ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯಾದ ವ್ಯಕ್ತಿಯನ್ನು ಮದುವೆಯಾಗಲೆಂದು ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ ಪಾಕಿಸ್ತಾನದಿಂದ ಭಾರತಕ್ಕೆ ಬಂದು ತನ್ನ ಪ್ರಿಯಕರನನ್ನು ಮದುವೆಯಾಗಿ ಇದೀಗ ಮತ್ತೊಂದು ಮಗುವಿನ ಗರ್ಭಿಣಿಯಾಗಿರುವ ಕುರಿತು ನಿಮಗೆ ತಿಳಿದಿರಬಹುದು. ಹಾಗೆನೇ ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನಿಗೋಸ್ಕರ ರಾಜಸ್ಥಾನದ ಅಂಜು ಪಾಕಿಸ್ತಾನಕ್ಕೆ ಹೋಗಿದ್ದು ಇದೆಲ್ಲ ನಿಮಗೆ ಗೊತ್ತಿರಬಹುದು.
ಇದನ್ನೂ ಓದಿ: Mangaluru: ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಫುಡ್‌ಪಾಯಿಸನ್; 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
ಇದೀಗ ಈ ಘಟನೆಗಳಿಗೆ ಪೂರಕವೆಂಬಂತೆ ಇನ್ನೊಬ್ಬ ಎರಡು ಮಕ್ಕಳ ತಾಯಿ ವಾಟ್ಸಪ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾರೆ.
ಶಬ್ನಮ್ ಎಂಬಾಕೆಯೇ ತನ್ನ ಕಿರಿಯ ಮಗಳೊಂದಿಗೆ ಹೋಗಿದ್ದಾಳೆಂದು ಆಕೆಯ ಪತಿ ಭಾನುವಾರ (ಫೆ.4) ರಂದು ನಾಪತ್ತೆಯಾಗಿರುವ ಪ್ರಕರಣವನ್ನು ದಾಖಲಿಸಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದು, ಪಾಕಿಸ್ತಾನದ ವ್ಯಕ್ತಿಯೊಬ್ಬನ ಜೊತೆ ವಾಟ್ಸಪ್‌ನಲ್ಲಿ ಸಂಪರ್ಕದಲ್ಲಿದ್ದು, ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು, ಆತ ಮದುವೆಯಾಗುವ ಭರವಸೆ ನೀಡಿದ್ದರಿಂದ ಮಹಿಳೆ ಪಾಕಿಸ್ತಾನಕ್ಕೆ ತೆರಳಿರುವ ಕುರಿತು ವರದಿ ತಿಳಿಸಿದೆ.
