Snake Viral Video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಕೆಲವು ಸಾಕಷ್ಟು ವೈರಲ್ ಕೂಡ ಆಗುತ್ತದೆ. ಇದೀಗ ಹಾವಿನ ವಿಡಿಯೋವೊಂದು ವೈರಲ್ (Snake Viral Video) ಆಗಿದ್ದು, ವಿಡಿಯೋ ನೋಡಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!!.
ವಿಡಿಯೋದಲ್ಲಿ ಒಂದೆಡೆ ಟಿವಿ ಆನ್ ಆಗಿದೆ. ಇನ್ನೊಂದೆಡೆ ಫ್ಯಾನ್ ತಿರುಗುತ್ತಿದೆ. ಸೂಕ್ಮವಾಗಿ ಗಮನಿಸಿದ್ರೆ ಫ್ಯಾನ್ ಮಾತ್ರ ತಿರುಗುತ್ತಿಲ್ಲ. ಜೊತೆಗೆ ಸೀಲಿಂಗ್ ಫ್ಯಾನ್ ನಲ್ಲಿ ಹಾವೊಂದು ಸುತ್ತಿಕೊಂಡಿದೆ. ನೋಡುವಾಗ ಹಾವು ತಿರುಗುವ ಫ್ಯಾನಿನ ಏಟಿನಿಂದ ತಪ್ಪಿಸಿಕೊಂಡು ತನ್ನನ್ನು ರಕ್ಷಿಸಿಕೊಳ್ಳಲು ಕೆಳಗೆ ಹರಿಯಲು ನೋಡುತ್ತಿದೆ. ಆದರೆ, ತಿರುಗುವ ಫ್ಯಾನಿನ ರೆಕ್ಕೆಗಳು ಹಾವನ್ನು ಸುಮ್ಮನೆ ಬಿಡದೆ ಘಾಸಿಗೊಳಿಸುತ್ತಿದೆ. ಮುಂದೇನಾಯ್ತು ಗೊತ್ತಾ?
ಹಾವಿನ ಪರದಾಟವನ್ನು ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡ್ತಾ ಇದ್ದಾ. ನಿಂಗಿದು ಬೇಕಿತ್ತಾ ಮಗನೇ?! ಅನ್ನೋ ಹಾಗೇ ಆ ವ್ಯಕ್ತಿ ತಾನೇ ತನ್ನ ಸಾವನ್ನು ಆಹ್ವಾನ ಮಾಡಿದಂತಿದೆ ಮುಂದೆ ನಡೆದ ಘಟನೆ. ಹೌದು, ತಿರುಗುತ್ತಿದ್ದ ಫ್ಯಾನಿನ ರೆಕ್ಕೆಗಳಿಗೆ ಪದೇ ಪದೇ ಸಿಲುಕುತ್ತಿದ್ದ ಹಾವು ಫ್ಯಾನಿನ ರೆಕ್ಕೆ ಬಡಿತಕ್ಕೆ ಅಲ್ಲಿಂದ ಹಾರಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾತನ ಮೇಲೆ ಬಿದ್ದಿದೆ. ಅಬ್ಬಾ!!!. ಹೇಗಿರಬೇಡ ಅವನ ಪರಿಸ್ಥಿತಿ?!. ಅಲ್ಲಿಗೆ ವಿಡಿಯೋ ರೇಕಾರ್ಡ್ ಮಾಡ್ತಾ ಇದ್ದಾತ ತನ್ನ ಮೇಲೆ ಬಿದ್ದ ಹಾವಿನಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://www.youtube.com/shorts/3Rev9T-zTog?feature=share
ಇದನ್ನೂ ಓದಿ: Shivamogga: ತುಂಗಾ ನದಿಗೆ ಈಜಲು ತೆರಳಿದ್ದ ನಿಟ್ಟೆ ಕಾಲೇಜಿನ ಉಪನ್ಯಾಸಕರು ನೀರು ಪಾಲು !
