Romance in Delhi Metro : ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವು ವಿಚಾರಗಳು ಹರಿದಾಡುತ್ತಿರುತ್ತದೆ. ಅಂತೆಯೇ ಇದೀಗ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ನೀವು ಶಾಕ್ ಆಗ್ತಿರಾ! ಹೌದು, ದೆಹಲಿ ಮೆಟ್ರೋದಲ್ಲಿ ಕೆಳಗೆ ಮಲಗಿ ಪ್ರೇಮಿಗಳು ರೊಮ್ಯಾನ್ಸ್( Romance in Delhi Metro ) ಮಾಡುತ್ತಿರುವ ವಿಡಿಯೋ ಇದೀಗ ವೈರಲ್ (Delhi Metro Viral Video) ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಯುವಕ – ಯುವತಿ ಮೆಟ್ರೋದಲ್ಲಿ ಮೋಹದಲ್ಲಿ ಮೈಮರೆತು ರೊಮ್ಯಾನ್ಸ್ ಮಾಡುತ್ತಿರುವುದು ನೋಡಬಹುದು. ಯುವಕನ ತೊಡೆಯ ಮೇಲೆ ಯುವತಿ ಮಲಗಿದ್ದು, ಇಬ್ಬರು ಚುಂಬಿಸುತ್ತಿದ್ದಾರೆ. ಪ್ರೇಮಿಗಳು ಮೆಟ್ರೋದಲ್ಲಿ ಜನರಿರುವಾಗಲೇ ಕಿಸ್ಸಿಂಗ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇವರ ಈ ಅಸಭ್ಯ ವರ್ತನೆಗೆ ವಿಡಿಯೋ ನೋಡಿದ ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವು ಬಳಕೆದಾರರು ಡಿಸಿಪಿ ದೆಹಲಿ ಮೆಟ್ರೋವನ್ನು ಟ್ಯಾಗ್ ಮಾಡಿ, ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ದೆಹಲಿ ಮೆಟ್ರೋ ರೈಲು ನಿಗಮದ ನಿರ್ವಹಣೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರೇಮಿಗಳ ಈ ವರ್ತನೆಗೆ ನೆಟ್ಟಿರುವ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
https://twitter.com/SonOfChoudhary/status/1655839386230194177?s=20
ಇದನ್ನೂ ಓದಿ: Gruha Jyoti Scheme: ಬಾಡಿಗೆದಾರರಿಗೂ ಉಚಿತ ವಿದ್ಯುತ್: ಗೊಂದಲಗಳಿಗೆ ತೆರೆ ಎಳೆದ ಇಂಧನ ಸಚಿವ!
