Home » ಮನೆ ಮಂದಿ ಮಲಗಿದ್ದಾಗ ಹೊತ್ತಿಕೊಂಡ ಬೆಂಕಿ | ಮನೆಯ ಆರು ಮಂದಿ ಸಜೀವ ದಹನ | ಮಮ್ಮಲ ಮರುಗಿದ ಜನ

ಮನೆ ಮಂದಿ ಮಲಗಿದ್ದಾಗ ಹೊತ್ತಿಕೊಂಡ ಬೆಂಕಿ | ಮನೆಯ ಆರು ಮಂದಿ ಸಜೀವ ದಹನ | ಮಮ್ಮಲ ಮರುಗಿದ ಜನ

0 comments

ಮನೆ ಮಂದಿಯೆಲ್ಲ ಮಲಗಿದ್ದಾಗ ಮನೆಗೆ ಬೆಂಕಿಹೊತ್ತಿಕೊಂಡಿದ್ದು,
ಮನೆಯೊಳಗಿದ್ದ ಆರು ಮಂದಿ ಸಜೀವ ದಹನವಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಮಂಚಾರ್ಯಾಲ ಜಿಲ್ಲೆಯಲ್ಲಿ ನಡೆದಿದೆ.

ಮಂದಮರಿ ಸರ್ಕಲ್ನ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಹೇಳಿಕೆ ಪ್ರಕಾರ, ತೆಲಂಗಾಣದ ಮಂದಮರ್ರಿ ಮಂಡಲದ ವೆಂಕಟಾಪುರದ ಮನೆಯಲ್ಲಿ ಶಿವಯ್ಯ ಮತ್ತು ಅವರ ಪತ್ನಿ ಪದ್ಮಾ ವಾಸವಾಗಿದ್ದರು. ಎರಡು ದಿನಗಳ ನಂತರ ಪದ್ಮಾ ಅವರ ಸೊಸೆ ಮೌನಿಕಾ, ಇಬ್ಬರು ಹೆಣ್ಣುಮಕ್ಕಳು ಮತ್ತು ಶಾಂತಯ್ಯ ಎಂಬ ಮಹಿಳೆ ಅವರೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

ಹಾಗೇ ಮಧ್ಯರಾತ್ರಿಯ ವೇಳೆ ಅವರ ಮನೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಇದನ್ನು ಅಕ್ಕಪಕ್ಕದ ಮನೆಯವರು ಕಂಡು ಗಾಬರಿಯಿಂದ ತಕ್ಷಣವೇ ಗ್ರಾಮಸ್ಥರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲರೂ ಸ್ಥಳಕ್ಕೆ ಧಾವಿಸುವ ವೇಳೆಗೆ ಮನೆ ಪೂರ್ತಿ ಬೆಂಕಿ ಆವರಿಸಿತ್ತು. ಮಾಹಿತಿಯ ಪ್ರಕಾರ, ಮನೆಯಲ್ಲಿದ್ದ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಇನ್ಸ್‌ಪೆಕ್ಟರ್ ಪ್ರಮೋದ್ ಹೇಳಿದ್ದಾರೆ.

ಈ ದುರಂತದಿಂದ, ಮನೆ ಮಾಲೀಕ ಶಿವಯ್ಯ (50), ಪತ್ನಿ ಪದ್ಮಾ (45), ಅವರ ಇಬ್ಬರು ಪುತ್ರಿಯರು ಮತ್ತು ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯರು ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಅಗ್ನಿ ಅನಾಹುತಕ್ಕೆ ಕಾರಣ ಏನೆಂದು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

You may also like

Leave a Comment