Home » Sullia :ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಆಂತರಿಕ ಅಭಿಪ್ರಾಯ ನಾಲ್ವರ ಹೆಸರು ಪ್ರಸ್ತಾಪ

Sullia :ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಆಂತರಿಕ ಅಭಿಪ್ರಾಯ ನಾಲ್ವರ ಹೆಸರು ಪ್ರಸ್ತಾಪ

by Praveen Chennavara
1 comment
Sullia Assembly Constituency

Sullia Assembly Constituency :ಮಂಗಳೂರು : ಬಿಜೆಪಿ ಸಂಘಟನಾತ್ಮಕ 39 ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಪದಾಧಿಕಾರಿಗಳಿಂದ ಮತದಾನ ನಡೆದಿದೆ.

ಮತದಾನ ಪ್ರಕ್ರಿಯೆ ವೀಕ್ಷಣೆ ಹಾಗೂ ಮೇಲುಸ್ತುವಾರಿಗೆ ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಚಿವರನ್ನು ಆಯಾ ಜಿಲ್ಲೆಗಳಿಗೆ ನಿಯೋಜಿಸಲಾಗಿತ್ತು. ಮತದಾನ ಮುಗಿದು ಸೀಲ್‌ ಆಗಿರುವ ಮತ ಪೆಟ್ಟಿಗೆಯನ್ನು ಜಿಲ್ಲೆಗೆ ನಿಯೋಜನೆಗೊಂಡವರು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಆಂತರಿಕ ಅಭಿಪ್ರಾಯ ಸಂಗ್ರಹದಲ್ಲಿ ಕೆಲವೊಂದು ಕ್ಷೇತ್ರಗಳಿಗೆ ಮೂರು ಹೆಸರುಗಳ ಬದಲು ಒಂದು,ಎರಡು ,ನಾಲ್ಕಕ್ಕಿಂತ ಹೆಚ್ಚು ಪ್ರಸ್ತಾಪವಾಗಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದಿಂದ (Sullia Assembly Constituency) ಆಂತರಿಕ ಅಭಿಪ್ರಾಯ ಸಂಗ್ರಹ ವೇಳೆ ನಾಲ್ವರ ಹೆಸರು ಹೆಚ್ಚು ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ.

ಪ್ರಮುಖ ಹೆಸರು ಸುಳ್ಯದ ಹಾಲಿ ಶಾಸಕ ,ಸಚಿವ ಎಸ್.ಅಂಗಾರ, ಭಾಗೀರಥಿ ಮುರುಳ್ಯ, ಕಡಬ ತಾ.ಪಂ.ನ ಮಾಜಿ ಅಧ್ಯಕ್ಷೆ ರಾಜೇಶ್ವರಿ ಸವಣೂರು,ಶಿವಪ್ರಸಾದ್ ಪೆರುವಾಜೆ ಎಂಬವರ ಹೆಸರು ಪ್ರಸ್ತಾಪವಾಗಿದೆ.

ಪಕ್ಷವು ಅಭ್ಯರ್ಥಿಯ ಬಗ್ಗೆ ಯಾವುದೇ ಸುಳಿವು ನೀಡದೇ ಇದ್ದರೂ ಸುಳ್ಯ ಕ್ಷೇತ್ರದಲ್ಲಿ ಗೆಲುವೊಂದೇ ಬಿಜೆಪಿಯ ಗುರಿ. ಸತತ ಏಳನೇ ಚುನಾವಣಾ ಗೆಲುವಿಗಿಂತ ಹೊರತಾದ ಬೇರೆ ಯಾವುದೇ ಫಲಿತಾಂಶ ಇಲ್ಲಿನ ಬಿಜೆಪಿ ನಾಯಕತ್ವದ ಮುಂದೆ ಇಲ್ಲಾ. ಆದುದರಿಂದಲೇ ಅಭ್ಯರ್ಥಿ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯ ನಡೆ ನಿಶ್ಚಿತ‌. ಅಳೆದು, ತೂಗಿ, ಸಾಕಷ್ಟು ಚರ್ಚೆ ನಡೆಸಿಯೇ ಈ ಬಾರಿ ಅಭ್ಯರ್ಥಿ ಘೋಷಣೆ ಆಗಬಹುದು ಎಂಬುದು ಸಾರ್ವತ್ರಿಕ ಅಭಿಪ್ರಾಯ.

You may also like

Leave a Comment