Home » Actor Suraj: ನಿಶ್ಚಿತಾರ್ಥದಂದೇ ಭೀಕರ ಅಪಘಾತದಲ್ಲಿ ಸಾವಿಗೀಡಾದ ನಟ

Actor Suraj: ನಿಶ್ಚಿತಾರ್ಥದಂದೇ ಭೀಕರ ಅಪಘಾತದಲ್ಲಿ ಸಾವಿಗೀಡಾದ ನಟ

2 comments
Actor Suraj

Actor Suraj: ನಟ ಸೂರಜ್‌ ಮೆಹರ್‌ ಬು.10 ರ ತಡರಾತ್ರಿ ಸಿನಿಮಾ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್‌ ಆಗುತ್ತಿದ್ದ ಸಂದರ್ಭದಲ್ಲಿ ಪಿಕ್‌ಅಪ್‌ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೂರಜ್‌ ಕೊನೆಯುಸಿರೆಳೆದಿರುವ ಘಟನೆಯೊಂದು ರಾಯ್‌ಪುರದಲ್ಲಿ ನಡೆದಿದೆ.

ಇದನ್ನೂ ಓದಿ: IRCTC: ತಿರುಪತಿಗೆ ಹೋಗ್ತೀರಾ? ಸಿಹಿ ಸುದ್ದಿ ನಿಮಗಾಗಿ, ಇಲ್ಲಿದೆ ಲೋಕಲ್ ಟೂರ್ ಪ್ಯಾಕೇಜ್

ನಟ ಸೂರಜ್ ಮೆಹರ್‌ ನಿಶ್ಚಿತಾರ್ಥ ನೆರವೇರಿದ ದಿನವೇ ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿರುವುದು ಎಂದು ತಿಳಿದು ಬಂದಿದೆ. ಸೂರಜ್‌ ಅವರಿಗೆ 40 ವರ್ಷ ವಯಸ್ಸಾಗಿತ್ತು. ಇವರ ಕಾರು ಪಿಕ್‌ಅಪ್‌ ಟ್ರಕ್‌ಗೆ ಡಿಕ್ಕಿಹೊಡೆದಿತ್ತು. ಇವರು “ಆಖ್ರಿ ಫೈಸ್ಲಾ” ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ವಾಪಾಸು ಬರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸೂರಜ್‌ ಅವರ ಕಾರು ಚಾಲಕ ಕೂಡಾ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Zodiac Signs: ಲಕ್ ಅಂದ್ರೆ ಇವ್ರದ್ದೆ ನೋಡಿ, ಸಿಗುತ್ತೆ ಕೈ ತುಂಬಾ ಹಣ

ಸೂರಜ್‌ ಅವರು ಚತ್ತೀಸ್‌ಗಢ ಸಿನಿಮಾದಲ್ಲಿ ವಿಲನ್‌ ಪಾತ್ರ ಮಾಡುವುದರ ಮೂಲಕ ಚಿರಪರಿಚಿತರಾಗಿದ್ದರು.

You may also like

Leave a Comment