Home » Deer crocodile Viral Video : ಬಾಯಾರಿದ ಜಿಂಕೆ, ಹಸಿದು ಹೊಂಚು ಹೂಡಿ ಹಾರಿದ ಮೊಸಳೆ: ಝುಂ ಅನ್ನಿಸೋ ಕುತೂಹಲದ ಮಧ್ಯೆ ಗೆದ್ದವರು ಯಾರು ?

Deer crocodile Viral Video : ಬಾಯಾರಿದ ಜಿಂಕೆ, ಹಸಿದು ಹೊಂಚು ಹೂಡಿ ಹಾರಿದ ಮೊಸಳೆ: ಝುಂ ಅನ್ನಿಸೋ ಕುತೂಹಲದ ಮಧ್ಯೆ ಗೆದ್ದವರು ಯಾರು ?

by ಹೊಸಕನ್ನಡ
0 comments
Deer crocodile Viral Video

Deer crocodile Viral Video: ಭಾರತದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ಸದಾ ಒಂದಿಲ್ಲೊಂದು ಜೀವನ-ಪಾಠಗಳನ್ನು ಹೊಂದಿರುವ ಪ್ರೇರಣಾತ್ಮಕ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಆನಂದ್ ಮಹೀಂದ್ರಾ ಅವರು ಮೊಸಳೆ ಮತ್ತು ಜಿಂಕೆಯನ್ನು ಒಳಗೊಂಡಿರುವ ವೀಡಿಯೊ(Deer crocodile Viral Video) ಒಂದನ್ನು ಶೇರ್​ ಮಾಡಿದ್ದಾರೆ.

‘ಕ್ಲಿಪ್ಸ್ ದಟ್ ಗೋ ಹಾರ್ಡ್’ ಎಂಬ ಟ್ವಿಟ್ಟರ್ ಖಾತೆಯಿಂದ ಮೊದಲು ಪೋಸ್ಟ್ ಮಾಡಲಾದ 12-ಸೆಕೆಂಡ್ ಕ್ಲಿಪ್ ಅನ್ನು ಆನಂದ್ ಮಹೀಂದ್ರಾ ಅವರು “ರಿಫ್ಲೆಕ್ಸ್‌ಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಜಿಂಕೆಯೊಂದು ನದಿಯ ಬಳಿ ನೀರು ಕುಡಿಯುತ್ತಿದ್ದಾಗ, ನೀರೊಳಗಿನಿಂದ ಸದ್ದಿಲ್ಲದೇ ಬಂದ ಮೊಸಳೆಯು ಅದರ ಮೇಲೆ ಮಾಡುವುದನ್ನು ತೋರಿಸುತ್ತದೆ. ಮೊಸಳೆ ಮತ್ತು ಜಿಂಕೆ ಎರಡೂ ಚುರುಕು ಜೀವಿಗಳು, ಇಬ್ಬರೂ ತಮ್ಮ ವೇಗಕ್ಕೆ ಹೆಸರುವಾಸಿ. ಇಲ್ಲಿ ಮೊಸಳೆಯು ತನ್ನ ಹೊಟ್ಟೆಯ ಹಸಿವಿಗೆ ಆಹಾರ ಪಡೆದುಕೊಳ್ಳಲು ಹೊಂಚು ಹಾಕಿ ನಿಷ್ ಕರುಣೆ ತೋರಿಸಿ ಜಿಂಕೆಯ ಮೇಲೆ ಎಗರಿದೆ. ಆಗ ಅಮಾಯಕ ಜಿಂಕೆ ಏನು ಮಾಡಿತು? ಇಲ್ಲಿ ಗೆದ್ದವರು ಯಾರು ? ಅದನ್ನು ನೀವು ಈ ವೀಡಿಯೊ ನೋಡಿಯೇ ತಿಳಿದುಕೊಂಡರೆ ಚೆನ್ನ.
” Reflexes. Keep them sharp. Mindfulness is a great virtue when starting the week.” ಎನ್ನುವ ಸಹ ಬರಹ ಬರೆದಿದ್ದಾರೆ ಆನಂದ್ ಮಹೀಂದ್ರ. ‘ ಸದಾ ಜಾಗೃತವಾಗಿರುವುದು ಬದುಕಿನಲ್ಲಿ ಅತ್ಯಗತ್ಯ ಎನ್ನುವ ಪಾಠದ ಜತೆ ಈ ವಾರವನ್ನು ಪ್ರಾರಂಭಿಸೋಣ’ ಎಂದಿದ್ದಾರೆ ಆನಂದ್.
ಎಚ್ಚರ ತಪ್ಪಿದರೆ ಏನಾಗಬಹುದು ಎನ್ನುವುದನ್ನು ವಿವರಿಸಲು ಈ ವೀಡಿಯೊ ವಿನಹ ಬೇರೆ ವಿವರಣೆ ಬೇಕಿಲ್ಲ ಅನ್ನಿಸುತ್ತದೆ.

https://twitter.com/anandmahindra/status/1665600633590755328?ref_src=twsrc%5Etfw%7Ctwcamp%5Etweetembed%7Ctwterm%5E1665600633590755328%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಇದನ್ನೂ ಓದಿ: ಎಚ್ಚರ! ಈ ರಾಶಿಯವರು ದೂರ ಪ್ರಯಾಣ ಮುಂದೂಡುವುದು ಉತ್ತಮ

You may also like

Leave a Comment