Home » Modi Ji Thali: ಮೋದಿ ಅಮೆರಿಕಾ ಭೇಟಿಗೆ ಜನಪ್ರಿಯ ಆಗ್ತಿದೆ ‘ ಮೋದಿ ಜಿ ಥಾಲಿ ‘, ಎಲ್ಲದರಲ್ಲೂ ಟ್ರೆಂಡ್ ಮಾಡೋದೇ ಮೋದಿ ಶೈಲಿ

Modi Ji Thali: ಮೋದಿ ಅಮೆರಿಕಾ ಭೇಟಿಗೆ ಜನಪ್ರಿಯ ಆಗ್ತಿದೆ ‘ ಮೋದಿ ಜಿ ಥಾಲಿ ‘, ಎಲ್ಲದರಲ್ಲೂ ಟ್ರೆಂಡ್ ಮಾಡೋದೇ ಮೋದಿ ಶೈಲಿ

by ಹೊಸಕನ್ನಡ
0 comments
Modi Ji Thali

Modi Ji Thali: ಮೋದಿ ಅಂದರೆ ಇನ್ನೊಂದು ಹೆಸರೇ ಜನಪ್ರಿಯತೆ. ಅವರಿಗೆ ಎರಡೂ ಕಡೆಯಿಂದ ಭರ್ಜರಿಯಾಗಿ ಜನಪ್ರಿಯತೆ ಸಿಗುತ್ತಿದೆ. ಅವರು ಮಾಡಿದ ಒಳ್ಳೆಯ ಕೆಲಸಗಳಿಗೆ ಅವರ ಪಾರ್ಟಿಯಿಂದಲೂ, ಮತ್ತೆ ವಿರೋಧ ಪಕ್ಷದಿಂದಲೂ ಏಕಕಾಲದಲ್ಲಿ ಜನಪ್ರಿಯತೆ ಸಿಗುತ್ತಾ ಹೋಗುತ್ತಿದೆ. ಅವರು ನಿಂತರೆ ಕೂತರೆ ಕೂಡಾ ಅದು ದೊಡ್ಡ ಸುದ್ದಿಯಾಗುತ್ತದೆ, ಅದು ಮೋದಿ ಶೈಲಿ. ಈಗ, ‘ ಮೋದಿ ಜಿ ಥಾಲಿ ‘ (Modi Ji Thali) ದೊಡ್ದ ಸುದ್ದಿಯಾಗುತ್ತಿದೆ.

ಮೋದಿಯವರು ಅಮೆರಿಕ ಪ್ರವಾಸದ ಯೋಜನೆಯಲ್ಲಿದ್ದಾರೆ. ನ್ಯೂಜೆರ್ಸಿ ಮೂಲದ ರೆಸ್ಟೋರೆಂಟ್ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯ ಮುಂದಿನ ಅಮೆರಿಕ ಭೇಟಿಗಾಗಿ ‘ಮೋದಿ ಜಿ ಥಾಲಿ’ಯನ್ನು ಬಿಡುಗಡೆ ಮಾಡಿದೆ. ರೆಸ್ಟೋರೆಂಟ್ ಮಾಲೀಕ ಶ್ರೀಪಾದ್ ಕುಲಕರ್ಣಿ ಥಾಲಿಯ ಬಗ್ಗೆ ಹಲವು ವಿವರಗಳನ್ನು ನೀಡಿದ್ದಾರೆ. ಅನಿವಾಸಿ ಭಾರತೀಯ ಬಾಣಸಿಗ ಶ್ರೀಪಾದ್ ಕುಲಕರ್ಣಿ ಸಿದ್ಧಪಡಿಸಿದ ‘ಮೋದಿ ಜಿ ಥಾಲಿ’ ಭಾರತದ ವಿವಿಧ ಭಾಗಗಳ ವೈವಿಧ್ಯಮಯ ಭಕ್ಷ್ಯ ಭೋಜಗಳನ್ನು ಆಯ್ಕೆಗಳನ್ನು ಒಳಗೊಂಡಿದೆ. ಈ ವಿಶಿಷ್ಟ ಊಟದ ಒಕ್ಕೂಟ (ಥಾಲಿ) ದಲ್ಲಿರುವ ಭಕ್ಷ್ಯಗಳು ಏನೆಲ್ಲಾ ಗೊತ್ತಾ ? ಮೋದಿಯ ಇಷ್ಟದ ಖಿಚ್ಡಿ, ರಸಗುಲ್ಲಾ, ಸರ್ಸೊ ದಾ ಸಾಗ್ ಮತ್ತು ದಮ್ ಆಲೂದಿಂದ ಹಿಡಿದು ಕಾಶ್ಮೀರಿ, ಇಡ್ಲಿ, ಧೋಕ್ಲಾ, ಮಜ್ಜಿಗೆ ಮತ್ತು ಹಪ್ಪಳದವರೆಗೆ ಇರುತ್ತದೆ.

