Home » ಮದುವೆ ಸಂಭ್ರಮದಲ್ಲಿ ಸ್ಟಂಟ್ ಮಾಡಲು ಹೋದ ವರ | ಸ್ಟಂಟ್ ಮಾಡಿದ್ದೇ ಮಾಡಿದ್ದು ನಂತರ ಏನಾಯ್ತು?

ಮದುವೆ ಸಂಭ್ರಮದಲ್ಲಿ ಸ್ಟಂಟ್ ಮಾಡಲು ಹೋದ ವರ | ಸ್ಟಂಟ್ ಮಾಡಿದ್ದೇ ಮಾಡಿದ್ದು ನಂತರ ಏನಾಯ್ತು?

0 comments

ಮದುವೆ ಸಮಾರಂಭದಲ್ಲಿ ವಧು ವರರು ವಿಶೇಷವಾಗಿ ಕಾಣಬೇಕೆಂದು ಹಲವಾರು ಪ್ರಯತ್ನ ಮಾಡುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ನೀವು ಮದುವೆ ಸಮಾರಂಭದಲ್ಲಿ ವರ ಸ್ಟಂಟ್‌ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿರುವ ದೃಶ್ಯ ನೋಡಬಹುದು.

ಹೌದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆಯ ಮೆರವಣಿಗೆ ನಡೆಯುತ್ತಿದೆ. ಕುದುರೆಯ ಮೇಲೆ ಕುಳಿತು ವರ ಸ್ಟಂಟ್‌ ಮಾಡಲು ಪ್ರಾರಂಭಿಸುತ್ತಾನೆ. ಪ್ರಾರಂಭದಲ್ಲಿ ಎಲ್ಲವೂ ಸರಿ ಹೋದರೂ ಮರು ಕ್ಷಣವೇ ಜಾರಿ ಬೀಳುತ್ತಾನೆ.

ವರ ಕುದುರೆ ಮೇಲೆ ಸುಮ್ಮನೆ ಕೂರದೆ ಸ್ಟಂಟ್‌ ಮಾಡಿ ಯಡವಟ್ಟು ಮಾಡಿಕೊಂಡ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಇದನ್ನು ನೋಡಿ ಅನೇಕರು ನಗುವುದು ಮಾತ್ರವಲ್ಲದೆ ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡಿದ್ದಾರೆ.

ಸದ್ಯ ಈ ವಿಡಿಯೋವನ್ನು amanprajapti47 ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋ ಸಾವಿರಾರು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಸುಸೂತ್ರವಾಗಿ ನಡೆಯುತ್ತಿದ್ದ ಮದುವೆ ಸಂಧರ್ಭದಲ್ಲಿ ಸುಖಾ ಸುಮ್ಮನೆ ವರನು ತನ್ನ ಸಾಹಸ ತೊರ್ಪಡಿಸಲು ಹೋಗಿ ಈಗ ವರನನ್ನು ನೋಡಿ ಎಲ್ಲರೂ ನಗುವಂತಾಗಿದೆ.

You may also like

Leave a Comment