Home » Muslim MLA: ಮುಸ್ಲಿಂ ಶಾಸಕಿಯಿಂದ ಹಿಂದೂ ದೇವಾಲಯ ಭೇಟಿ – ಹೋದ ಬಳಿಕ ಸ್ಥಳೀಯರು ಹೀಗಾ ಮಾಡೋದು !!

Muslim MLA: ಮುಸ್ಲಿಂ ಶಾಸಕಿಯಿಂದ ಹಿಂದೂ ದೇವಾಲಯ ಭೇಟಿ – ಹೋದ ಬಳಿಕ ಸ್ಥಳೀಯರು ಹೀಗಾ ಮಾಡೋದು !!

1 comment
Uttarpradesh Temple

Uttarpradesh Temple: ಉತ್ತರ ಪ್ರದೇಶದ (Uttar Pradesh)ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಮುಸ್ಲಿಂ ಶಾಸಕಿಯೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿ ಹೊರನಡೆದನಂತರ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಣಗೊಳಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.

ಉತ್ತರಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಜನರು ದೂಮಾರಿಯಾಗಂಜ್‌ ಶಾಸಕಿ ಸಯೀದಾ ಖಾತೂನ್‌ (Sayeda Khatoon) ಅವರನ್ನು ‘ಶತಚಂಡಿ ಮಜಾಯಜ್ಞ’ದಲ್ಲಿ ಭಾಗವಹಿಸಲು ಮನವಿ ಮಾಡಿದ ಹಿನ್ನೆಲೆ ಇಲ್ಲಿನ ಸಮಯ ಮಾತಾ ದೇವಸ್ಥಾನಕ್ಕೆ (Uttarpradesh Temple)ಮುಸ್ಲಿಂ ಶಾಸಕಿ ಭೇಟಿ ನೀಡಿದ್ದಾರೆ. ಇವರು ನಿರ್ಗಮಿಸಿದ ನಂತರ ದೇವಸ್ಥಾನವನ್ನು ಮಂತ್ರ ಜಪಿಸಿ ಗಂಗಾಜಲದಿಂದ ಶುದ್ಧಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಯೀದಾ ಅವರು ಮುಸ್ಲಿಂ ಆಗಿದ್ದು, ಗೋಮಾಂಸ ತಿನ್ನುವ ಹಿನ್ನೆಲೆ ಅವರ ಭೇಟಿಯು ಪವಿತ್ರ ಸ್ಥಳವನ್ನು ಅಶುದ್ಧಗೊಳಿಸಿದೆ ಎಂದು ಈ ಶುದ್ಧಿ ಕಾರ್ಯದ ನೇತೃತ್ವ ವಹಿಸಿದ್ದ ಸ್ಥಳೀಯ ನಗರ ಪಂಚಾಯತ್ ಮುಖ್ಯಾಧಿಕಾರಿ ಧರ್ಮರಾಜ್ ವರ್ಮಾ(Dharmaraj Verma), ಕೆಲವು ‘ಅನೀತಿವಂತ’ ಜನರು ಶಾಸಕಿ ಸಯೀದಾರನ್ನು ಆಹ್ವಾನ ನೀಡಿದ್ದರು.ಈ ಶುದ್ಧೀಕರಣದ ಬಳಿಕ ದೇವಾಲಯ ಸಂಪೂರ್ಣ ಶುದ್ಧವಾಗಿದ್ದು, ಪೂಜೆಗೆ ಸೂಕ್ತವಾಗಿದೆ ಎಂದಿದ್ದಾರೆ. ಈ ಘಟನೆಯ ಕುರಿತು ಸಯೀದಾ ಅವರು ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಕೃತ್ಯವನ್ನು ಎಂದಿಗೂ ಸಹಿಸಬಾರದು. ಜನಪ್ರತಿನಿಧಿಯಾಗಿರುವ ನಾನು ಎಲ್ಲಾ ಧರ್ಮಗಳು ಮತ್ತು ಪಂಗಡಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ಇನ್ನೂ ಮುಂದೆಯೂ ಭೇಟಿ ನೀಡುತ್ತೇನೆ. ಈ ರೀತಿಯ ಯಾವುದೇ ಕೃತ್ಯಗಳಿಂದ ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bagar Hukum: ಬೆಳ್ಳಂಬೆಳಗ್ಗೆಯೇ ರಾಜ್ಯ ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಈ ದಿನದೊಳಗೆ ನಿಮ್ಮ ಜಮೀನು ಆಗಲಿದೆ ಸಕ್ರಮ !! ಕೃಷಿ ಸಚಿವರಿಂದ ಘೋಷಣೆ

You may also like

Leave a Comment