ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಕಿರಾತಕನೋರ್ವ ದಲಿತರ ಬಗ್ಗೆ ಅವಾಚ್ಯವಾಗಿ ಬರೆದ ಬರಹವೊಂದು ವೈರಲ್ ಆಗುತ್ತಿದ್ದಂತೆ ದಲಿತ ಸಂಘಟನೆಗಳು, ದಲಿತ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Congress : ಕಾಂಗ್ರೆಸ್ 2 ಪಟ್ಟಿ ಬಿಡುಗಡೆ – ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ!!

‘ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮರ್ಯಾದಿ ಕೆಟ್ಟ ನಿಯತ್ತು ಇಲ್ಲದ ಜನ ದಲಿತರು, ನೀಲಿ ಶಾಲ್ ಹಾಕಿದ ಜನಗಳಿಗೆ ಬಿಟ್ಟಿ ಎಣ್ಣೆ ಸಿಕ್ಕರೆ ತಾಯಿಯನ್ನೇ ಮಾರುತ್ತಾರೆ’ ಎಂದು ಬರೆಯಲಾಗಿದ್ದು ಸದ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಸುದ್ದಿಯಲ್ಲಿರುವ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ, ಹಾಗೂ ಹೋರಾಟಗಾರರ ವಿರುದ್ಧ ಫೇಸ್ಬುಕ್ ನಲ್ಲಿ ಬರೆಯುವ ಬರದಲ್ಲಿ ದಲಿತರನ್ನು ಹಿಯಾಳಿಸಿ ಅವಾಚ್ಯವಾಗಿ ನಿಂದನೆ ನಡೆಸಲಾಗಿದೆ.

ಪ್ರವೀಣ್ ಮದ್ದಡ್ಕ ಎಂಬಾತನ ಅಕೌಂಟ್ ನಲ್ಲಿ ಇಂತಹದೊಂದು ಬರಹ ಬರೆಯಲಾಗಿದ್ದು, ಕಾನೂನು ಹೋರಾಟಕ್ಕೆ ದಲಿತ ಸಂಘಟನೆಗಳು ಮಣೆ ಹಾಕಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
