D.K shivkumar: ಕಾವೇರಿ ವಿವಾದ ಗಗನಕ್ಕೇರಿದೆ. ಇದೀಗ ಈ ಪ್ರತಿಭಟನೆ ಕರ್ನಾಟಕ ಬಂದ್ ಮಾಡೋವರೆಗೂ ತಲುಪಿದೆ. ಹೌದು,
ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಾಳೆ ಅಂದರೆ ಸೆ.29ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಇದೀಗ ನಾಳೆ ಕರ್ನಾಟಕ ಬಂದ್ (karnataka bandh) ಮಾಡೋರಿಗೆ ಬಿಗ್ ಶಾಕ್ ಬಂದೊದಗಿದೆ. ಈ ಕುರಿತು ಡಿಸಿಎಂ ಡಿಕೆಶಿ (D.K shivkumar) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂಘಟನೆಗಳು ಪ್ರತಿಭಟನೆ ಮಾಡಲಿ ಯಾವುದೇ ಅಡ್ಡಿ ಪಡಿಸಲ್ಲ, ಆದರೆ ಬಂದ್ ಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.
ಕಾವೇರಿ ವಿವಾದದ ಹಿನ್ನೆಲೆ ಕರ್ನಾಟಕ ಬಂದ್ ಗೆ ಕರೆ ನೀಡಿರೋದ್ರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಸುಪ್ರಿಂ ಕೋರ್ಟ್, ಹೈಕೋರ್ಟ್ ಬಂದ್ ವಿಚಾರವಾಗಿ ಒಂದಿಷ್ಟು ಸೂಚನೆಗಳನ್ನು ನೀಡಿವೆ. ಅದನ್ನು ಪಾಲಿಸಬೇಕು. ಹಾಗಾಗಿ ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಬಂದ್ ಗೆ ಅವಕಾಶಾವಿಲ್ಲ ಎಂದು ಹೇಳಿದರು.
ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ಇದೆ. ಸಭೆಗೆ ಅಧಿಕಾರಿಗಳು ಖುದ್ದು ಭಾಗವಹಿಸಬೇಕು ಎಂದು ಹೇಳಲಾಗಿದೆ. ತಮಿಳುನಾಡು 11,000 ಕ್ಯೂಸೆಕ್ ನೀರಿಗೆ ಬೇಡಿಕೆ ಇಟ್ಟಿದೆ. ಸದ್ಯ ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿ, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಕರ್ನಾಟಕ ಬಂದ್ ,ಕೊನೆಗೂ ಈ ಭಾಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ !!!
