Home » ವಿಜಯೇಂದ್ರಗೆ ತಪ್ಪಿದ ಪರಿಷತ್ ಟಿಕೆಟ್ | ಮತ್ತೊಮ್ಮೆ ಅಚ್ಚರಿಯ ಆಯ್ಕೆ ಮಾಡಿದ ಬಿಜೆಪಿ ಹೈಕಮಾಂಡ್

ವಿಜಯೇಂದ್ರಗೆ ತಪ್ಪಿದ ಪರಿಷತ್ ಟಿಕೆಟ್ | ಮತ್ತೊಮ್ಮೆ ಅಚ್ಚರಿಯ ಆಯ್ಕೆ ಮಾಡಿದ ಬಿಜೆಪಿ ಹೈಕಮಾಂಡ್

by Praveen Chennavara
0 comments

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಲಕ್ಮ್ಮಣ ಸವದಿ, ಚಲವಾದಿ ನಾರಾಯಣ ಸ್ವಾಮಿ, ಹೇಮಲತಾ ನಾಯಕ್ ಮತ್ತು ಕೇಶವಪ್ರಸಾದ್ ಬಹುತೇಕ ಫೈನಲ್ ಆಗಿದೆ ಬಿಜೆಪಿ ಮೂಲಗಳು ಹೇಳಿವೆ.

ರಾಜ್ಯದಿಂದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರೂ ಕಳುಹಿಸಲಾಗಿತ್ತು.ಆ ಹೆಸರನ್ನು ಕೈ ಬಿಡಲಾಗಿದೆ.

ಒಬಿಸಿ, ಎಸ್ ಸಿ, ಲಿಂಗಾಯತ ಮತ್ತು ಒಕ್ಕಲಿಗ ಮಹಿಳೆ, ಹೀಗೆ ಎಲ್ಲಾ ಲೆಕ್ಕಾಚಾರ ನಡೆಸಿ ಬಿಜೆಪಿ ಟಿಕೆಟ್ ನೀಡಿದೆ. ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಹೆಸರುಗಳಲ್ಲೇ ಟಿಕೆಟ್ ಅಂತಿಮ ಮಾಡಲಾಗಿದೆ. ಆದರೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸಲಾಗಿದೆ.

You may also like

Leave a Comment