Rama procession: ಇಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ಆಗುವ ಮೂಲಕ ದೇಶ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಈ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮನ ಜಪ ಶುರುವಾಗಿದೆ. ಅನೇಕ ರಾಮ ಭಕ್ತರು ರಾಮನ ಮೆರವಣಿಗೆ ನಡೆಸಿ ಸಂಭ್ರಮಿಸುತ್ತಿದ್ದಾರೆ. ಗುಜರಾತ್(Gujarath) ನಲ್ಲೂ ಹೀಗೆ ಸಂಭ್ರಮಿಸುವಾಗ ರಾಮನ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಹಲವು ಮಂದಿಗೆ ಗಾಯವಾಗಿದೆ.
ಹೌದು, ಅಯೋಧ್ಯೆಯ ರಾಮ ಮಂದಿರ(Ayodhya rama mandir)ದಲ್ಲಿ ರಾಮನ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಗುಜರಾತ್‌ನ ಮೆಹ್ಸಾನ ಜಿಲ್ಲೆಯಲ್ಲಿ ನಡೆಯುತ್ತಿದ್ದ ಭಗವಾನ್ ಶ್ರೀರಾಮನ ಶೋಭಯಾತ್ರೆ ಮೇಲೆ ಕಲ್ಲುತೂರಿದ ಘಟನೆ ನಡೆದಿದೆ. ಇದರಿಂದ ಹಲವು ಮಂದಿಗೆ ಗಾಯಗಳಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಹರಸಾಹಸ ಪಟ್ಟಿದ್ದಾರೆ. ಸದ್ಯ ಸಂಪೂರ್ಣ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಇತ್ತ ಶೋಭಯಾತ್ರೆ ಅರ್ಧಕ್ಕೆ ಮೊಟಕುಗೊಂಡಿದೆ.
ಇದನ್ನೂ ಓದಿ: Sullia: ಖ್ಯಾತ ಕಿರುತೆರೆ ನಟಿಯ ತಂದೆ ಆತ್ಮಹತ್ಯೆ – ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ?!
ಅಂದಹಾಗೆ ಕೇರಾಲು ಪಟ್ಟಣದಲ್ಲಿ ಶ್ರೀರಾಮನ ಶೋಭಯಾತ್ರೆ ಸಾಗುತ್ತಿತ್ತು. ಅನ್ಯ ಸಮುದಾಯದ ಮನೆ ಹಾಗೂ ಪ್ರಾರ್ಥನಾ ಕೇಂದ್ರಗಳು ಇದ್ದ ಸ್ಥಳದ ಸಮೀಪ ಬರುತ್ತಿದ್ದಂತೆ ಕಲ್ಲು ತೂರಾಟ ನಡೆದಿದೆ. ಶೋಭಯಾತ್ರೆಗೆ ಪೊಲೀಸರ ಭದ್ರತೆ ನೀಡಿದ್ದರೂ ಈ ಘಟನೆ ಸಂಭವಿಸಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಶೋಭಯಾತ್ರೆಯ ರಾಮ ಭಕ್ತರು ಕೆರಳಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮೊದಲು ಪೊಲೀಸರು ಅಶ್ರುವಾಯು ಸಿಡಿಸಿ ಜನರು ಚದುರುವಂತೆ ಮಾಡಿದ್ದಾರೆ.
