Home » Bhavani Revanna: ‘ಸ್ವರೂಪ್​​ ನನ್ನ ಮಗ, ಅವನಿಗೆ ನನ್ನ ಪೂರ್ಣ ಬೆಂಬಲವಿದೆ, ಆತ ಗೆದ್ದೇ ಗೆಲ್ತಾನೆ’ ! ಹಾಸನ JDS ಅಭ್ಯರ್ಥಿಗೆ ಭವಾನಿ ರೇವಣ್ಣ ಆಶೀರ್ವಾದ

Bhavani Revanna: ‘ಸ್ವರೂಪ್​​ ನನ್ನ ಮಗ, ಅವನಿಗೆ ನನ್ನ ಪೂರ್ಣ ಬೆಂಬಲವಿದೆ, ಆತ ಗೆದ್ದೇ ಗೆಲ್ತಾನೆ’ ! ಹಾಸನ JDS ಅಭ್ಯರ್ಥಿಗೆ ಭವಾನಿ ರೇವಣ್ಣ ಆಶೀರ್ವಾದ

by ಹೊಸಕನ್ನಡ
1 comment
Bhavani Revanna

Bhavani Revanna : ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದ ಹಾಸನ(Hassan) ಜೆಡಿಎಸ್(JDS) ಟಿಕೆಟ್ ತಿಕ್ಕಟ ಶಮನವಾಗಿದೆ. ಕುಮಾರಸ್ವಾಮಿ ಆಸೆಯಂತೆ ಸಾಮಾನ್ಯ ಕಾರ್ಯಕರ್ತ ಸ್ವರೂಪ್ ಗೆ ಟಿಕೆಟ್ ಸಿಕ್ಕಿದೆ. ಈ ಬೆನ್ನಲ್ಲೇ ಮುನಿಸುಗಳು ಶಮನವಾಗಿ ಜೆಡಿಎಸ್ (JDS) ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ. ಭವಾನಿ ರೇವಣ್ಣ (Bhavani Revanna) ಮಾತನಾಡಿ ಸ್ವರೂಪ್ ಬೇರೆ ಅಲ್ಲ ನನ್ನ‌ ಮಕ್ಕಳು (Children) ಬೇರೆ ಅಲ್ಲ. ಸ್ವರೂಪ್ ಗೆ ನನ್ನ ಪೂರ್ಣ ಬೆಂಬಲ ಇದೆ ಎಂದು ಆಶೀರ್ವದಿಸಿದ್ದಾರೆ.

ಹೌದು, ಭಾಷಣದ ವೇಳೆ ಮಾತನಾಡಿದ ಭವಾನಿ ರೇವಣ್ಣನವರು ಸ್ವರೂಪ್ (Swaroop) ಅವರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಭವಾನಿ ರೇವಣ್ಣ, ಸ್ವರೂಪ್ ಬೇರೆ ಅಲ್ಲ ನನ್ನ‌ ಮಕ್ಕಳು (Children) ಬೇರೆ ಅಲ್ಲ. ಹಿಂದೆ‌ ಇದ್ದ ಎಲ್ಲಾ ವಿಚಾರಗಳನ್ನ ಮರೆಯಬೇಕು. ನಾನು ಇಷ್ಟು ದಿನ ಹಠ ಮಾಡಿದ್ದು ಬಿಜೆಪಿ ಸೋಲಿಸುವುದಕ್ಕಾಗಿ. ಆದರೆ ಏನು ಮಾಡುವುದು ದೇವೇಗೌಡರ ಆರೋಗ್ಯ ಸ್ಥಿತಿ ಕಂಡು ನನಗೆ ತುಂಬಾ ನೋವಾಗಿದೆ. ಪಕ್ಷಕ್ಕಿಂತ ಹಿರಿಯರ ಮಾತಿಗಿಂತ ನಾನು ದೊಡ್ಡವಳಲ್ಲ. ಹಾಗಾಗಿ ನಾನೇ ಸ್ವರೂಪ್‌ಗೆ ಟಿಕೆಟ್ ಕೊಡಿ ಅಂತ ಕುಮಾರಸ್ವಾಮಿಗೆ ಹೇಳಿ ಸ್ವರೂಪ್‌ಗೆ ಟಿಕೆಟ್ ಕೊಡಿಸಿದ್ದೇನೆ’ ಎಂದು ಹೇಳಿದ್ದಾರೆ.

ಅಲ್ಲದೆ ಹಾಸನದಲ್ಲಿ ಬಿಜೆಪಿಯನ್ನ ಸಂಪೂರ್ಣವಾಗಿ ತೆಗೆದುಹಾಕಬೇಕು. ಅದಕ್ಕಾಗಿ ನಿದ್ರೆ ಬಿಟ್ಟು ಕೆಲಸ ಮಾಡಿ. ಇನ್ನೂ ಇಪ್ಪತ್ತು ದಿನ ಮಾತ್ರ ಚುನಾವಣೆಗೆ ಬಾಕಿ ಇದೆ. ಸ್ವರೂಪ್ ಈ‌ ಕ್ಷೇತ್ರದಲ್ಲಿ ಗೆದ್ದೆ ಗೆಲ್ಲುತ್ತಾನೆ. ಸ್ವರೂಪ್ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ ಎಂದು ನುಡಿದರು.

ಅಂಹಾಸನದಲ್ಲಿ ಬಿಜೆಪಿಯನ್ನ ಸಂಪೂರ್ಣವಾಗಿ ತೆಗೆದುಹಾಕಬೇಕು. ಅದಕ್ಕಾಗಿ ನಿದ್ರೆ ಬಿಟ್ಟು ಕೆಲಸ ಮಾಡಿ, ಸ್ವರೂಪ್ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ ಎಂದು ನುಡಿದರು. ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕುಟುಂಬ ಭಾಗಿಯಾಗಿ, ಸ್ವರೂಪ್ ಗೆಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಸ್ವರೂಪ್ ಅವರು, ರೇವಣ್ಣ ಹಾಗೂ ಭವಾನಿ ರೇವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ: Congress 5th list released : ಕಾಂಗ್ರೆಸ್‌ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ! ಅಖಂಡಗೆ ‘ಕೈ’ ಎತ್ತಿ, ಸಿಎಂ ವಿರುದ್ಧ ಅಭ್ಯರ್ಥಿ ಬದಲಿಸಿದ KPCC

You may also like

Leave a Comment