Home » Viral Video : ಮಾಲೆ ಹಾಕುವ ಸಂದರ್ಭ ಪಟಾಕಿ ಸದ್ದಿಗೆ ಬೆಚ್ಚಿಬಿದ್ದ ವರ ಮಾಡಿದ್ದೇನು ಗೊತ್ತಾ? ಜನ ನಕ್ಕಿದ್ದೋ ನಕ್ಕಿದ್ದು!!

Viral Video : ಮಾಲೆ ಹಾಕುವ ಸಂದರ್ಭ ಪಟಾಕಿ ಸದ್ದಿಗೆ ಬೆಚ್ಚಿಬಿದ್ದ ವರ ಮಾಡಿದ್ದೇನು ಗೊತ್ತಾ? ಜನ ನಕ್ಕಿದ್ದೋ ನಕ್ಕಿದ್ದು!!

0 comments

Fire crackers: ಹಲವೆಡೆ ಕಾರ್ಯಕ್ರಮದಲ್ಲಿ ಪಟಾಕಿ (fire crackers) ಹೊಡೊಯೋದು ಇದ್ದೇ ಇರುತ್ತೇ. ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ, ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಪಟಾಕಿ ಮೊದಲೇ ತಯಾರಾಗಿರುತ್ತೆ. ದೀಪಾವಳಿಗಂತೂ ಪಟಾಕಿ ಇಲ್ಲದ ಮನೆಯಿಲ್ಲ. ಎಲ್ಲಾ ಮನೆಯಲ್ಲೂ ಪಟಾಕಿ ಸದ್ದು ಕೇಳಿಸುತ್ತಲೇ ಇರುತ್ತೆ. ಆದರೆ ಈ ಪಟಾಕಿಯಿಂದ ಆಗುವ ಅವಾಂತರ ಒಂದಲ್ಲ, ಎರಡಲ್ಲ. ಸಾಕಷ್ಟು ಜನರು ಪಟಾಕಿ ಸಿಡಿತಕ್ಕೆ ತುತ್ತಾದವರೂ ಇದ್ದಾರೆ. ಆದರೆ ಈ ಪಟಾಕಿಗೆ ಹೆದರಿ ಇಲ್ಲೊಬ್ಬ ಸುಸ್ತಾಗಿದ್ದಾನೆ. ಸದ್ಯ ಈ ವಿಡಿಯೋ ವೈರಲ್ (Viral video) ಆಗಿದೆ.

ಸೆಲಬ್ರೇಷನ್ ಅಂದಾಗ ಅಲ್ಲಿ ಪಾರ್ಟಿ ಪಾಪ್ಪರ್ಸ್‌, ಕೇಕ್‌, ಪಟಾಕಿ ಎಲ್ಲಾ ಇರೋದು ಸಾಮಾನ್ಯ. ಇದು ಪ್ರೋಗ್ರಾಂನ ಖುಷಿಯನ್ನು ಇನ್ನಷ್ಟು ಹೆಚ್ಚು ಮಾಡುತ್ತೆ. ಆದ್ರೆ ಇಲ್ಲೊಂದು ಮದ್ವೆ ಕಾರ್ಯಕ್ರಮದಲ್ಲಿ ವರ ಈ ಪಾಪ್ಪರ್ಸ್ ಸದ್ದಿಗೇ ಬೆಚ್ಚಿಬಿದ್ದಿದ್ದಾನೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಸಂದರ್ಭದಲ್ಲಿ, ಮದುಮಗ ವಧುವಿಗೆ ಮಾಲೆ ಹಾಕುತ್ತಿದ್ದಾಗ, ಇದ್ದಕ್ಕಿದ್ದಂತೆ ಯಾರೋ ಪಾಪ್ಪರ್ಸ್ ಸಿಡಿಸಿದ್ದು, ಇದರಿಂದ ವರ ಬೆಚ್ಚಿಬಿದ್ದಿದ್ದಾನೆ.
ವರ ಹೆದರಿದ್ದನ್ನು ಕಂಡು ನೆರೆದಿದ್ದ ಎಲ್ಲರೂ ಸಣ್ಣಗೆ ನಗಲಾರಂಭಿಸಿದ್ದಾರೆ. ಬಹುಶಃ ವರನಿಗೆ ಸಿಟ್ಟು ಬಂದಿರಬೇಕು. ಅವನು ಮುಖದಲ್ಲಿ ನಗು ಬದಲು, ಭಯ, ಸಿಟ್ಟು ಆವರಿಸಿತ್ತು.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೊವನ್ನು ಅಧಿಕ ಜನರು ವೀಕ್ಷಿಸಿದ್ದು, ಸೋಷಿಯಲ್ಸ್ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

You may also like

Leave a Comment