Lakno: ಎಂತೆಂತಹ ದುಶ್ಟ ಬುದ್ದಿಯ ಜನರು ಇರ್ತಾರೆ ಅನ್ನೋದಕ್ಕೆ ಈ ಮನೆ ಕೆಲಸದ ಹೆಂಗಸೇ ಒಂದು ಸಾಕ್ಷಿ. ಈಗಾಗಲೇ ನಾವು ಆಹಾರ ತಯಾರಿಸುವಾಗ ಅದಕ್ಕೆ ಉಗಿಯುವುದು, ಅಡುಗೆ ಮಾಡುವಾಗ ವಸ್ತುಗಳ ಮೇಲೆ ಒದೆಯುವುದು, ಗಲೀಜು ಮಾಡುವುದು ಮುಂತಾದ ಉದ್ದೇಶಪೂರ್ವಕ ಕೃತ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡು ಕೇಳಿದ್ದೇವೆ. ಇದೀಗ ಓರ್ವ ಮಹಿಳೆ ಇನ್ನೊಂದು ಸ್ಟೆಪ್ ಮುಂದಕ್ಕೆ ಹೋಗಿದ್ದಾಳೆ. ಈ ಮನೆ ಕೆಲಸದಾಕೆ ತನ್ನ ಮೂತ್ರ (Urine) ದಿಂದ ಮನೆ ಶುಚಿಗೊಳಿಸಿದ ಪ್ರಸಂಗವೊಂದು ವರದಿಯಾಗಿ ಈಗ ಗಾಬರಿ ಮೂಡಿಸಿದೆ.
ಉತ್ತರಪ್ರದೇಶದ (Lakno) ಗ್ರೇಟರ್ ನೊಯ್ಡಾದ ಅಜ್‍ನಾರ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಬಂಧ ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆ ಮೂತ್ರದಿಂದ ನೆಲ ಒರೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣ (Viral Video) ಗಳಲ್ಲಿ ವೈರಲ್ ಆಗಿದೆ.
ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸಬೀನಾ, ಮೊದಲು ಮಾಲೀಕರ ಆರೋಪಗಳನ್ನು ನಿರಾಕರಿಸಿದ್ದು ಬಳಿಕ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ ಯಾಕೆ ಈ ರೀತಿ ಮಾಡಿರುವುದು ಎಂಬುದರ ಬಗ್ಗೆ ಆಕೆ ಇನ್ನೂ ಬಾಯ್ಬಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವೀಡಿಯೋದಲ್ಲೇನಿದೆ…?
ಮನೆ ಕೆಲಸದಾಕೆ ಸಬೀನಾ ಕಟುನ್ ಮನೆಯೊಂದರಲ್ಲಿ ಮನೆಕೆಲಸ ಮಾಡಿಕೊಂಡು ಇರುತ್ತಿದ್ದಳು. ಆದರೆ ಆಕೆ ನೆಲ ಒರೆಸುವ ವೇಳೆ ಬಕೆಟ್‍ನಲ್ಲಿದ್ದ ನೀರಿಗೆ ಮೂತ್ರ ವಿಸರ್ಜನೆ ಮಾಡಿ ನಂತರ ಮನೆಯ ನೆಲ ಅದೇ ನೀರಿನಲ್ಲಿ ಕ್ಲೀನ್ ಮಾಡಿದ್ದಳು. ಆಕೆ ಬಟ್ಟೆ ಸರಿಸಿ, ಬಕೆಟ್ ಮೇಲೆ ಕುಂತು ಮೂತ್ರ ಬಸಿದು ನಂತರ ಅದೇ ನೀರಿನಿಂದ ಮನೆಯನ್ನು ಸ್ವಚ್ಚ ಗೊಳಿಸಿದ್ದಳು.
ಆ ಮನೆಯ ಮಾಲೀಕರು ಅದ್ಯಾಕೋ ಮನೆಯ ಸಿಸಿ ಟಿವಿ ವೀಕ್ಷಿಸುವಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದು, ಮಹಿಳೆ ಈ ತರ ವಿಕೃತಿ ಮೆರೆಯಲು ಕಾರಣ ಏನು ಎನ್ನುವುದು ಇನ್ನೂ ಗೊತ್ತಾಗಿಲ್ಲ.
