Home » ಉತ್ತರಪ್ರದೇಶದ ಮುಂದಿನ ವರ್ಷದ ಚುನಾವಣೆಯಲ್ಲಿ ವಿಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯೇ ಬಿಜೆಪಿ !? | ಟೈಮ್ಸ್ ನೌ- ಫೋಲ್ ಸ್ಟಾರ್ಟ್ ಸಮೀಕ್ಷೆ ಹೇಳಿದ್ದಾದರೂ ಏನು??

ಉತ್ತರಪ್ರದೇಶದ ಮುಂದಿನ ವರ್ಷದ ಚುನಾವಣೆಯಲ್ಲಿ ವಿಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯೇ ಬಿಜೆಪಿ !? | ಟೈಮ್ಸ್ ನೌ- ಫೋಲ್ ಸ್ಟಾರ್ಟ್ ಸಮೀಕ್ಷೆ ಹೇಳಿದ್ದಾದರೂ ಏನು??

0 comments

ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ಟೈಮ್ಸ್ ನೌ -ಪೋಲ್ ಸ್ಟಾರ್ಟ್ ಸಮೀಕ್ಷೆ ಭವಿಷ್ಯ ನುಡಿದಿದೆ.

ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಬುದು ತಿಳಿದು ಬಂದಿದೆ.ಆದರೆ 2017ಕ್ಕೆ ಹೋಲಿಸಿದರೆ ಬಿಜೆಪಿ ಹಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ
ಸೂಚಿಸಿದೆ.403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 239ರಿಂದ 245 ಕ್ಷೇತ್ರಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷ ಅತ್ಯುತ್ತಮ ಸಾಧನೆ ಪ್ರದರ್ಶಿಸುವ ನಿರೀಕ್ಷೆ ಇದೆ. 119- 125 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಜಯಗಳಿಸಲಿದೆ ಎಂದು ಸಮೀಕ್ಷೆ ಸೂಚಿಸಿದೆ.

ಮಾಯಾವತಿ ನೇತೃತ್ವದ ಬಿಎಸ್ ಪಿಯ ಮತ ಬಿಜೆಪಿ ಮತ್ತು ಎಸ್ ಪಿ ಗೆ ಹಂಚಿ ಹೋಗಲಿದೆ. ಬಿಎಸ್ ಪಿ 30 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಮುನ್ಸೂಚನೆ ನೀಡಿದೆ.ಕಾಂಗ್ರೆಸ್ 5 ರಿಂದ 8 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಸೂಚಿಸಿದೆ.

You may also like

Leave a Comment