Road Romeo: ಪ್ರಣಯ ಜೋಡಿಗಳಿಗೆ ಲೋಕದ ಚಿಂತೆಯಿಲ್ಲ ಅನ್ನೋದು ಕೇಳಿದ್ದೇವೆ. ತಮ್ಮ ಪಾಡಿಗೆ ತಾವು ಪ್ರೀತಿಯಲ್ಲಿ ಮುಳುಗಿ ಹೋಗಿರುತ್ತಾರೆ. ಇಂತಹ ದೃಶ್ಯಗಳು ಆಗಾಗ ವೈರಲ್ ಆಗುವುದು ಸಹಜ. ಇದೀಗ ಇಲ್ಲೊಂದು ದೃಶ್ಯ ನೀವು ನೋಡಬಹುದು.
ಹೌದು, ಈ ಬಾರಿ ಸ್ಕೂಟರ್ ನಲ್ಲಿ ರೋಡ್ ರೋಮಿಯೋ (Road Romeo) ಜೋಡಿಯೊಂದು ಹೋಗುವಾಗ ಹುಡುಗ ಒಂದು ಕೈಯಲ್ಲಿ ಸ್ಕೂಟರ್ ಚಲಾಯಿಸುತ್ತ ಇನ್ನೊಂದು ಕೈಯಲ್ಲಿ ಯುವತಿಯನ್ನು ಅಪ್ಪಿಕೊಂಡು ಮುದ್ದಾಡಿದ್ದಾನೆ. ಈ ವಿಡಿಯೋವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿದ್ದಾರೆ.
ಶಾಲು ಕಶ್ಯಪ್ ತನೇಜಾ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಶೇರ್ ಮಾಡಿದ್ದು, ಈಗಾಗಲೇ ವಿಡಿಯೊ 6.5 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಕಂಡು ವೈರಲ್ ಆಗಿದೆ.
ಒಟ್ಟಿನಲ್ಲಿ ಇಂತವರಿಂದ ನಮಗೂ ಅಪಾಯ ತಪ್ಪಿದ್ದಲ್ಲ. ಇಂತಹ ಹಲವಾರು ರೋಡ್ ರೋಮಿಯೋಗಳು ವೈರಲ್ ಆಗುತ್ತಲೇ ಇದ್ದು, ಇಂತವರ ಮೇಲೆ ಕ್ರಮ ಕೈಗೊಳ್ಳದೆ ಇದ್ದಾರೆ ರಸ್ತೆ ಅಪಘಾತ ಕಟ್ಟಿಟ್ಟ ಬುತ್ತಿಯೇ ಸರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Rakhi Sawant: ಆದಿಲ್ ಖಾನ್ ಮೈಸೂರು ಜೈಲಿನಿಂದಲೇ ರಾಖಿ ಸಾವಂತ್ ನ್ನು ಕೊಲ್ಲಲು ಪ್ಲ್ಯಾನ್!? ಏನಿದು ಆರೋಪ???
