Home » Babri Masjid: ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ಟುತ್ತೇವೆ; ಬಾಬರಿ ಮಸೀದಿ ಮರೆಯೋದಿಲ್ಲ ಎಂದು ಸೈಯದ್‌!!!

Babri Masjid: ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ಟುತ್ತೇವೆ; ಬಾಬರಿ ಮಸೀದಿ ಮರೆಯೋದಿಲ್ಲ ಎಂದು ಸೈಯದ್‌!!!

0 comments
Babri Masjid

Kalburgi: ಸಾಮಾಜಿಕ ಜಾಲತಾಣದಲ್ಲಿ ಕಲಬುರಗಿಯ ಮುಸ್ಲಿಂ ಯುವಕನೋರ್ವ ” ನಾವು ಬಾಬರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟು ಸಮಯ ಕಳೆದರೂ ಸರಿ ಬಾಬರಿ ಮಸೀದಿಯಲ್ಲಿದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ದೊಡ್ಡ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಸಾಮಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ: Taxi Rate: ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ!!!

ಕಲಬುರಗಿಯ ಇಕ್ಬಾಲ್ ಕಾಲೋನಿ ನಿವಾಸಿ ಸೈಯದ್ ಮೊಹಿನ್ ಫೈಸಲ್ (23) ಎಂದು ಹೇಳಲಾಗಿದೆ.

ರಾಮ ಮಂದಿರ ಉದ್ಘಾಟನೆಯ ವೇಳೆ ಕಲಬುರಗಿಯ ಮುಸ್ಲಿಂ ಯುವಕನೊಬ್ಬ ನಾವು ಎಷ್ಟೇ ಸಮಯವಾದರೂ ಸರಿ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ. ಬಾಬರಿ ಮಸೀದಿ ನಮಗೆ ಅತ್ಯಂತ ಮಹತ್ವವಾದದುದು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ (ಹಳೆಯ ಟ್ವಿಟಟರ್)ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ, ಇದೀಗ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಆಮೇಲೆ ಬಿಟ್ಟಿದ್ದರು. ಆದರೆ, ಈಗ ಯುವಕನ ವಿರುದ್ಧ ಎಫ್‌ಐಅರ್ ದಾಖಲು ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿರುವ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಹಾಳು ಮಾಡುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯುವಕನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ಸಂಬಂಧ ವಿರುದ್ಧ ನ್ಯೂ ರಾಘವೇಂದ್ರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(A), 295(A) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

You may also like

Leave a Comment