Home » Krushimela: ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ 4 ದಿನ ಕೃಷಿ ಮೇಳ

Krushimela: ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ 4 ದಿನ ಕೃಷಿ ಮೇಳ

0 comments

Krushimela: ಬೆಂಗಳೂರಿನ (Bengaluru ) ಜಿಕೆವಿಕೆಯಲ್ಲಿ (GKVK ) ಇಂದಿನಿಂದ 4 ದಿನಗಳ ಕಾಲ “ಸಮೃದ್ಧ ಕೃಷಿ – ವಿಕಸಿತ ಭಾರತ” ಎಂಬ ಘೋಷವಾಕ್ಯದೊಂದಿಗೆ ಕೃಷಿ ಮೇಳ ನಡೆಯಲಿದೆ.ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಗುರುವಾರ ಬೆಳಗ್ಗೆ 11 ಗಂಟೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕೃಷಿ, ತೋಟಗಾರಿಕೆ, ರೇಷ್ಮೆ ಅರಣ್ಯ ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೇಳಕ್ಕೆ ಆಗಮಿಸುವವರಿಗೆ 30 ಎಕರೆ ಜಾಗದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಜಾಗದಿಂದ ಮೇಳದ ಜಾಗಕ್ಕೆ ಬರಲು ಅನುಕೂಲವಾಗುವಂತೆ ಉಚಿತ ವಾಹನದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುತ್ತಿದೆ.ಕೃಷಿ ಮೇಳದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಐದು ವಿವಿಧ ಬೆಳೆಗಳ ತಳಿಗಳು ಧಾನ್ಯ ಜೋಳದ ತಳಿ ಸಿಎನ್‌ಜಿಎಸ್-1, ಸೂರ್ಯಕಾಂತಿ ಸಂಕರಣ ತಳಿ ಕೆಬಿಎಸ್‌ಹೆಚ್-88, ಹರಳು ಸಂಕರಣ ತಳಿ ಬಿಸಿಹೆಚ್-162, ಕಪ್ಪು ಅರಿಶಿಣ ತಳಿ ಸಿಹೆಚ್‌ಎನ್‌ಬಿಟಿ-1 ಮತ್ತು ಅರಿಶಿಣ ತಳಿ ಐಐಎಸ್‌ಆ‌ರ್ ಪ್ರತಿಭಾ ಹಾಗೂ 36 ನೂತನ ತಾಂತ್ರಿಕತೆಗಳನ್ನು ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮದಲಿ ಬಿಡುಗಡೆಗೊಳಿಸಲಾಗುವುದು. ಈಗಾಗಲೇಆಧುನಿಕ ಕೃಷಿಯ ಐದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಬೆಳೆಸಲಾಗಿದ್ದು, ರೈತರು ಬೆಳೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಬಿತ್ತನೆ ಬೀಜಗಳೂ ಸಹ ರೈತರಿಗೆ ಲಭ್ಯವಿರಲಿವೆ

You may also like