ಭಾರತವು ತನ್ನ 5,000 ಕಿ. ಮೀ. ವ್ಯಾಪ್ತಿಯ ಅಗ್ನಿ-5 ಅಂತರ ಖಂಡೀಯ ಕ್ಷಿಪಣಿಯ ಪ್ರಮುಖ ಹಾರಾಟ-ಪರೀಕ್ಷೆಯನ್ನು ಸೋಮವಾರ ನಡೆಸಿದ್ದು, ಈ ಹಿನ್ನೆಲೆ ಕೆಲವೇ ವಾರಗಳ ಮೊದಲು, ಚೀನಾ ಭಾರತದ ಮಿಸೈಲ್ ಪರೀಕ್ಷೆಯ ಮೇಲೆ ಜಾಸೂಸಿ ಮಾಡಲು ತನ್ನ ಎರಡನೇ ಸಂಶೋಧನಾ ನೌಕೆಯನ್ನು ಭಾರತೀಯ ತೀರಗಳಿಗೆ ಕಳುಹಿಸಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Putturu: ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ಇನ್ನಿಲ್ಲ
ಎಂ ಐ ಆರ್ ವಿ ತಂತ್ರಜ್ಞಾನ ಬಳಸಿ ತಯಾರಿಸಲಾದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟದ ಪರೀಕ್ಷೆ ಯಶಸ್ವಿಯಾಗಿದ್ದು, ಭಾರತದ ಮಿಷನ್ ದಿವ್ಯಾಸ್ತ್ರ ಪರೀಕ್ಷೆಯೊಂದಿಗೆ ಭಾರತವು ಚೀನಾ, ಯುಎಸ್, ರಷ್ಯಾ, ಫ್ರಾನ್ಸ್ ಮತ್ತು ಯುಕೆ- ಮಾತ್ರ ಹೊಂದಿದ್ದ ತಂತ್ರಜ್ಞಾನವನ್ನು ಭಾರತ ಹೊಂದುವ ಮೂಲಕ ಈ ತಂತ್ರಜ್ಞಾನವನ್ನು ಒಳಗೊಂಡ 6ನೇ ದೇಶವಾಗಿದೆ.
ಕಡಲ ವಿಶ್ಲೇಷಣಾ ಪೂರೈಕೆದಾರ ಮೆರೈನ್ ಟ್ರಾಫಿಕ್ನ ಪ್ರಕಾರ, ಚೀನಾದ ಹಡಗು ‘ಕ್ಸಿಯಾಂಗ್ ಯಾಂಗ್ ಹಾಂಗ್ 01’ ಫೆಬ್ರವರಿ 2023 ರಂದು ಚೀನಾದ ಕಿಂಗ್ಡಾವೊ ಬಂದರಿನಿಂದ ಹೊರಟು, ಭಾರತದ ಪರಮಾಣು ಚಾಲಿತ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳ ನೆಲೆಯನ್ನು ಹೊಂದಿರುವ ವಿಶಾಖಪಟ್ಟಣಂ ಕರಾವಳಿಯಿಂದ ಸುಮಾರು 480 ಕಿ. ಮೀ. ದೂರದಲ್ಲಿರುವ 4,425 ಟನ್ ತೂಕದ ಹಡಗು ಈಗ 260 ನಾಟಿಕಲ್ ಮೈಲಿಗಿಂತ ಕಡಿಮೆ ದೂರದಲ್ಲಿದೆ ಎಂದು (ಓಪನ್ ಸೋರ್ಸ್) ಗುಪ್ತಚರ ತಜ್ಞ ಡೇಮಿಯನ್ ಸೈಮನ್ ಭಾನುವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತಿಳಿಸಿದ್ದಾರೆ. ಕ್ಸಿಯಾನ್ ಯಾಂಗ್ ಹಾಂಗ್ 1 ಸಂಶೋಧನೆ ನೌಕೆ ಬಂಗಾಳ ಕೊಲ್ಲಿಗೆ ಪ್ರವೇಶಿಸಿರುವುದನ್ನು ಖಚಿತಪಡಿಸಿದ್ದಾರೆ.
ಕ್ಷಿಪಣಿ ಪರೀಕ್ಷೆಯ ಸಂಭವನೀಯತೆಯ ಬಗ್ಗೆ ತನ್ನ ನೆರೆಹೊರೆಯವರಿಗೆ ಎಚ್ಚರಿಕೆ ನೀಡಲು ಮಾರ್ಚ್ 7 ರಂದು ಭಾರತವು ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರ ಪ್ರದೇಶದ (ಐಒಆರ್) ಮೇಲೆ 3,550 ಕಿ. ಮೀ. ವ್ಯಾಪ್ತಿಯ ಕ್ಷಿಪಣಿ ಅಥವಾ ರಾಕೆಟ್ ಪರೀಕ್ಷೆಯ ಮೊದಲು ಕಡ್ಡಾಯವಾದ ನೋಟಮ್-ನೋಟಿಸ್ ಟು ಏರ್ ಮಿಷನ್ ಅನ್ನು ನೀಡಿತ್ತು. ಚೀನಾದ ‘ಪತ್ತೇದಾರಿ’ ಹಡಗು ಸಂಪೂರ್ಣ ಕ್ಷಿಪಣಿ ಪರೀಕ್ಷೆಯನ್ನು ವೀಕ್ಷಿಸಿರುವ ಸಾಧ್ಯತೆಯಿದೆ ಮತ್ತು ಕ್ಷಿಪಣಿಯ ವ್ಯಾಪ್ತಿ ಮತ್ತು ಸಾಮರ್ಥ್ಯದ ದತ್ತಾಂಶವನ್ನು ಸಂಗ್ರಹಿಸಬಹುದು ಎಂದು ಮೂಲಗಳು ತಿಳಿಸಿವೆ.
ಈ ಹಡಗುಗಳು ಸಂಶೋಧನಾ ಉದ್ದೇಶಗಳಿಗಾಗಿ ಮಾತ್ರ ಎಂದು ಚೀನಾ ಹೇಳುತ್ತದೆಯಾದರೂ, ಚೀನಾದ ‘ವೈಜ್ಞಾನಿಕ ಸಂಶೋಧನಾ’ ಹಡಗುಗಳ ಸಮೂಹವು ಮಿಲಿಟರಿ ಉದ್ದೇಶಗಳಿಗಾಗಿ, ವಿಶೇಷವಾಗಿ ಜಲಾಂತರ್ಗಾಮಿ ಕಾರ್ಯಾಚರಣೆಗಳಿಗಾಗಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪ್ರತಿಸ್ಪರ್ಧಿಗಳ ನೌಕಾ ಸ್ವತ್ತುಗಳ ಬಗ್ಗೆ ಸೂಕ್ಷ್ಮ ದತ್ತಾಂಶವನ್ನು ಸಂಗ್ರಹಿಸುತ್ತಿದೆ ಎಂದು ಭಾರತ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳು ಕಳವಳ ವ್ಯಕ್ತಪಡಿಸಿವೆ.
