Home » Price hike: ಇನ್ಮುಂದೆ ಒಂದು ಡಜನ್ ಮೊಟ್ಟೆಗೆ 400 ರೂ, ಕೆಜಿ ಈರುಳ್ಳಿಗೆ 250 ರೂ, ಚಿಕನ್ ರೇಟ್ ಕೇಳಿದ್ರೆ ದಂಗಾಗ್ತೀರಾ !!

Price hike: ಇನ್ಮುಂದೆ ಒಂದು ಡಜನ್ ಮೊಟ್ಟೆಗೆ 400 ರೂ, ಕೆಜಿ ಈರುಳ್ಳಿಗೆ 250 ರೂ, ಚಿಕನ್ ರೇಟ್ ಕೇಳಿದ್ರೆ ದಂಗಾಗ್ತೀರಾ !!

1 comment
Price hike

Price hike: ಆರ್ಥಿಕವಾಗಿ, ಆಡಳಿತವಾಗಿ ಎಲ್ಲಾದರಿಂದಲೂ ದಿವಾಳಿಯಾಗಲು ಹೊರಟಿರುವ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಬೆಲೆ ಏರಿಕೆಯು(Price hike)ಜನರು ಬದುಕಂತೆ ಮಾಡಿದೆ. ಅಂತೆಯೇ ಪಾಕಿಸ್ತಾನದಲ್ಲಿ ಇನ್ಮುಂದೆ ಒಂದು ಡಜನ್ ಮೊಟ್ಟೆಗೆ 400 ರೂ., ಕೆಜಿ ಈರುಳ್ಳಿಗೆ 250 ರೂ. ಚಿಕನ್ ಬೆಲೆ ಕೇಳೋದೇ ಬೇಡ ಅನ್ನುವಂತಾಗಿದೆ.

ಹೌದು, ಪಾಕಿಸ್ತಾನ(Pakistana) ಯಾವ ಮಟ್ಟಿಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಅಂದರೆ ಸಾಮಾನ್ಯ ಜನರಿಗೆ ಎರಡು ಹೊತ್ತಿನ ಊಟ ಸಿಗುವುದೂ ದುಸ್ತರವಾಗಿದೆ. ಪಾಕಿಸ್ತಾನದ ವಿವಿಧ ನಗರಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಇದೀಗ ಪಾಕಿಸ್ತಾನದ ಲಾಹೋರ್ ನಗರದಲ್ಲಿ ಒಂದು ಮೊಟ್ಟೆಯ ಬೆಲೆ 33 ರೂ.ಗೆ ತಲುಪಿದೆ. 12 ಮೊಟ್ಟೆ ಅಂದ್ರೆ ಒಂದು ಡಜನ್ ಮೊಟ್ಟೆ ಬೆಲೆ 400 ರೂ.ಗೆ ತಲುಪಿದೆ.

ಇದನ್ನೂ ಓದಿ: Killer CEO: ಪೊಲೀಸರ ಸಮ್ಮುಖದಲ್ಲೇ ಸೂಚನಾ ಮತ್ತು ಪತಿ ನಡುವೆ ಭಾರೀ ಜಟಾಪಟಿ!!

ಇನ್ನು ಮಾಧ್ಯಮ ವರದಿಗಳ ಪ್ರಕಾರ, ಜನವರಿ 15 ರಂದು, ಲಾಹೋರ್ ಪಂಜಾಬ್‌ನಲ್ಲಿ ಈ ಪರಿ ದರ ಏರಿಕೆಯಾಗಿದ್ದು, ರುಳ್ಳಿಯನ್ನು ಪ್ರತಿ ಕಿಲೋಗ್ರಾಂಗೆ PKR 230 ರಿಂದ 250 ಕ್ಕೆ ಮಾರಾಟ ಮಾಡಲಾಗುತ್ತಿದೆ, ಇದು ಪ್ರತಿ ಕಿಲೋಗ್ರಾಂಗೆ PKR 175 ರ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿದೆ. ಒಂದು ಕೆಜಿ ಚಿಕನ್ ಬೆಲೆ 615 ರೂ. ತಲುಪಿದೆ. ಸರ್ಕಾರದ ದರ ಪಟ್ಟಿಯನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಅಧಿಕಾರಿಗಳು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment