Home » ಮಾರುತಿ ಸುಜುಕಿಯ ಈ ಕಾರುಗಳ‌ ಮೇಲೆ ಭರ್ಜರಿ ರಿಯಾಯಿತಿ | ಗ್ರಾಹಕರೇ ಈ ಆಫರ್ ಮಿಸ್ ಮಾಡ್ಕೋಬೇಡಿ

ಮಾರುತಿ ಸುಜುಕಿಯ ಈ ಕಾರುಗಳ‌ ಮೇಲೆ ಭರ್ಜರಿ ರಿಯಾಯಿತಿ | ಗ್ರಾಹಕರೇ ಈ ಆಫರ್ ಮಿಸ್ ಮಾಡ್ಕೋಬೇಡಿ

0 comments

ಸದ್ಯ ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಅಗ್ಗ ಬೆಲೆಯಲ್ಲಿ ಕಾರುಗಳನ್ನು ಖರೀದಿಸಬಹುದಾಗಿದೆ. ಮಾರುತಿ ಸುಜುಕಿ ಎಸ್ಪ್ರೆಸೊ ಬ್ರ್ಯಾಂಡ್ ಹೈ-ರೈಡಿಂಗ್ ಹ್ಯಾಚ್‌ಬ್ಯಾಕ್‌ನ ಮ್ಯಾನುಯಲ್ ರೂಪಾಂತರಗಳಲ್ಲಿ ಒಟ್ಟು ರೂ. 36,000 ರಿಯಾಯಿತಿಯನ್ನು ಮಾರುತಿ ಸುಜುಕಿ ನೀಡಲಿದೆ. ಇದರಲ್ಲಿ ರೂ.15,000 ನಗದು ರಿಯಾಯಿತಿ, ರೂ.6,000 ಕಾರ್ಪೊರೇಟ್ ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್ ಒಳಗೊಂಡಿದೆ. ಹಾಗೇ S Presso ನ AMT ರೂಪಾಂತರವು ರೂ. 21,000 ರಿಯಾಯಿತಿ ಆಗಿದೆ. ಇನ್ನೂ, ಆಫರ್ ನ ಮೇಲೆ ಲಭ್ಯವಾಗುವ ಕಾರುಗಳು ಯಾವೆಲ್ಲಾ ಎಂದು ನೋಡೋಣ.

ಮಾರುತಿ ಸುಜುಕಿ ವ್ಯಾಗನ್ ಆರ್: ಈ ಕಾರಿನ ಎಲ್ಲಾ ಪೆಟ್ರೋಲ್ ಮ್ಯಾನುವಲ್ ರೂಪಾಂತರಗಳು ಸೇರಿ, ಒಟ್ಟು 33,000 ರಿಯಾಯಿತಿ ಸಿಗಲಿದೆ. ಇದರಲ್ಲಿ 10,000 ನಗದು ರಿಯಾಯಿತಿ, ಕಾರ್ಪೊರೇಟ್ ರಿಯಾಯಿತಿಯಾಗಿ ರೂ. 8,000 ಆಗಿದ್ದು , ರೂ. 15,000 ವಿನಿಮಯ ಬೋನಸ್ ಆಗಿದೆ. ಒಟ್ಟು 23,000 ರಿಯಾಯಿತಿ ಲಭ್ಯವಾಗಲಿದೆ.

ಮಾರುತಿ ಸುಜುಕಿ ಆಲ್ಟೊ ಕೆ 10: ಈ ಕಾರು ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದು, ಪೆಟ್ರೋಲ್ ಮ್ಯಾನುವಲ್ ಮತ್ತು ಸಿಎನ್‌ಜಿ ಆವೃತ್ತಿಗಳು ಒಟ್ಟು ರೂ 38,000 ರಿಯಾಯಿತಿಯನ್ನು ಇವೆ. ಈ ಒಟ್ಟು ರಿಯಾಯಿತಿಯಲ್ಲಿ, ರೂ.15,000 ನಗದು ರಿಯಾಯಿತಿ, ರೂ.8,000 ಕಾರ್ಪೊರೇಟ್ ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್ ಒಳಗೊಂಡಿದೆ.