ವಿಶ್ವಸಂಸ್ಥೆ 2019 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿತ್ತು.2023 ರಲ್ಲಿ ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ಆದ ಈ ಸಾಧನೆಯನ್ನು ಆಚರಿಸಲು ಮತ್ತು ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ರೆಸ್ಟೋರೆಂಟ್ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಅದ್ದೂರಿ ಔತಣ ಬಡಿಸಲು ತಯಾರಿ ನಡೆಸಿದೆ. ಇದೇ ರೆಸ್ಟೋರೆಂಟ್ ಮಾಲೀಕರು ಶೀಘ್ರದಲ್ಲೇ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಕೂಡಾ ಮತ್ತೊಂದು ಥಾಲಿಯನ್ನು ಪ್ರಾರಂಭಿಸಲು ಯೋಜಿಸಿದ್ದಾರಂತೆ. ಇದೇ ಜೂನ್ 21ರಂದು, ನ್ಯೂಯಾಕ್ ನಗರದಲ್ಲಿ ಪ್ರಧಾನಿ ಮೋದಿಯಮನ್ನು ನೋಡಲು ಹಲವಾರು ಭಾರತೀಯ – ಅಮೆರಿಕನ್ನರು ಉತ್ಸುಕರಾಗಿದ್ದಾರೆ.

ಈಗ ತಯಾರಾಗುತ್ತಿರುವ ‘ಮೋದಿ ಥಾಲಿ’ ಹೊಸ ಕಾನ್ಸೆಪ್ಟ್ ಅಲ್ಲ. ಕಳೆದ ವರ್ಷ, ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿಯವರ ಜನ್ಮದಿನಕ್ಕೆ ಮೊದಲು, ರೆಸ್ಟೋರೆಂಟ್ ಒಂದು 56 ಇಂಚಿನ ನರೇಂದ್ರ ಮೋದಿ ಥಾಲಿ ಎಂಬ ಊಟವನ್ನು ಪ್ರಾರಂಭಿಸಿತ್ತು. ದೆಹಲಿಯ ಕೊನಾಟ್ ಪ್ಲೇಸ್ನಲ್ಲಿರುವ ರ್ಡರ್ 2.1 ಎಂಬ ರೆಸ್ಟೋರೆಂಟ್ ವಿವಿಧ ಭಕ್ಷ್ಯ ಭೋಜ್ಯ ಸಮೇತ 56 ಮೆನು ಇರುವ ದೊಡ್ಡ ಗಾತ್ರದ ಥಾಲಿಯನ್ನು ಉಣಬಡಿಸಿತ್ತು. ಅದರಲ್ಲಿ ಗ್ರಾಹಕರು.ತಮಗೆ ಬೇಕಾದ ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಹಾರವನ್ನು ಆಯ್ದು ಭೋಜನ ಸವಿಯಬಹುದಿತ್ತು.

ಇದನ್ನೂ ಓದಿ: Infetility Problem: ಈ ರೀತಿಯ ಜೀವನಶೈಲಿ ಮಹಿಳೆಯರು ಮತ್ತು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು!

You may also like

Leave a Comment