Snake viral Video: ಸಾಮಾನ್ಯವಾಗಿ ಹಾವು (snake) ಕಂಡರೆ ಎಲ್ಲರಿಗೂ ಭಯ ಅನ್ನೋದು ಇದ್ದೇ ಇರುತ್ತದೆ. ಕೆಲವರು ಹಾವನ್ನು ಚಿತ್ರದಲ್ಲಿ ನೋಡಿದರೇನೇ ಭಯಭೀತರಾಗುತ್ತಾರೆ. ಇನ್ನು ಹಾವು ಕಚ್ಚಿದರೆ ಅದೆಷ್ಟೋ ಜನ ಅದರ ವಿಷಕ್ಕಿಂತ ಭಯದಿಂದಲೇ ಸಾವನ್ನಪ್ಪುತ್ತಾರೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ದೈತ್ಯ ಹಾವಿನ ವಿಡಿಯೋವೊಂದು ವೈರಲ್ (Snake viral Video) ಆಗಿದ್ದು, ನೀವು ಈ ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ!!!.
ಹೌದು, ಇದೀಗ ವೈರಲ್ ಆಗಿರುವ ವಿಡಿಯೋ ನೋಡೋದಿಕ್ಕೆ ಭಯಾನಕವಾಗಿದೆ. ಈ ಬೃಹತ್ ಹಾವು ಏನು ಮಾಡಿದೆ ಗೊತ್ತಾ? ದೊಡ್ಡ ಹಸುವನ್ನೇ ನುಂಗಿಬಿಟ್ಟಿದೆ. ಕೇಳಲು ಆಶ್ಚರ್ಯವೆನಿಸುತ್ತದೆ ಅಲ್ವಾ!!! ಆದರೆ ಇದು ನಿಜ. ಹಾವಿನ ದೇಹ ಹಸುವಿನಷ್ಟು ದೊಡ್ಡದಿಲ್ಲದಿದ್ದರೂ ದೊಡ್ಡ ಹಸುವನ್ನೇ ನುಂಗಿರುವುದು ಆಶ್ಚರ್ಯವೇ ಸರಿ.
ನೀವಂತೂ ಇಂತಾ ಹಾವನ್ನು ಎಲ್ಲೂ ನೋಡಿರಲ್ಲ ಅಷ್ಟು ದೈತ್ಯ ಹಾವು. ಈ ಬೃಹತ್ ಹಾವು ಹಸುವನ್ನು (cow) ನುಂಗಿ ಮಲಗಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
