Election : ಬೆಂಗಳೂರು: ವಿಧಾನಸಭೆ ಚುನಾವಣೆ ಮುಕ್ತಾಯವಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇದೀಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ಘೋಷಣೆಯೂ (Election Announcement) ಆಗಿದೆ. ಚುನಾವಣೆ ಆಯೋಗದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಮೇ 29 ರಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರದ ಮತದಾರರನ್ನು ಗುರುತಿಸುವ ಕಾರ್ಯ ಆರಂಭಿಸಲು ತಿಳಿಸಲಾಗಿದ್ದು, ಜೂನ್ 4ರವರೆಗೆ ಈ ಕಾರ್ಯ ನಡೆಯಲಿದೆ ಎನ್ನಲಾಗಿದೆ. ಇನ್ನು ನಾಲ್ಕು ವಾರಗಳಲ್ಲಿ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ (Election) ಇರಲಿದೆ. ಈ ವೇಳೆ ‘ ಗ್ಯಾರಂಟಿ ‘ ಗಲಾಟೆಯೇ ಪ್ರಮುಖ ಚುನಾವಣಾಸ್ತ್ರವಾಗಿದೆ.
ಜೂನ್ 5 ರಿಂದ 13 ರವರೆಗೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ನಡೆಯಲಿದ್ದು, ಜೂನ್ 14ರಿಂದ ಕರಡು ಮತದಾರರ ಪಟ್ಟಿ ಪ್ರಕಟಣೆ, ಜೂನ್ 22 ರಂದು ಆಕ್ಷೇಪಣೆ ಸಲ್ಲಿಸಲು ಅಂತಿಮ ದಿನವಾಗಿದೆ. ಮತ್ತೊಮ್ಮೆ ಪರಿಶೀಲನೆ ಕಾರ್ಯ ಜೂನ್ 25ರಂದು ನಡೆಸಲಾಗುವುದು. ಜೂನ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮೀಸಲಾತಿ ನಿಗದಿಪಡಿಸುವ ನ್ಯಾಯಾಲಯದ ಆದೇಶ ಪಾಲಿಸಲು ಹೈಕೋರ್ಟ್‌ಗೆ ಸರಕಾರ 4 ವಾರಗಳ ಸಮಯ ಕೇಳಿದೆ. ಸರಕಾರದ ಪರ ಮಾತನಾಡಿದ ನೂತನ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, “ಜಿ.ಪಂ.- ತಾ.ಪಂ. ಚುನಾವಣೆ, ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶದಲ್ಲಿನ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಅದನ್ನು ಪಾಲಿಸಲು ಸ್ವಲ್ಪ ಕಾಲಾವಕಾಶ ಬೇಕಿದೆ. ಹಾಗಾಗಿ 4 ವಾರ ಕಾಲಾವಕಾಶ ನೀಡಿ” ಎಂದು ಕೇಳಿದ್ದಾರೆ. ಸಮ್ಮತಿ ನೀಡಿದ ನ್ಯಾಯಾಲಯ ಪೀಠ, ವಿಚಾರಣೆಯನ್ನು ಜೂ. 28ಕ್ಕೆ ಮುಂದೂಡಿದೆ.
ಇನ್ನು ಜಿ.ಪಂ., ತಾ.ಪಂ. ಚುನಾವಣೆ ವಿಷಯವೇ ಪ್ರತಿಪಕ್ಷಗಳ ಚುನಾವಣಾ ಅಸ್ತ್ರ ಆಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಯಾಕೆಂದರೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಗಳು ಹೆಚ್ಚಾಗಿ ಗ್ರಾಮ್ಯ ಮತ್ತು ಹಳ್ಳಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿ ಹೆಚ್ಚಿನ ಮತದಾರರು ಕೆಳ ಮಧ್ಯಮ ವರ್ಗದವರು. ಆರ್ಥಿಕವಾಗಿ ಸದಾ ಒಂದಿಲ್ಲೊಂದು ಸಂಕಷ್ಟದಲ್ಲಿ ಇರುವ ಈ ಮಂದಿ ಸರಕಾರದಿಂದ ಸಿಗುವ ಉಚಿತಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಬಯಸದೇ ಇರುವ ಜನ. ಈಗಾಗಲೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಕೊಡಲು ತಿರುಗಾಡುವುದನ್ನು ನೋಡಿದ ಜನರು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಮಾಡುವುದಂತೂ ಪಕ್ಕಾ!.
