Home » Weather Report: ರಾಜ್ಯದಲ್ಲಿ ಮುಂದಿನ 5 ದಿನ ಉಷ್ಣ ಅಲೆ, ಅಲ್ಲಲ್ಲಿ ಮಳೆ; IMD ಎಚ್ಚರಿಕೆ !

Weather Report: ರಾಜ್ಯದಲ್ಲಿ ಮುಂದಿನ 5 ದಿನ ಉಷ್ಣ ಅಲೆ, ಅಲ್ಲಲ್ಲಿ ಮಳೆ; IMD ಎಚ್ಚರಿಕೆ !

1 comment
Weather Report

Weather Report: ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಉಷ್ಣ ಅಲೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿನ್ನೆ ಎಚ್ಚರಿಕೆ ನೀಡಿದೆ. ನಿನ್ನೆ ರಾಜ್ಯದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಡಿಯನ್ನು ಮೀರಿ ಏರಿದ್ದು, ವಾತಾವರಣದ ಉಷ್ಣತೆಯು ಕಲಬುರಗಿ ಜಿಲ್ಲೆಯಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 40.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅಲ್ಲದೆ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ತಾಪಮಾನವು ಇನ್ನೂ 2 ರಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೆ ಬರುವ ಏಪ್ರಿಲ್ ತಿಂಗಳಿನಲ್ಲಿ ವಾತಾವರಣದ ತಾಪಮಾನವು ಮಾರ್ಚ್ ತಿಂಗಳಿಗಿಂತಲೂ ಹೆಚ್ಚಾಗಿರಲಿದೆ.

ಇದನ್ನೂ ಓದಿ: Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಾವು; ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ದುಷ್ಕರ್ಮಿಗಳು

ಈ ಉಷ್ಣಾಂಶ ಹೆಚ್ಚಳದ ಮಧ್ಯೆ ಶುಭ ಸುದ್ಧಿ ಏನೆಂದರೆ, ರಾಜ್ಯದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು IMD ವರದಿ ಹೇಳಿದೆ. ಆದ್ರೆ ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಸಾಧಾರಣ ಮಳೆಯಾಗಲಿದೆ. ಆದರೆ ಇಂದು ಬಿಸಿಲು ಹಾಗೂ ಒಣ ಹವೆಯ ವಾತಾವರಣ ಮುಂದುವರಿಯಲಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Mukhtar Ansari Death: 5 ಬಾರಿ ಶಾಸಕ, ಕುಖ್ಯಾತ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ ಸಾವು

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಗೆ ಏರುವ ಸಂಭವ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

*ರಾಜ್ಯದ ನಗರಗಳ ಉಷ್ಣಾಂಶ*

ರಾಯಚೂರು: 40-29

ಯಾದಗಿರಿ: 39-29

ವಿಜಯಪುರ: 38-29

ಬೀದರ್: 38-28

ಕಲಬುರಗಿ: 40-29

ಮಂಗಳೂರು: 31-26

ಮಂಡ್ಯ: 37-23

ಚಾಮರಾಜನಗರ: 38-22

ಮಡಿಕೇರಿ: 35-20

ರಾಮನಗರ: 37-23

ಹಾಸನ: 35-21

ಬೆಂಗಳೂರು: 35-22

ಚಿಕ್ಕಬಳ್ಳಾಪುರ: 34-22

ಕೋಲಾರ: 34-22

ಶಿವಮೊಗ್ಗ: 37-22

ಬಾಗಲಕೋಟೆ: 38-28

ಉಡುಪಿ: 31-26

ಕಾರವಾರ: 32-26

ಚಿಕ್ಕಮಗಳೂರು: 33-19

ಬೆಳಗಾವಿ: 34-23

ಮೈಸೂರು: 38-23

ತುಮಕೂರು: 36-23

ದಾವಣಗೆರೆ: 38-24

ಹುಬ್ಬಳ್ಳಿ: 37-23

ಚಿತ್ರದುರ್ಗ: 37-24

ಗದಗ: 37-25

ಕೊಪ್ಪಳ: 37-26

ಹಾವೇರಿ: 37-23

ಬಳ್ಳಾರಿ: 40-26

You may also like

Leave a Comment