ಮಾರುತಿ ಸುಜುಕಿ ಸೆಲೆರಿಯೊ: ಈ ಕಾರಿನ ಎಲ್ಲಾ ಮ್ಯಾನುವಲ್ ರೂಪಾಂತರಗಳಲ್ಲಿ ರೂ. 31,000 ಒಟ್ಟು ರಿಯಾಯಿತಿ ಸಿಗಲಿದ್ದು, ಇದರಲ್ಲಿ ರೂ. 10,000 ನಗದು ರಿಯಾಯಿತಿ, ಇನ್ನೂ, ಕಾರ್ಪೊರೇಟ್ ರಿಯಾಯಿತಿ ರೂ. 6,000 ಮತ್ತು ರೂ. 15,000 ವಿನಿಮಯ ಬೋನಸ್ ಆಗಿದೆ. ಜೊತೆಗೆ ಹ್ಯಾಚ್‌ಬ್ಯಾಕ್‌ನ AMT ಆವೃತ್ತಿ ರೂ. 21,000 ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಎಲ್ಲಾ ಸೇರಿ ಒಟ್ಟು ರೂ. 30,100 ರಿಯಾಯಿತಿ ಆಗಿದೆ.

ಮಾರುತಿ ಸುಜುಕಿ ಸ್ವಿಫ್ಟ್: ಈ ಕಾರಿನಲ್ಲಿ, ರೂ. 5,000 ನಗದು ರಿಯಾಯಿತಿ, ರೂ. 7,000 ಕಾರ್ಪೊರೇಟ್ ರಿಯಾಯಿತಿ ಮತ್ತು ರೂ. 15,000 ವಿನಿಮಯ ಬೋನಸ್ ಆಗಿದೆ. ಈ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಒಟ್ಟು ಬೆಲೆ ರೂ. 27,000 ಆಗಿದೆ. ಹಾಗೇ ಮಾರುತಿ ಸ್ವಿಫ್ಟ್ ಸಿಎನ್‌ಜಿಯಲ್ಲಿ ಒಟ್ಟು ರೂ.10,100 ರಿಯಾಯಿತಿಯನ್ನು ನೀಡುತ್ತಿದೆ.

ಮಾರುತಿ ಸುಜುಕಿ ಆಲ್ಟೊ 800: ಆಲ್ಟೊ 800 ಅಲ್ಲಿ 10,000 ನಗದು ರಿಯಾಯಿತಿ, ರೂ. 6,000 ಕಾರ್ಪೊರೇಟ್ ಪ್ರಯೋಜನ ಮತ್ತು ರೂ. 15,000 ವಿನಿಮಯ ಬೋನಸ್ ಆಗಿದೆ. ಆದರೆ ಪ್ರವೇಶ ಮಟ್ಟದ ಟ್ರಿಮ್‌ಗೆ ರೂ. 11,000 ಪ್ರಯೋಜನ ಪಡೆಯುತ್ತದೆ. ಬಜೆಟ್ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿ ಕೂಡ 30,100 ರೂ. ರಿಯಾಯಿತಿಗೆ ಲಭ್ಯವಾಗಲಿದೆ.

ಮಾರುತಿ ಸುಜುಕಿ ಡಿಜೈರ್: ಇದು ರೂ. 17,000 ರಿಯಾಯಿತಿ ಲಭ್ಯವಿದೆ. ಇದರಲ್ಲಿ ಕಾರ್ಪೊರೇಟ್ ರಿಯಾಯಿತಿ 7,000 ಮತ್ತು ರೂ. 10,000 ವಿನಿಮಯ ಬೋನಸ್ ಆಗಿದೆ. ಈ ರಿಯಾಯಿತಿ ಸ್ಟಾಕ್ ಲಭ್ಯತೆಯ ಮೇಲೆ ಅವಲಂಭಿಸಿರುತ್ತದೆ. ಇನ್ನೂ, ಹೆಚ್ಚಿನ ಮಾಹಿತಿಗೆ ಸ್ಥಳೀಯ ವಿತರಕರನ್ನು ಭೇಟಿ ಮಾಡಿ.

You may also like

Leave a Comment