Home » Eshwar khandre: ಕಾಡುಪ್ರಾಣಿ ನಾಡಿಗೆ ಬಂದರೆ, 1926 ಸಂಖ್ಯೆಗೆ ಉಚಿತ ಕರೆ: ಈಶ್ವ‌ರ್ ಖಂಡ್ರೆ

Eshwar khandre: ಕಾಡುಪ್ರಾಣಿ ನಾಡಿಗೆ ಬಂದರೆ, 1926 ಸಂಖ್ಯೆಗೆ ಉಚಿತ ಕರೆ: ಈಶ್ವ‌ರ್ ಖಂಡ್ರೆ

0 comments

Eshwar khandre: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಕಾಡಿನಿಂದ ನಾಡಿಗೆ ವನ್ಯಜೀವಿ ಆನೆ, ಹುಲಿ, ಕರಡಿ, ಚಿರತೆ ಸೇರಿದಂತೆ ಯಾವುದೇ ವನ್ಯಜೀವಿ ನಾಡಿಗೆ ಬಂದರೆ, ತೋಟ, ಹೊಲ, ಗದ್ದೆಯಲ್ಲಿ ಕಾಣಿಸಿಕೊಂಡರೆ ಸ್ಥಳೀಯರು 1926ಗೆ ಕರೆ ಮಾಡಿದರೆ ಕೇಂದ್ರ ಕಚೇರಿಯಲ್ಲಿ ದೂರು ದಾಖಲಾಗುತ್ತದೆ. ಕೂಡಲೇ ಸಂಬಂಧಿತ ವಲಯಕ್ಕೆ ಮಾಹಿತಿ ರವಾನಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಈ ದೂರುಗಳಿಗೆ ಸ್ಪಂದಿಸಲಾಗಿದೆಯೇ ಇಲ್ಲವೇ ಎಂಬುದನ್ನು ಪಿಸಿಸಿಎಫ್ ಮತ್ತು ಎಪಿಸಿಸಿಎಫ್ ಗಳು ಪರಿಶೀಲಿಸಲಿದ್ದಾರೆ. ಉನ್ನತಾಧಿಕಾರಿಗಳು ನಿಗಾ ಇಡುವ ಕಾರಣ, ವಲಯ ಅಧಿಕಾರಿಗಳು ತುರ್ತಾಗಿ ಸ್ಪಂದಿಸಲಿದ್ದು ಹೀಗಾಗಿ ಹಾಲಿ ಇರುವ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.

You may also like