Home » Hasanamba: ಹಾಸನಾಂಬೆ ಮಹೋತ್ಸವ ಹೊಸ ದಾಖಲೆ; 25 ಕೋಟಿ ರೂ. ಕಾಣಿಕೆ ಸಂಗ್ರಹ

Hasanamba: ಹಾಸನಾಂಬೆ ಮಹೋತ್ಸವ ಹೊಸ ದಾಖಲೆ; 25 ಕೋಟಿ ರೂ. ಕಾಣಿಕೆ ಸಂಗ್ರಹ

0 comments
Hasanamba temple

Hasanamba: ಈ ಬಾರಿ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ (Hasanamba Jatra) ಹೊಸ ಇತಿಹಾಸ ಬರೆದಿದೆ.‌ ವಿಶೇಷ ದರ್ಶನದ ಟಿಕೆ‌ಟ್ ಹಾಗೂ ಲಾಡು ಮಾರಾಟದಿಂದ ದಾಖಲೆಯ ಆದಾಯ ಗಳಿಕೆಯಾಗಿದೆ.‌

ವಿಶೇಷ ದರ್ಶನದ ಸಾವಿರ ರೂ., ಮುನ್ನೂರು ರೂ. ಟಿಕೆಟ್‌ ಮತ್ತು ಲಾಡು ಮಾರಾಟದಿಂದ 21,91,75,052 ರೂ. ಸಂಗ್ರಹವಾಗಿದೆ. ಹುಂಡಿಯಲ್ಲಿ 3,68,12,275 ರೂ. ಸೇರಿ ಒಟ್ಟು 25,59,87,327 ರೂ. ಹಣ ಕಾಣಿಕೆಯಾಗಿ ಹರಿದು ಬಂದಿದೆ.‌

ಕಾಣಿಕೆ ರೂಪದಲ್ಲಿ 75 ಗ್ರಾಂ 300 ಮಿಲಿ ಚಿನ್ನ, 1 ಕೆಜಿ 58 ಗ್ರಾಂ 400 ಮಿಲಿ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ‌ಹಾಕಿದ್ದು, ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಆದಾಯದ ಮೂಲಕ ದಾಖಲೆ ನಿರ್ಮಾಣವಾಗಿದೆ.‌

ಇಂಡೋನೇಷಿಯಾ-263 ರೂ., ನೇಪಾಳ-3.13 ರೂ., ಮಲೇಷಿಯಾ-28.75 ರೂ., ಯುಎಸ್‌ಎ-526 ರೂ., ಮಾಲ್ಡೀವ್ಸ್-57.29 ರೂ., ಕೆನಡಾ-6,259 ರೂ, ಕುವೈತ್-286 ರೂ., ಯುಎಐ-239 ರೂ. ಸೇರಿ ಒಟ್ಟು 7,653 ರೂ. ವಿದೇಶ ಕರೆನ್ಸಿ ಕಾಣಿಕೆಯಾಗಿ ಬಂದಿದೆ.

ಅಲ್ಲದೇ, 42,530 ಹಳೇ ನೋಟುಗಳನ್ನು ಭಕ್ತರು ಹಾಕಿದ್ದಾರೆ.‌

You may also like