ಹೌದು, ಕಾಂಗ್ರೆಸ್ ಪಕ್ಷವು ಜನರಿಗೆ ಗ್ಯಾರಂಟಿಗಳ ಆಸೆ ಅಮಿಷ ತೋರಿಸಿ ಗೆದ್ದು ಬಂದಿದೆ. 24 ಗಂಟೆಗಳಲ್ಲಿ ಜಾರಿ ಮಾಡುತ್ತೇವೆ ಎಂದವರು ಈಗ 16 ದಿನ ಕಳೆಯಿತು. ಇನ್ನೂ ನಿರ್ಧಾರಕ್ಕೆ ಬರಲಾಗಲಿಲ್ಲ ಕಾಂಗ್ರೆಸ್ ಪಕ್ಷಕ್ಕೆ. ಜನರು ತಾವೇ ಪ್ರತಿಭಟನೆಗೆ ತೊಡಗಿ, ಕರೆಂಟ್ ಕಟ್ಟಲ್ಲ, ಟಿಕೆಟ್ ತೆಗೆದುಕೊಳ್ಳಲ್ಲ ಎಂದು ಪ್ರತಿರೋಧ ತೋರುತ್ತಿದ್ದಾರೆ. ಸರ್ಕಾರದ ಬಳಿ ಸರಿಯಾದ ಅಂಕಿ ಅಂಶ ಇಲ್ಲದೆ ಇರೋದು ಮತ್ತು ಸಂಪನ್ಮೂಲದ ಕೊರತೆ ಗ್ಯಾರಂಟಿಯ ತಕ್ಷಣದ ಜಾರಿಗೆ ಅಡ್ಡಿಯಾಗಿದೆ.
ವಚನಭ್ರಷ್ಟತೆಯನ್ನು ಕರ್ನಾಟಕದ ಮಂದಿ ಈ ಹಿಂದೆ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಅಂದು ಕುಮಾರಸ್ವಾಮಿ ಮತ್ತು ಬಿಜೆಪಿಯ ಮಧ್ಯ ನಡೆದ ಸಮ್ಮಿಶ್ರ ಸರಕಾರದ ನಂತರ ಕುಮಾರ ಸ್ವಾಮಿಯವರ ವಚನಭ್ರಷ್ಟತೆಯಿಂದ ಬಿಜೆಪಿ ಸರಕಾರ ಬಿದ್ದು ಹೋಗಿತ್ತು. ಅಂದು ಮತದಾರರು ಬಿಜೆಪಿಗೆ ಭರ್ಜರಿ ಬೆಂಬಲ ಕೊಟ್ಟು ಬಹುಮತ ದೊರಕಿಸಿ ಕೊಟ್ಟಿದ್ದರು. ಈಗ ಎಲ್ಲರಿಗೂ ಫ್ರೀ ಅಂದಿದ್ದ ಕಾಂಗ್ರೆಸ್, ಇದೀಗ ಪ್ಲೇಟ್ ಚೇಂಜ್ ಮಾಡುತ್ತಿದೆ, ಕಂಡೀಷನ್ ಗಳ ಬಗ್ಗೆ ಮಾತಾಡುತ್ತಿದೆ. ಬಿಜೆಪಿ 15 ಲಕ್ಷ ಕೊಡುತ್ತೆ ಅಂದಿದ್ರು ಕೊಡ್ತಾ ಅಂತ ಜನರನ್ನು ಉಲ್ಟಾ ಕೇಳುತ್ತಿದ್ದಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. ಹೀಗಾಗಿ ವಚನಭೃಷ್ಟ ಕಾಂಗ್ರೆಸ್ ಅನ್ನು ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಿರಸ್ಕರಿಸುವುದು, ಆ ಸೂಚನೆ ಸಿಕ್ಕಿರೋದು ಸ್ಪಷ್ಟ!.
ಇದನ್ನೂ ಓದಿ: Shocking news: ಕರೆಂಟ್ ಬಿಲ್ ಕಟ್ಟದ ರಾಜ್ಯದ ಜನತೆಗೆ ಶಾಕ್ ನೀಡಿದ ರಾಜ್ಯ ಸರ್ಕಾರ! ಮುಖ್ಯಮಂತ್ರಿಗಳೇ ಈ ನಿಮ್ಮ ನಡೆ ಸರಿಯೇ?
