Home » ದ.ಕ : ಮಹಿಳಾ ಮತದಾರರೇ ಹೆಚ್ಚಿರುವ ಜಿಲ್ಲೆಯಲ್ಲಿ ಮಹಿಳೆಗೆ ಈ ಬಾರಿ ಎಲ್ಲಿ ಅವಕಾಶ ?

ದ.ಕ : ಮಹಿಳಾ ಮತದಾರರೇ ಹೆಚ್ಚಿರುವ ಜಿಲ್ಲೆಯಲ್ಲಿ ಮಹಿಳೆಗೆ ಈ ಬಾರಿ ಎಲ್ಲಿ ಅವಕಾಶ ?

by Praveen Chennavara
1 comment
Female voters

Female voters : ಮಂಗಳೂರು : ಮಹಿಳಾ (Female voters ) ಮತದಾರರೇ ಹೆಚ್ಚಿರುವ ದಕ್ಷಿಣ ಜಿಲ್ಲೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪ್ರಮುಖ ಪಕ್ಷಗಳು ಅವಕಾಶ ನೀಡುತ್ತದೆ ಎಂದು ಬಹು ಚರ್ಚಿತ ವಿಷಯ.

ಈಗಾಗಲೇ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಮಂಗಳೂರು ಗೆ ಯು.ಟಿ.ಖಾದರ್,ಬಂಟ್ವಾಳ ರಮಾನಾಥ ರೈ ,ಮೂಡಬಿದಿರೆ ಮಿಥುನ್ ರೈ,ಬೆಳ್ತಂಗಡಿ ರಕ್ಷಿತ್ ಶಿವರಾಂ,ಸುಳ್ಯ ಜಿ.ಕೃಷ್ಣಪ್ಪ ಅವರಿಗೆ ಈಗಾಗಲೇ ಟಿಕೇಟ್ ಘೋಷಿಸಲಾಗಿದೆ.

ಪುತ್ತೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಘೋಷಣೆ ಆಗಬೇಕಿದೆ.ಈ ಕ್ಷೇತ್ರದಲ್ಲಿ ಇನ್ನು ಯಾವ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯನ್ನು ಘೋಷಣೆ ಮಾಡುವರು ಎಂಬುದು ಯಕ್ಷ ಪ್ರಶ್ನೆ.

ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ.ಬಿಜೆಪಿಯಲ್ಲಿ ಯಾವ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಿದ್ದಾರೆ ಎಂಬುದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ.

ದ.ಕ.ಜಿಲ್ಲೆಯಲ್ಲಿ ಮಾ.29ರ ತನಕದ ದಾಖಲೆಯಂತೆ 17,58,647 ಮತದಾರರಿದ್ದಾರೆ. ಈ ಪೈಕಿ ಪುರುಷರು 8,60,396, ಮಹಿಳೆಯರು 8,98,176, ತೃತೀಯ ಲಿಂಗಿ 75, ಬೆಳ್ತಂಗಡಿ 2,25,273, ಮೂಡಬಿದ್ರೆ 2,02,593, ಮಂಗಳೂರು ನಗರ ಉತ್ತರ 2,46,350, ಮಂಗಳೂರು ನಗರ ದಕ್ಷಿಣ 2,42,407, ಮಂಗಳೂರು 2,02,015, ಬಂಟ್ವಾಳ 2,24,815, ಪುತ್ತೂರು 2,10,522 ಮತ್ತು ಸುಳ್ಯದಲ್ಲಿ 2,04,672 ಮತದಾರರಿದ್ದಾರೆ.

18-19 ಹರೆಯದ ಒಟ್ಟು 33,577 ಮತದಾರರಿದ್ದಾರೆ. ಯುವ ಮತದಾರರು ಬೆಳ್ತಂಗಡಿಯಲ್ಲಿ 4,180, ಮೂಡಬಿದ್ರೆ 3,612, ಮಂಗಳೂರು ನಗರ ಉತ್ತರ 4,455, ಮಂಗಳೂರು ನಗರ ದಕ್ಷಿಣ 3,462, ಮಂಗಳೂರು 4,509, ಬಂಟ್ವಾಳ 4,715, ಪುತ್ತೂರು 4,412 ಮತ್ತು ಸುಳ್ಯದಲ್ಲಿ 4,232 ಇದ್ದಾರೆ.

ಜಿಲ್ಲೆಯಲ್ಲಿ 80ಕ್ಕಿಂತ ಮೇಲ್ಪಟ್ಟ 46,927 ಮತದಾರರಿದ್ದಾರೆ. ಈ ಪೈಕಿ 80ಕ್ಕಿಂತ ಮೇಲ್ಪಟ್ಟ 38,294, 90ಕ್ಕಿಂತ ಮೇಲ್ಪಟ್ಟ 8,102, 100ಕ್ಕಿಂತ ಮೇಲ್ಪಟ್ಟ 531ಮತದಾರರು ಮತದಾನದ ಹಕ್ಕನ್ನು ಹೊಂದಿದ್ದಾರೆ. ವಿಕಲಚೇತನ ಮತದಾರರು 14,007 ಮಂದಿ ಇದ್ದಾರೆ.

You may also like

Leave a Comment