Home » Instagram talaq reels: ಇನ್‌ಸ್ಟ್ರಾಂಗ್‌ನಲ್ಲಿ ತಲಾಖ್‌ ಕುರಿತ ರೀಲ್ಸ್‌ ಮಾಡಿದ ಪತ್ನಿ, ರೆಬೆಲ್‌ ಆದ ಪತಿ, ರಿಯಲ್‌ ಆಗಿ ತಲಾಖ್‌ ನೀಡಿದ! ಮುಂದೇನಾಯ್ತು?

Instagram talaq reels: ಇನ್‌ಸ್ಟ್ರಾಂಗ್‌ನಲ್ಲಿ ತಲಾಖ್‌ ಕುರಿತ ರೀಲ್ಸ್‌ ಮಾಡಿದ ಪತ್ನಿ, ರೆಬೆಲ್‌ ಆದ ಪತಿ, ರಿಯಲ್‌ ಆಗಿ ತಲಾಖ್‌ ನೀಡಿದ! ಮುಂದೇನಾಯ್ತು?

by Mallika
0 comments
Instagram talaq reels

Instagram talaq reels: ಇನ್ಸ್‌ಸ್ಟಾಗ್ರಾಂ (Instagram) ನಲ್ಲಿ ಇದೀಗ ತರಹೇವಾರಿ ವೀಡಿಯೋಗಳು ಬರುತ್ತದೆ. ಆದರೆ ಹೆಂಡತಿ ಹಾಕಿದ ಒಂದು ವೀಡಿಯೋ ಈಗ ತಲಾಖ್‌ ತೆಗೆದುಕೊಳ್ಳುವಲ್ಲಿಗೆ ಹೋಗಿದೆ ಎಂದರೆ ನಂಬುತ್ತೀರಾ? ಬನ್ನಿ ಇದೇನು ಘಟನೆ ಎಂದು ತಿಳಿದುಕೊಳ್ಳೋಣ. ಮುಸ್ಲಿಂ ಮಹಿಳೆಯೊಬ್ಬರು ತಲಾಖ್‌ ಕುರಿತ ರೀಲ್ಸ್‌ (Talaq) ಕುರಿತ ಒಂದು ರೀಲ್ಸ್‌(Instagram talaq reels) ಮಾಡಿ ವೀಡಿಯೋ ಹರಿಬಿಟ್ಟದ್ದು, ಇದು ಗಂಡನಿಗೆ ತಿಳಿದು ಪತಿ ಕೆಂಡಾಮಂಡಲವಾಗಿ ಪತಿ ನಿಜವಾಗಿಯೂ ತಲಾಖ್‌ ನೀಡಿದ ಘಟನೆ ನಡೆದಿದ್ದು, ಈಗ ಆತನ ವಿರುದ್ಧ ದೂರು ದಾಖಲಾಗಿದೆ.

ಹೆಂಡತಿ ಅನಾರೋಗ್ಯದ ಕಾರಣದಿಂದ ಫೆಬ್ರವರಿಯಲ್ಲಿ ತನ್ನ ತವರು ಮನೆಗೆ ಹೋಗಿದ್ದು, ನಂತರ ಸ್ವಲ್ಪ ಸಮಯ ಅಲ್ಲೇ ಉಳಿದುಕೊಂಡಿದ್ದು, ಎಪ್ರಿಲ್‌ ತಿಂಗಳಲ್ಲಿ ಆಕೆ ಇನ್‌ಸ್ಟಾಗ್ರಾಂನಲ್ಲಿ ತನ್ನ ಪತಿಯೊಂದಿಗೆ ಇದ್ದ ವೀಡಿಯೋವೊಂದನ್ನು ಪೋಸ್ಟ್‌ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಪತಿ ಮುತಕೀಮ್‌ ತನ್ನ ಪತ್ನಿಗೆ ಕರೆ ಮಾಡಿ ಆ ವೀಡಿಯೋ ಡಿಲೀಟ್‌ ಮಾಡಲು ಹೇಳಿದ್ದ. ಆದರೆ ಆಕೆ ಒಪ್ಪಲಿಲ್ಲ. ಕೊನೆಗೆ ಇದು ತಲಾಖ್‌ ತೆಗೆದುಕೊಳ್ಳುವಲ್ಲಿಗೆ ಹೋಗಿದೆ.

ಇದಾದ ನಂತರ ರುಖ್ಸಾರ್‌ (ಪತ್ನಿ) ತನ್ನ ಗಂಡನ ಮನೆಗೆ ಹೋಗಿದ್ದು ಅಲ್ಲಿ ಆಕೆಯನ್ನು ಮನೆಯೊಳಗೆ ಪ್ರವೇಶ ನೀಡಲಿಲ್ಲ. ಈಗ ಈ ಗಲಾಟೆ ಪರಿಹರಿಸಲು ಕುಟುಂಬ ಸದಸ್ಯರು ವಾರಗಟ್ಟಲೆ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Karnataka Rain: ಜೂ.11ರಂದು ರಾಜ್ಯದ ದಕ್ಷಿಣ ಒಳನಾಡಿನ ಈ ಐದು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ! ಹವಾಮಾನ ಇಲಾಖೆ ಮುನ್ಸೂಚನೆ

You may also like

Leave a Comment