Home » ಬಹಿರಂಗವಾಗಿ ಸ್ವಾಮೀಜಿಯ ಬಾಯಲ್ಲಿದ್ದ ಅನ್ನವನ್ನು ತಿಂದ ಜಮೀರ್ ಅಹ್ಮದ್!! ಶಾಸಕರ ನಡೆಯ ಹಿಂದಿದೆ ಕರುಣೆಯ ಕಾರಣ!??

ಬಹಿರಂಗವಾಗಿ ಸ್ವಾಮೀಜಿಯ ಬಾಯಲ್ಲಿದ್ದ ಅನ್ನವನ್ನು ತಿಂದ ಜಮೀರ್ ಅಹ್ಮದ್!! ಶಾಸಕರ ನಡೆಯ ಹಿಂದಿದೆ ಕರುಣೆಯ ಕಾರಣ!??

0 comments

ವೇದಿಕೆಯೊಂದರಲ್ಲಿ ಸ್ವಾಮೀಜಿಯ ಬಾಯಲ್ಲಿದ್ದ ಎಂಜಲು ಅನ್ನವನ್ನು ತಿನ್ನುವ ಮೂಲಕ ಶಾಸಕ ಜಮೀರ್ ಅಹಮದ್ ಅತಿರೇಕದ ವರ್ತನೆ ಮೆರೆದಿದ್ದು, ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ದೊಡ್ಡ ಸುದ್ದಿಯಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಹಾಗೂ ಈದ್ ಮಿಲಾದ್ ಕಾರ್ಯಕ್ರಮವೊಂದರ ವೇದಿಕೆಯಲ್ಲಿದ್ದ ಶಾಸಕ ಜಮೀರ್ ಸ್ವಾಮೀಜಿಗೆ ಕೈತುತ್ತು ತಿನ್ನಿಸಿದರು. ಬಳಿಕ ಎಂಜಲು ಅನ್ನವನ್ನು ತೆಗೆಸಿ ತಮ್ಮ ಬಾಯಿಗೆ ಹಾಕಿಕೊಂಡಿದ್ದು, ಬಳಿಕ ಘಟನೆಗೆ ಸ್ಪಷ್ಟನೆ ಕೂಡಾ ನೀಡಿದ್ದಾರೆ.

ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ದಲಿತ ಸಮುದಾಯವರು ಮಾಡಿದ್ದ ಅಡುಗೆಯನ್ನು ವಿದ್ಯಾರ್ಥಿಗಳು ವಿರೋಧಿಸಿದ್ದು ಬಹಳ ಬೇಸರ ತಂದಿದೆ. ಇಂತಹ ಬೇಧಭಾವ ಇರಬಾರದು ಎಂದೇ ದಲಿತ ಸಮುದಾಯದ ಸ್ವಾಮೀಜಿಯನ್ನು ಕಾರ್ಯಕ್ರಮಕ್ಕೆ ಕರೆಸಿ, ಕೈತುತ್ತು ತಿನ್ನಿಸಿ, ಅವರ ಬಾಯಲ್ಲಿದ್ದ ಅನ್ನವನ್ನೇ ಬಹಿರಂಗವಾಗಿ ತಿಂದೆ ಎಂದಿದ್ದಾರೆ.

You may also like

Leave a Comment