Home » Siddaramaiah vs DK Shivkumar: ಸಿಎಂ ಖುರ್ಚಿ ಬೇಕೇ ಬೇಕೆಂದು ವಾದ ಹೂಡಿ, ಒಬ್ಬರಿಗೊಬ್ಬರು ಸವಾಲ್ ಹಾಕಿಕೊಂಡ ಸಿದ್ದು- ಡಿಕೆಶಿ! ಏನಿದೆ ಇವರಿಬ್ಬರ ವಾದದಲ್ಲಿ?

Siddaramaiah vs DK Shivkumar: ಸಿಎಂ ಖುರ್ಚಿ ಬೇಕೇ ಬೇಕೆಂದು ವಾದ ಹೂಡಿ, ಒಬ್ಬರಿಗೊಬ್ಬರು ಸವಾಲ್ ಹಾಕಿಕೊಂಡ ಸಿದ್ದು- ಡಿಕೆಶಿ! ಏನಿದೆ ಇವರಿಬ್ಬರ ವಾದದಲ್ಲಿ?

by ಹೊಸಕನ್ನಡ
0 comments
Siddaramaiah vs DK Shivkumar

Siddaramaiah vs DK Shivkumar: ರಾಜ್ಯದಲ್ಲಿ ಬಹುಮತ ಪಡೆದ ಬಳಿಕ ಇದೀಗ ಸಿಎಂ(CM) ಆಯ್ಕೆ ಕಸರತ್ತು ಆರಂಭವಾಗಿದೆ. ಯಾರಾಗ್ತಾರೆ ಸಿಎಂ ಡಿಕೆಶಿನಾ?, ಸಿದ್ದರಾಮಯ್ಯನಾ? (Siddaramaiah vs DK Shivkumar) ಎಂಬೆಲ್ಲ ಪ್ರಶ್ನೆಗಳು ಇದೀಗ ಎದ್ದಿವೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌(D K Shivkumar) ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಹಂಚಿಕೆ ತಲೆ ನೋವಾಗಿ ಪರಿಣಿಸಿದೆ. ಸದ್ಯ ಇದೀಗ ಸಿದ್ದು ಮತ್ತು ಡಿಕೆಶಿ ತಾವೇಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬ ವಾದವನ್ನು ಮುಂದಿಟ್ಟು ಒಬ್ಬರಿಗೊಬ್ಬರು ಸವಾಲು ಹಾಕಿದ್ದಾರೆ.

ಡಿಕೆಶಿ ವಾದ ಏನು?
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನನ್ನ ಶ್ರಮ ಎಲ್ಲರಿಗೂ ಗೊತ್ತಿದೆ. ಅಲ್ಲದೆ ಪಕ್ಷದಲ್ಲಿ ಕೆಪಿಸಿಸಿ(KPCC) ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವ ಪದ್ಧತಿಯಿದೆ. ಅದರಂತೆ ನನ್ನನ್ನು ಮುಖ್ಯಮಂತ್ರಿ ಮಾಡುವುದು ಸರಿಯಾದ ನಿರ್ಧಾರ. ಕಾಂಗ್ರೆಸ್(Congress) ಕಷ್ಟ ಅನುಭವಿಸುವಾಗ ಎಲ್ಲರೂ ಪಕ್ಷವನ್ನು ಕೈ ಬಿಟ್ಟು ನಡೆದರು. ಆಗ ನಾನು ಪಕ್ಷದ ನೇತೃತ್ವವನ್ನು ವಹಿಸಿಕೊಂಡು ಮುನ್ನೆಡೆಸಿಕೊಂಡು ಹೋಗಿದ್ದೇನೆ. ಅಲ್ಲದೇ ಭಾರತ್ ಜೋಡೋ (Bharat Jodo Yatra), ಮೇಕೆ ದಾಟು (Mekedatu) ಸೇರಿದಂತೆ ಪಕ್ಷದ ಹಲವು ಕಾರ್ಯಕ್ರಮಗಳಿಗೆ ನನ್ನ ಕೈಯಿಂದ ಹಣ ಹಾಕಿ ಯಶಸ್ವಿ ಮಾಡಿದ್ದೇನೆ.

