದ ಕುಮಾರ್ ಅವರಿಗೇ ಟಿಕೇಟ್ ಸಿಗಲಿದೆ ಎನ್ನಲಾಗಿದೆ.

ಬಿಜೆಪಿಯಿಂದ ಹಾಲಿ ಶಾಸಕ ಎಸ್.ಅಂಗಾರ ಅವರನ್ನು ಕಣಕ್ಕಿಳಿಸಲಿದೆ.ಅಭ್ಯರ್ಥಿ ಬದಲಾವಣೆ ಸುದ್ದಿಗಳ ನಡುವೆ ಕೆಲವರ ಹೆಸರೂ ಕೇಳಿ ಬಂದಿತ್ತು.ಇದರಲ್ಲಿ ಪ್ರಮುಖ ಹೆಸರು ಭಾಗೀರಥಿ ಮುರುಳ್ಯ ಹಾಗೂ ಶಿವಪ್ರಸಾದ್ ಪೆರುವಾಜೆ.
ಉಳಿದಂತೆ ಚನಿಯ ಕಲ್ತಡ್ಕ,ಶಂಕರ್ ಪೆರಾಜೆ,ಲತೀಶ್,ಪದ್ಮಕುಮಾರ್ ಅವರ ಹೆಸರನ್ನೂ ತೇಲಿಬಿಡಲಾಗಿದೆ.

ಆದರೆ ಈ ಬಾರಿಯೂ ಎಸ್.ಅಂಗಾರ ಅವರನ್ನೇ ಬಿಜೆಪಿ ಅಭ್ಯರ್ಥಿಯಾಗಿಸಲಿದೆ ಎಂಬುದು ಬಲ್ಲ ಮೂಲಗಳ ಮಾಹಿತಿ.

1989ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಶಲ ಅವರ ವಿರುದ್ಧ ಅಂಗಾರ ಸೋತರೂ 1994ರಿಂದ 2018ರ ತನಕ ನಿರಂತರ ಗೆಲುವು ದಾಖಲಿಸಿದ್ದಾರೆ.

2013ರಲ್ಲಿ ದ.ಕ. ಜಿಲ್ಲೆಯಲ್ಲಿನ 8 ಸ್ಥಾನಗಳ ಪೈಕಿ ಬಿಜೆಪಿ 7ರಲ್ಲಿ ಸೋತಿತ್ತು. ಸುಳ್ಯ ಕ್ಷೇತ್ರದಲ್ಲಿ ಗೆಲುವು ದಾಖಲಿಸಿ ಬಿಜೆಪಿ ಭದ್ರಕೋಟೆ ಅನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಸುಳ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೂಚಿಸುವ ವ್ಯಕ್ತಿಯೇ ಅಭ್ಯರ್ಥಿಯಾಗುವುದು ಈ ಹಿಂದಿನಿಂದಲೂ ಬಂದ ರೂಢಿ.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಸುಳ್ಯದ ಕೊನೆಯ ಶಾಸಕರಾಗಿದ್ದ ಮಾಜಿ ಶಾಸಕ ಕುಶಲ ಅವರ ಪುತ್ರಿ ಸುಮನಾ ಬೆಳ್ಳಾರ್ಕರ್ ಅವರು ಸ್ಪರ್ಧಿಸಲಿದ್ದಾರೆ.ಈ ಮಧ್ಯೆ ಕುಶಲ ಅವರ ನಡೆ ಏನಿರಬಹುದು ಅನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ‌.ಕುಶಲ ಅವರು ವಯೋಸಹಜದಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

ಇನ್ನು ಎಸ್‌ಡಿಪಿಐ ಪಕ್ಷದಿಂದ ಅಭ್ಯರ್ಥಿಯಾಗಿ ದಲಿತ ಮುಖಂಡ ಆನಂದ ಮಿತ್ತಬೈಲ್ ಅಥವಾ ಸವಣೂರು ಗ್ರಾ.ಪಂ.ಸದಸ್ಯ ಬಾಬು ಎನ್ ಅವರ ಹೆಸರು ಕೇಳಿ ಬಂದಿದೆ.

You may also like

Leave a Comment