Home » Anand Mahindra: ಮಹಿಳೆ ಮಾಡಿದ ಐಸ್ ಕ್ರೀಂ ನೋಡಿ ಆನಂದ್ ಮಹೀಂದ್ರಾ ಫಿದಾ!! ಇಲ್ಲಿದೆ ನೋಡಿ ವಿಡಿಯೋ

Anand Mahindra: ಮಹಿಳೆ ಮಾಡಿದ ಐಸ್ ಕ್ರೀಂ ನೋಡಿ ಆನಂದ್ ಮಹೀಂದ್ರಾ ಫಿದಾ!! ಇಲ್ಲಿದೆ ನೋಡಿ ವಿಡಿಯೋ

0 comments
Anand Mahindra

Anand Mahindra: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ತಮ್ಮ ಟ್ವಿಟರ್ (Twitter) ಖಾತೆಯಲ್ಲಿ, ಏನಾದರೂ ವಿಶಿಷ್ಟ, ವಿಭಿನ್ನ ವಿಡಿಯೋಗಳನ್ನು ಶೇರ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಅಂತೆಯೇ ಇದೀಗ ಆನಂದ್ ಮಹೀಂದ್ರಾ ಅವರು ಮತ್ತೊಂದು ಪೋಸ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (viral) ಆಗಿದೆ.

ಆನಂದ್ ಮಹೀಂದ್ರಾ ಅವರು ಮಹಿಳೆಯೊಬ್ಬರು “ದೇಸಿ ಜುಗಾಡ್” ಐಸ್ ಕ್ರೀಂ ತಯಾರಿಸುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಲ್ಲದೆ, ಮಹಿಳೆ ವಿಶಿಷ್ಟ ಶೈಲಿಯಲ್ಲಿ, ತನ್ನ ಬುದ್ಧಿವಂತಿಕೆಯಿಂದ ತಯಾರಿಸುವ ಐಸ್ ಕ್ರೀಂ ಕಂಡು ಬೆರಗಾಗಿದ್ದಾರೆ. ಈ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ!!!.

ವಿಡಿಯೋದಲ್ಲಿ, ಮಹಿಳೆ (women) ಯಾವುದೇ ದೊಡ್ಡ ಯಂತ್ರಗಳು ಅಥವಾ ಸಲಕರಣೆಗಳನ್ನು ಬಳಸದೆಯೇ ಐಸ್ ಕ್ರೀಂ (ice cream) ತಯಾರಿಸಿದ್ದಾರೆ. ಸಾಮಾನ್ಯ ಅಡುಗೆ ಸಾಮಾನುಗಳನ್ನು ಬಳಸಿ ಐಸ್ ಕ್ರೀಮ್ ತಯಾರಿಸಿದ್ದಾರೆ. ಮಹಿಳೆ ಬೇಯಿಸಿದ ಮತ್ತು ದಪ್ಪನಾದ ಹಾಲನ್ನು ಮೊದಲು ತಯಾರಿಸುತ್ತಾರೆ. ನಂತರ ಅದನ್ನು ಸಿಲಿಂಡರಾಕಾರದ ಪಾತ್ರೆಯಲ್ಲಿ ಅದನ್ನು ಹಾಕುತ್ತಾರೆ. ಆ ಕಂಟೇನರ್ ಅನ್ನು ಮತ್ತೊಂದು ದೊಡ್ಡ ಪಾತ್ರೆಯೊಳಗೆ ಇರಿಸುತ್ತಾರೆ. ತಾತ್ಕಾಲಿಕ ಫ್ರೀಜರ್ ಗಾಗಿ, ದೊಡ್ಡ ಐಸ್ ತುಂಡುಗಳನ್ನು ಪಾತ್ರೆಗಳ ಸುತ್ತಲು ಹಾಕುತ್ತಾರೆ. ನಂತರ ಹಾಲು ತುಂಬಿದ ಪಾತ್ರೆಗೆ ಹಗ್ಗ ಕಟ್ಟಿ, ಹಗ್ಗವನ್ನು ಫ್ಯಾನ್‌ಗೆ ಕಟ್ಟುತ್ತಾಳೆ.
ಬಳಿಕ ಆಕೆ ಸ್ವಿಚ್ ಆನ್ ಮಾಡಿದಾಗ, ಕಂಟೇನರ್ ಹಗ್ಗದೊಂದಿಗೆ ತಿರುಗುತ್ತದೆ. ಸ್ವಲ್ಪ ಸಮಯದ ನಂತರ ಇದರಿಂದ ಐಸ್ ಕ್ರೀಮ್ ಸಿದ್ಧವಾಗುತ್ತದೆ.

ಸದ್ಯ ಮಹಿಳೆಯ ಜಾಣತನವನ್ನು ಮಹೀಂದ್ರಾ ಮಾತ್ರವಲ್ಲದೆ, ನೆಟ್ಟಿಗರೂ ಮೆಚ್ಚಿಕೊಂಡಿದ್ದಾರೆ. ಒಬ್ಬರು ನೆಟ್ಟಿಗರು, “ನಿಜವಾದ ವಿದ್ಯಾವಂತ ವ್ಯಕ್ತಿಯು ಜ್ಞಾನವನ್ನು ಗಮನಿಸುತ್ತಾನೆ, ಅರ್ಥಮಾಡಿಕೊಳ್ಳುತ್ತಾನೆ ಮತ್ತು ಅನ್ವಯಿಸುತ್ತಾನೆ. ಸರಿಯಾದ ವೇದಿಕೆಯೊಂದಿಗೆ ಹಂಚಿಕೊಳ್ಳುತ್ತಾನೆ” ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, “ಗೃಹಿಣಿ ಪಟ್ಟ ಕಠಿಣ ಪರಿಶ್ರಮ ಶ್ಲಾಘನೀಯ” ಎಂದಿದ್ದಾರೆ. ಸದ್ಯ ಈ ವಿಡಿಯೋ 957,100 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 27,600 ಲೈಕ್​ಗಳು ಮತ್ತು 3,166 ರೀಟ್ವೀಟ್​​ ಬಂದಿದೆ.

You may also like

Leave a Comment