Home » Osker award-2024: ಆಸ್ಕರ್ ಪ್ರಶಸ್ತಿ ಪಡೆದು ಭಾಷಣ ಮಾಡುವಾಗ ಕಿತ್ತುಹೋದ ನಟಿಯ ಡ್ರೆಸ್ ಜಿಪ್ ! ಮುಂದೇನಾಯ್ತು?

Osker award-2024: ಆಸ್ಕರ್ ಪ್ರಶಸ್ತಿ ಪಡೆದು ಭಾಷಣ ಮಾಡುವಾಗ ಕಿತ್ತುಹೋದ ನಟಿಯ ಡ್ರೆಸ್ ಜಿಪ್ ! ಮುಂದೇನಾಯ್ತು?

1 comment
Osker award-2024

Osker award-2024: 96ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳನ್ನು ಮಾರ್ಚ್ 11ರಂದು ಲಾಸ್ ಏಂಜಲಿಸ್‌ನ ಡಾಲ್ಟಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಈ ವೇಳೆ ಯಾವೆಲ್ಲಾ ಕಲಾವಿದರಿಗೆ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಕಲಾವಿಧರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಹೀಗಿರುವಾಗ ಒಂದು ಅಚಾತುರ್ಯ ನಡೆದೇಬಿಟ್ಟಿತು.

ಇದನ್ನೂ ಓದಿ: Election Bond Case : ಎಸ್. ಬಿ. ಐ. ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

https://x.com/phititemore/status/1767062813204488571?t=4qqsAEV8xLz_p3yP_uUw3g&s=08

ಹೌದು, ಪೂರ್ ಥಿಂಗ್ಸ್‌ (Poor Things) ಸಿನಿಮಾದ ಅಭಿನಯಕ್ಕಾಗಿ ಎಮ್ಮಾ ಸ್ಟೋನ್ (Emma Stone) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಆದರೆ ಈ ವೇಳೆ ನಟಿಗೆ ಮುಜುಗರವಾದ ಘಟನೆ ಸಂಭವಿಸಿದ್ದು ಪ್ರಶಸ್ತಿಯನ್ನು ಸ್ವೀಕರಿಸುವಾಗ ನಟಿಯ ಗೌನ್‌ ಚೈನ್‌ ಬಿಚ್ಚಿ ಹೋಗಿದೆ.

https://x.com/emmistta/status/1767062524535484518?t=qIEJirDnebtW0s7BLSsLLQ&s=08

ಅಂದಹಾಗೆ ಮಾರ್ಕ್ ರುಫಲೋ ಮತ್ತು ನಿರ್ದೇಶಕ ಯೊರ್ಗೊಸ್ ಲ್ಯಾಂತಿಮೊಸ್ ಅವರನ್ನು ತಬ್ಬಿಕೊಳ್ಳುವಾಗ ಚೈನ್‌ ಓಪನ್‌ ಆಗಿರುವುದು ಕಂಡು ಬಂದಿದೆ. ಅಲ್ಲದೆ ಭಾಷಣ ಮಾಡುವಾಗ ಆಗಾಗ ಅವರ ಡ್ರೆಸ್‌ ಜಾರಿಕೊಳ್ಳುತ್ತಿತ್ತು. ಆದರೂ ನಟಿ ಭಾಷಣದ ನಡುವೆ ಡ್ರೆಸ್‌ ಸರಿ ಮಾಡಿಕೊಳ್ಳುತ್ತಲೇ ಇದ್ದರು.ಇದೀಗ ಈ ಫೋಟೊಗಳು ವೈರಲ್‌ ಆಗಿವೆ.

ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರುವಾಗಲೇ ನಟಿ ಡ್ರೆಸ್‌ ಬಗ್ಗೆ ಸನ್ನೆ ನೀಡುತ್ತಿದ್ದರು. ಜೆಸ್ಸಿಕಾ ಲ್ಯಾಂಗ್ ಮತ್ತು ಚಾರ್ಲಿಜ್ ಥರಾನ್ ನಟಿಯ ರಕ್ಷಣೆಗೆ ಬಂದರು. ಮಾತ್ರವಲ್ಲ ನಟಿ ಪ್ರಶಸ್ತಿ ಸ್ವೀಕಾರ ಭಾಷಣ ಮಾಡುವಾಗ ಭಾವುಕರಾದರು

You may also like

Leave a Comment