ಅಲ್ಲದೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆರ್ಥಿಕ ಸಂಕಷ್ಟ ನೋಡಿ ಏನು ಮಾಡಬೇಕೋ ಅದನ್ನ ಮಾಡಿದ್ದೇನೆ. ಐಟಿ, ಇಡಿ ಹಾಗೂ ಸಿಬಿಐ ಸಂಕಷ್ಟದ ನಡುವೆ ಪಕ್ಷದ ಅಭ್ಯರ್ಥಿಗಳಿಗೆ ಹಣ ಹೊಂದಿಸಿ ಕೊಡಲು ನನ್ನ ವೈಯುಕ್ತಿಕ ಆಸ್ತಿಗಳನ್ನು ಅಡವಿಟ್ಟಿದ್ದೇನೆ. ನಾನು ಅಷ್ಟೆಲ್ಲ ಶ್ರಮಪಟ್ಟು ವೈಯಕ್ತಿಕ ಹಿತಾಸಕ್ತಿಯನ್ನು ತೊರೆದಿದ್ದರ ಫಲವಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗ ನನ್ನ ಶ್ರಮಕ್ಕೆ ಪ್ರತಿ ಫಲ ಕೇಳುತ್ತಿದ್ದೇನೆ ಅಷ್ಟೇ ಎಂದು ಡಿಕೆಶಿ ವಾದ ಮಂಡಿಸಿದ್ದಾರೆ.

ಸಿದ್ದರಾಮಯ್ಯ ವಾದ ಏನು?
ಎಲ್ಲಾ ಕೆಲಸವನ್ನು ಪಕ್ಷದ ಅಧ್ಯಕ್ಷರೆ ಮಾಡಿದ್ದಾರೆ ಎನ್ನುವುದಾದರೆ, ಅವರು ಒಬ್ಬರೇ ಪ್ರಚಾರ ಮಾಡಬಹುದಿತ್ತು. ನಾನು ಚುನಾವಣಾ (Election) ಪ್ರಚಾರಕ್ಕೆ ಹೋಗುವ ಅಗತ್ಯ ಇರಲಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಜನಪರವಾಗಿ ಮಾಡಲಾದ ಕೆಲಸಗಳು ಕೈ ಹಿಡಿದಿವೆ. ನನ್ನ ವರ್ಚಸ್ಸು ಜನರನ್ನು ಕಾಂಗ್ರೆಸ್ ಕಡೆಗೆ ತಿರುಗುವಂತೆ ಮಾಡಿದೆ ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ.

ಒಬ್ಬರ ನೇತೃತ್ವದಲ್ಲಿ ಚುನಾವಣೆ ನಡೆದಿಲ್ಲ. ನಾನು ಡಿ.ಕೆ ಶಿವಕುಮಾರ್ ಸೇರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇವೆ. ನನ್ನ ಕೈಲಾದ ಮಟ್ಟಿಗೆ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಇಬ್ಬರ ಶ್ರಮದಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಾನು ಪೂರ್ಣ 5 ವರ್ಷದ ಅವಧಿಗೆ ಸಿಎಂ ಸ್ಥಾನ ಕೇಳುತ್ತಿಲ್ಲ. ನಾನು ರಾಜಿ ಆಗಿದ್ದೇನೆ, ಡಿಕೆಶಿಯೂ ರಾಜಿ ಆಗಬೇಕು ಎಂದಿದ್ದಾರೆ.

ಪಕ್ಷ ಘೋಷಿಸಿದ್ದ ಗ್ಯಾರಂಟಿಗಳು ಚುನಾವಣೆಯಲ್ಲಿ ಕೈ ಹಿಡಿದಿದೆ. ಬಡವರ ಪರವಾದ ಆ ಯೋಜನೆಗಳ ಜಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಈಡೇರಿಸುತ್ತಾರೆ ಎಂದು ಜನ ಮತ ಹಾಕಿದ್ದಾರೆ. ಅಹಿಂದ ವರ್ಗದ ಮತಗಳು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ. ನಮಗೆ ಸಿಕ್ಕ ಮತಗಳ ವಿವರವನ್ನು ಪರಿಶೀಲಿಸಿದರೆ ಈ ಬಗ್ಗೆ ಅರಿವಾಗುತ್ತದೆ. ಅಲ್ಲದೆ ಶಾಸಕರ ಹೆಚ್ಚಿನ ಬೆಂಬಲ ನನಗೆ ಇದೆ ಎನ್ನುವ ನಂಬಿಕೆ ಇದೆ. ಬೇಕಾದರೆ ಬಹಿರಂಗವಾಗಿ ಇನ್ನೊಮ್ಮೆ ಆಯ್ಕೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ:CLP meeting in Karnataka: ಶಾಸಕಾಂಗ ಸಭೆಯಲ್ಲಿ ವೀಕ್ಷಕರ ವಿರುದ್ಧವೇ ತಿರುಗಿಬಿದ್ದ ಶಾಸಕರು! ಪರಸ್ಪರ ಒಬ್ಬರ ಮೇಲೊಬ್ಬರು ಹರಿಹಾಯ್ದ ಸಿದ್ದು- ಡಿಕೆಶಿ!

You may also like

Leave a Comment