Rahul gandhi : ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಗಳಲ್ಲಿ (Most Eligible Bachelor) ಒಬ್ಬರಾಗಿರುವ 53 ವರ್ಷದ ರಾಹುಲ್ ಗಾಂಧಿ (Rahul Gandhi) ಅವರ ವಿವಾಹದ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿದೆ. ಚರ್ಚೆಯಾಗುತ್ತಲೇ ಇರುತ್ತದೆ. ಸದ್ಯ ಇದೀಗ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಸ್ವತಃ ರಾಹುಲ್ ಗಾಂಧಿ ಈಗಾಗಲೇ ತಮ್ಮ ಮದುವೆಯ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ತಾನೇಕೆ ಇನ್ನೂ ಮದುವೆ ಆಗಿಲ್ಲ ಎಂದು ಗುಟ್ಟನ್ನೂ ರಟ್ಟು ಮಾಡಿದ್ದಾರೆ.
ರಾಹುಲ್ ಗಾಂಧಿ ಅವರನ್ನ ಯಾವಾಗ ಮದುವೆಯಾಗುತ್ತೀರಿ ಎಂದು ದೇಶಾದ್ಯಂತ ಅನೇಕರು ಕೇಳುತ್ತಲೇ ಇರುತ್ತಾರೆ. ದೇಶದ ಕೆಲವು ಸೆಲೆಬ್ರಿಟಿಗಳು, ನಟಿಯರು ರಾಹುಲ್ ಗಾಂಧಿಯವರನ್ನು ಮದುವೆಯಾಗಲು (Rahul Gandhi Marriage) ಸಿದ್ಧ ಎಂದು ಹೇಳುತ್ತಿರುವ ಹಲವು ಘಟನೆಗಳನ್ನು ನೋಡಿದ್ದೇವೆ. ಆದರೀಗ ಪುಟ್ಟ ಬಾಲಕಿಯೊಬ್ಬಳು ರಾಹುಲ್ ಗಾಂಧಿಗೆ ಈ ಪ್ರಶ್ನೆಯನ್ನು ಎತ್ತಿದ್ದಾಳೆ. ಹೌದು, ರಾಜಸ್ಥಾನದ ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಅಲ್ಲಿನ ವಿದ್ಯಾರ್ಥಿವೃಂದದೊಂದಿಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿಗೆ ಮತ್ತೆ ಮದುವೆ ಪ್ರಶ್ನೆ ಎದುರಾಗಿದ್ದು, ಅವರು ಅದಕ್ಕೆ ಉತ್ತರವನ್ನೂ ನೀಡಿದ್ದಾರೆ.
ಅಂದಹಾಗೆ ಸೆಪ್ಟೆಂಬರ್ 23 ರಂದು ನಡೆದ ಈ ಕಾರ್ಯಕ್ರಮದ ವೀಡಿಯೊವನ್ನು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.ಜಾತಿ ಗಣತಿ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ, ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸೇರಿದಂತೆ ತಮ್ಮ ಇಷ್ಟಾನಿಷ್ಟಗಳ ಬಗ್ಗೆ ಅವರು ಅನೇಕ ವಿಷಯಗಳನ್ನು ಹಂಚಿಕೊಂಡರು. ಈ ವೇಳೆ ನೀವು ತುಂಬಾ ಸ್ಮಾರ್ಟ್ ಮತ್ತು ಸುಂದರವಾಗಿದ್ದೀರಿ. ನೀವು ಇನ್ನೂ ಮದುವೆಯಾಗುವ ಬಗ್ಗೆ ಏಕೆ ಯೋಚಿಸಲಿಲ್ಲ?” ಎಂದು ವಿದ್ಯಾರ್ಥಿನಿಯೊಬ್ಬರು ರಾಹುಲ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ನನಗೆ ಸರಿಯಾಗಿ ಸಮಯವೇ ಸಿಗುತ್ತಿಲ್ಲ. ಹೀಗಾಗಿ ಮದುವೆಯ ಆಲೋಚನೆ ಹೋಗಲಿಲ್ಲ, ಆಗಲಿಲ್ಲ ಎಂದು ಜಾಣತನದಿಂದ ಉತ್ತರಿಸಿದ್ದಾರೆ.
ಇಷ್ಟೇ ಅಲ್ಲದೆ ಅಲ್ಲದೆ ರಾಹುಲ್ ಗಾಂಧಿ ತ್ವಚೆಗೆ ಏನು ಹಚ್ಚುತ್ತಾರೆ ಎಂಬ ಪ್ರಶ್ನೆ ಕೂಡ ಕೇಳಲಾಗಿದ್ದು, ಅದಕ್ಕೂ ಅವರು ಉತ್ತರ ನೀಡಿದ್ದಾರೆ. ನಾನು ಮುಖಕ್ಕೆ ಯಾವುದೇ ಕ್ರೀಮ್ ಅಥವಾ ಸೋಪ್ ಬಳಸುವುದಿಲ್ಲ. ಮುಖವನ್ನು ಬರೀ ನೀರಿನಿಂದ ತೊಳೆಯುತ್ತೇನೆ ಎಂದಿದ್ದಾರೆ
