Home » Couple Lip Kiss In Delhi Metro : ಮೆಟ್ರೋದಲ್ಲಿ ಎಲ್ಲರೆದುರೇ ಲಿಪ್ ಲಾಕ್ ಮಾಡಿದ ಜೋಡಿಯ ವೀಡಿಯೋ ವೈರಲ್!

Couple Lip Kiss In Delhi Metro : ಮೆಟ್ರೋದಲ್ಲಿ ಎಲ್ಲರೆದುರೇ ಲಿಪ್ ಲಾಕ್ ಮಾಡಿದ ಜೋಡಿಯ ವೀಡಿಯೋ ವೈರಲ್!

5 comments
Couple Lip Kiss

Couple Lip Kiss In Delhi Metro :ಸೋಷಿಯಲ್ ಮೀಡಿಯಾದಲ್ಲಿ (Social Media)ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ವೀಡಿಯೋದಲ್ಲಿ (Viral Video) ಪ್ರೇಮಿಗಳು ಮೆಟ್ರೋದಲ್ಲಿ ಮಾಡಿದ ಪ್ರಹಸನವೊಂದು ಎಲ್ಲೆಡೆ ವೈರಲ್‌ ಆಗಿದೆ.

ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋದಲ್ಲಿ ನಡೆಯುವ ವಿಚಾರಗಳು ಹೆಚ್ಚು ಸುದ್ದಿಯಾಗುತ್ತಿದೆ. ಇದೀಗ, ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳು (Lovers) ಮೆಟ್ರೋದಲ್ಲಿ ನಿಂತು ಮುತ್ತಿನ ಸುರಿಮಳೆ ಗೈಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ(Social Media)ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಚಲಿಸುವ ಮೆಟ್ರೋದಲ್ಲಿ ಹುಡುಗ – ಹುಡುಗಿ ಬಹಿರಂಗವಾಗಿ (Lip Kiss)ರೊಮ್ಯಾನ್ಸ್ ಮಾಡುವ ದೃಶ್ಯದಲ್ಲಿ ಕಾಣಬಹುದು.

ಇದು ದೆಹಲಿ ಮೆಟ್ರೋದ ವಿಡಿಯೋ ಎಂದು ಹೇಳಲಾಗುತ್ತಿದ್ದು, ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಯುವಕ ಮತ್ತು ಯುವತಿ ಮೆಟ್ರೋದಲ್ಲಿ ಪಿಲ್ಲರ್‌ನ ಆಶ್ರಯದಲ್ಲಿ ನಿಂತು ಸುತ್ತಮುತ್ತಲೂ ಜನರು ಇದ್ದರೂ ಕೂಡ ಕ್ಯಾರೇ ಎನ್ನದೇ ಮುತ್ತಿನ ಮತ್ತೇ ಗಮ್ಮತ್ತು ಎಂಬಂತೆ ತುಟಿಗಳಿಗೆ ಚುಂಬಿಸಿ ಮೈ ಮರೆತ ದೃಶ್ಯ ವೈರಲ್ ಆಗಿದೆ. ಈ ಜೋಡಿಯ ರೋಮ್ಯಾನ್ಸ್ ಕಂಡು ಅಲ್ಲಿ ನೆರೆದಿದ್ದ ಮಂದಿ ನಾಚಿಕೆಯಿಂದ ಕಣ್ಣು ಮುಚ್ಚಿಕೊಂಡ ದೃಶ್ಯ ಕಂಡು ಬಂದಿದೆ. ಆದರೂ ತಲೆಕೆಡಿಸಿಕೊಳ್ಳದ ಈ ಜೋಡಿ ಲಿಕ್‌ ಕಿಸ್‌ ಮಾಡಿದ್ದನ್ನು ಕೂಡ ವಿಡಿಯೋದಲ್ಲಿ ನೋಡಬಹುದಾಗಿದೆ.

@ShamsherSLive ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು (Video) ಶೇರ್ ಮಾಡಲಾಗಿದೆ. ಪ್ರತಿದಿನ ದೆಹಲಿ ಮೆಟ್ರೋದಲ್ಲಿ ಸಂಚರಿಸುವ ಮಂದಿಗೆ ಬಿಕಿನಿ ತೊಟ್ಟ ಮಹಿಳೆ, ಚುಂಬಿಸುವ ದೃಶ್ಯ ನೋಡಬೇಕಾದ ಪರಿಸ್ಥಿತಿ(Couple Lip Kiss In Delhi Metro) ನಿರ್ಮಾಣವಾಗಿದೆ. ವಿಡಿಯೋ ಮತ್ತು ಫೋಟೋಗಳು ವೈರಲ್‌ ಆಗುತ್ತಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

You may also like

Leave a Comment