Home » ಸೋಮಣ್ಣ ಕಪಾಲ ಮೋಕ್ಷ ಪ್ರಕರಣದ ಮಹಿಳೆಯ ಮೇಲೆ ಮಾನಸಿಕ ಒತ್ತಡ ಹೇರಿದ ಎಡ ಸಂಘಟನೆಗಳು, ಪೊಲೀಸ್ ದೂರು ನೀಡಿದ ಮಹಿಳೆ

ಸೋಮಣ್ಣ ಕಪಾಲ ಮೋಕ್ಷ ಪ್ರಕರಣದ ಮಹಿಳೆಯ ಮೇಲೆ ಮಾನಸಿಕ ಒತ್ತಡ ಹೇರಿದ ಎಡ ಸಂಘಟನೆಗಳು, ಪೊಲೀಸ್ ದೂರು ನೀಡಿದ ಮಹಿಳೆ

0 comments

ಸಚಿವ ಸೋಮಣ್ಣ ಮಹಿಳೆಗೆ ಕಪಾಲಮೋಕ್ಷ ಮಾಡಿದ ವಿಷಯ ಈಗ ವಿಚಿತ್ರ ತಿರುವು ಪಡೆದುಕೊಂಡಿದೆ. ಹಲ್ಲೆಗೆ ಒಳಗಾದ ಆರೋಪಕ್ಕೆ ಒಳಗಾಗಿದ್ದ ಮಹಿಳೆಯೇ ಸಂಘಟನೆಗಳ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಕಳೆದ ಬಾರಿ ಸಚಿವ ವಿ.ಸೋಮಣ್ಣ ಅವರು ಹಕ್ಕುಪತ್ರ ವಿತರಣೆಯ ಸಮಯದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ಕೆಂಪಮ್ಮ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪದ ಮೇಲೆ ಆಕೆ ಸಂಘಟನೆಗಳ ವಿರುದ್ದ ದೂರು ನೀಡಿದ್ದಾಳೆ.

ಇಬ್ಬರಿಗೆ ಜಗಳ ಮೂರನೆಯವನಿಗೆ ಲಾಭ ಎನ್ನುವ ಹಾಗೆ , ಇಲ್ಲಿ ಸಚಿವ ವಿ.ಸೋಮಣ್ಣ ಅವರ ವಿಚಾರವಾಗಿ ಮೂರನೆಯವರು ಸಿಕ್ಕ ಸಂದರ್ಭವನ್ನು ಚೆನ್ನಾಗಿಯೇ ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯ ಪಾಡು ಇಕ್ಕಟ್ಟಿಗೆ ಸಿಲುಕಿದೆ. ಹಲವು ಸಂಘಟನೆಗಳು ಮಹಿಳೆಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದೆ. ಬಹುಶಃ ಬಿಜೆಪಿಗೆ ಆಗದವರು ಮತ್ತು ಎಡ ಪಂತೀಯ ಹೋರಾಟಗಾರರು ಈ ರೀತಿ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಸಚಿವ ವಿ.ಸೋಮಣ್ಣ ಅವರು ನನ್ನ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಿ ಪೋಲಿಸರಿಗೆ ದೂರು ನೀಡು, ಇಲ್ಲದಿದ್ದರೆ ಜೀವನ ನಡೆಸಲು ಬಿಡುವುದಿಲ್ಲ. ನಿನ್ನ ಪ್ರಾಣಕ್ಕೆ ನೀನೆ ಕುತ್ತು ತಂದುಕೊಳ್ಳಬೇಡ ದೂರು ನೀಡು ಎಂದು ಹಲವಾರು ಸಂಘಟನೆಗಳು ಮನೆ ಮುಂದೆ ಬಂದು ಪ್ರಾಣ ಬೆದರಿಕೆ ಬೆದರಿಕೆ ಹಾಕಿದ್ದಾರೆ, ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಈ ಕಾರಣದಿಂದ ನನಗೆ ರಕ್ಷಣೆ ನೀಡಿ ಎಂದು ಗುಂಡ್ಲುಪೇಟೆ ತಾಲೂಕಿನ ರೈತ ಸಂಘ, ತಾಲೂಕು ನಾಯಕರ ಹಿತರಕ್ಷಣಾ ಸಮಿತಿ, ತಾಲೂಕು ದಸಂಸ, ತಾಲೂಕು ಕೆಆರ್‌ಎಸ್ ಪಾರ್ಟಿಗಳ ವಿರುದ್ಧ ಮಹಿಳೆ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

You may also like

Leave a Comment