Discount On Dress: ಹೆಣ್ಣೆಂದರೆ(Women) ಆಕೆ ಮನೆಯೊಳಗಿನ ಮನೆ ಹೊರಗಿನ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಕಲೆಯನ್ನು ಸಿದ್ದಿಸಿಕೊಂಡವಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮನೆ(Home) ಎಂದ ಮೇಲೆ ಹಣಕಾಸಿನ (Financial Matter)ವಿಷಯದಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಿ ಹಣ ಕೂಡಿಟ್ಟು ನಾಳಿನ ಭವಿಷ್ಯದ(Future) ಯೋಚನೆಯಲ್ಲಿ ಮುಳುಗುವ ಆಕೆಗೆ ಪ್ರತೀ ರೂಪಾಯಿ ಕೂಡ ಅತ್ಯಮೂಲ್ಯ. ಹೀಗಾಗಿ, ಹಣ(Money) ಉಳಿಸುವ ಪ್ರತಿ ಮೂಲದ ಅನ್ವೇಷಣೆ ಮಾಡೋದು ಕಾಮನ್. ಇದೇ ರೀತಿ, ಯಾವುದೇ ಅಂಗಡಿಗೆ ಮಹಿಳೆ ಕಾಲಿಟ್ಟರೆ ಚೌಕಾಸಿ(Bargaining) ಮಾಡದೇ ಹೋಗಲು ಸಾಧ್ಯವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಾರೆ.
ಮಾತಿನ ವಿಷಯದಲ್ಲಿ ಮಹಿಳೆಯರ ಮುಂದೆ ಪುರುಷರು(Men) ರಾಜಿಯಾಗೋದು ಸುಲಭದ ಮಾತಲ್ಲ. ಅದರಲ್ಲಿಯೂ ಚೌಕಾಸಿ ಇಲ್ಲವೇ ಜಗಳದ ವಿಚಾರಕ್ಕೆ ಬಂದಾಗ ಪುರುಷರು ಒಂದು ವೇಳೆ ಸುಮ್ಮನಾಗಬಹುದೇನೋ!! ಆದರೆ ಹೆಂಗಸರು ಹಾಗಲ್ಲ. ತಾವು ಅಂದುಕೊಂಡ ಬೆಲೆಗೆ ವಸ್ತು ಖರೀದಿ ಮಾಡದೇ ಜಪ್ಪಯ್ಯ ಅಂದರೂ ಅಲ್ಲಿಂದ ಕದಲಲ್ಲ. ಎಷ್ಟೋ ಬಾರಿ ಅಂಗಡಿಯವರೇ ಇಲ್ಲದ ತಗಾದೆ ಯಾಕೆಂದು ಮಹಿಳೆಯರು ಹೇಳಿದ ಬೆಲೆಗೆ ಕೊಟ್ಟು ಸುಮ್ಮನಾಗುತ್ತಾರೆ. ಕೆಲವೊಮ್ಮೆ ಮಹಿಳೆಯರು ಏನೇನೋ ಹರಸಾಹಸ ಪಟ್ಟರೂ ಕೂಡ ಚೌಕಾಸಿ(Bargain) ಮಾಡುವಲ್ಲಿ ಸೋತು ಬಿಡುತ್ತಾರೆ. ಆಗ ಹ್ಯಾಪೆ ಮೊರೆ ಹಾಕಿಕೊಂಡು ಅಂಗಡಿಯವನಿಗೆ ಮನದಲ್ಲೇ ಸಹಸ್ರ ನಾಮರ್ಚನೆ ಮಾಡಿಕೊಂಡು ಹೋಗುವುದುಂಟು. ಇದೇ ರೀತಿಯ ಹಾಸ್ಯಮಯ(Comedy) ಪ್ರಸಂಗವೊಂದು ವರದಿಯಾಗಿದೆ.
ಟ್ವಿಟರ್(Twitter) ಬಳಕೆಗಾರ್ತಿ ಮೀಹಾ ತಮ್ಮ ಸಹೋದರಿ ಚೌಕಾಸಿ ಮಾಡಲು ಹೋಗಿದ್ದು, ಹೇಗೆ ಅವರ ಯೋಜನೆ ತಲೆ ಕೆಳಗಾಗಿ ಬಿಟ್ಟಿದೆ ಎಂಬುದನ್ನು ವಿವರಿಸಿದ್ದಾರೆ. ನೀವೇನಾದರೂ ಚೌಕಾಸಿ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಈ ವಿಚಾರ ನೀವು ಕೇಳಲೇಬೇಕು. ಮೀಹಾ ಮತ್ತು ಅವರ ಸಹೋದರಿ ಬಟ್ಟೆ ಖರೀದಿ ಮಾಡಲು ಒಂದು ಮಳಿಗೆಗೆ ಭೇಟಿ ನೀಡಿದ್ದು, ಈ ವೇಳೆ ಮೀಹಾ ಅವರ ಸಹೋದರಿ ಬಟ್ಟೆ ಖರೀದಿ ಮಾಡಿದ ಬಳಿಕ ಚೌಕಾಸಿ (Discount On Dress)ಮಾಡಲು ಮುಂದಾಗಿದ್ದಾರೆ. ತಾನು ಈ ಬಟ್ಟೆ ಖರೀದಿ ಮಾಡುವ ಅಂಗಡಿಯ ಸುದೀರ್ಘ ಅವಧಿಯ ಗ್ರಾಹಕಿಯಾಗಿದ್ದು, ಹೀಗಾಗಿ ನೀವು ರಿಯಾಯಿತಿ ನೀಡಲೇಬೇಕು ಎಂದೆಲ್ಲ ಹೇಳಿಕೊಂಡಿದ್ದಾರೆ.ಆದರೆ ಯಾವಾಗಲೂ ಸುಳ್ಳು ಹೇಳುವ ಮುನ್ನ ಜಾಗ್ರತೆ ವಹಿಸಬೇಕು ಎಂದು ಬಲ್ಲವರು ಇದಕ್ಕೆ ಹೇಳಿರಬೇಕೇನೋ?
ಮಹಿಳೆಯ ಮಾತನ್ನು ಕೇಳಿದ ಅಂಗಡಿಯಾತ ಒಂದು ಡಬ್ಬಿ ಸಿಹಿ ತಿನಿಸನ್ನು ಮಹಿಳೆಗೆ ಕೊಟ್ಟು, ತನ್ನ ಅಂಗಡಿ ನಿನ್ನೆಯಷ್ಟೇ ತೆರೆಯಲ್ಪಟ್ಟಿದೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಸಹೋದರಿಯರಿಬ್ಬರು ಬಟ್ಟೆಯ ನೈಜ ಬೆಲೆಗೆ ಕೊಂಡು ಕೊಂಡಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ತಮ್ಮ ಚೌಕಾಸಿ ಕಲೆಗೆ ತಮ್ಮನ್ನೇ ಹಳಿದುಕೊಂಡು ಮನೆಗೆ ಮೀಹಾ ಮತ್ತು ಅವರ ಸಹೋದಾರಿ ಮನೆಗೆ ಹಿಂತಿರುಗಿದ್ದಾರೆ. ಸದ್ಯ, ಈ ಸಂಗತಿಯನ್ನು ಮೀಹಾ ಸಾಮಾಜಿಕ ಜಾಲತಾಣದಲ್ಲಿ(Social Media)ಹಂಚಿಕೊಂಡಿದ್ದಾರೆ.
