ಕಂಪ್ಯೂಟರ್ ಎಂದರೆ ನಮಗೆ ಮೊದಲು ನೆನಪಿಗೆ ಬರೋದು ಮೌಸ್. ಹೌದು ಕಂಪ್ಯೂಟರ್ ಗೆ ರಿಮೋಟ್ ಆಗಿ ಕೆಲಸ ಮಾಡೋದು ಮೌಸ್ ಎಂದು ಕೂಡ ಹೇಳಬಹುದು. ನಮಗೆ ಕಂಪ್ಯೂಟರ್ ಪರದೆಯ ಮೇಲೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಯಾವುದೇ ಐಕಾನ್ ಮೇಲೆ ಕ್ಲಿಕ್ ಮಾಡಲು, ನಾವು ಮೌಸ್ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಮೌಸ್ ಎನ್ನುವ ಹೆಸರು ವಿಚಿತ್ರ ಏನಿಸುತ್ತೆ ಯಾಕೆಂದರೆ ಪ್ರಾಣಿ ಹೆಸರು ಆಗಿರುವ ಕಾರಣ ಆಗಿರಬಹುದು. ಯಾಕಾಗಿ ಇಲಿ ಹೆಸರು ಇಟ್ಟಿದಾರೆ ಎಂಬುದು ಕೆಲವರಿಗೆ ಕುತೂಹಲ ಇರಬಹುದು. ಹೌದು ಈ ಹೆಸರಿನ ಹಿಂದೆ ಒಂದು ಕೌತುಕ ಕಥೆ ಇದೆಯಂತೆ.
ಕಥೆಯ ಪ್ರಕಾರ, ಇಲಿಯನ್ನು ಮೊದಲು ಆಮೆ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಈ ಕಂಪ್ಯೂಟರ್ ಮೌಸ್ ನ ಚಿಪ್ಪು ಆಮೆಯ ಚಿಪ್ಪಿನಷ್ಟು ಗಟ್ಟಿಯಾಗಿರುತ್ತದೆ ಮತ್ತು ಆಕಾರವು ಆಮೆಯಂತೆಯೇ ಸ್ವಲ್ಪಮಟ್ಟಿಗೆ ಹೋಲುತ್ತದೆ ಎಂಬುದಾಗಿದೆ. ಆದರೆ ಆಮೆ ನಿಧಾನಗತಿ ಎಂದು ಆಮೆಯನ್ನು ಬಿಟ್ಟು ಇಲಿಯ ಚಾಕಚಕ್ಯತೆಗೆ ಅದರ ಹೆಸರು ನೀಡಲಾಯಿತು.
ವಾಸ್ತವದಲ್ಲಿ ಮೊಟ್ಟಮೊದಲ ಬಾರಿಗೆ ಮೌಸ್ ಅನ್ನು ಕಂಡುಹಿಡಿದಾಗ, ಅದನ್ನು ಪಾಯಿಂಟರ್ ಡಿವೈಸ್ ಎಂದು ಹೆಸರಿಸಲಾಗಿತ್ತು. ಅದನ್ನು 1960 ರ ದಶಕದಲ್ಲಿ ಡೌಗ್ಲಾಸ್ ಕಾರ್ಲ್ ಎಂಗೆಲ್ಬಾರ್ಟ್ ಕಂಡುಹಿಡಿದಿದ್ದಾನೆ. ಆತ ಎರಡು ಲೋಹದ ಚಕ್ರಗಳನ್ನು ಹೊಂದಿರುವ ವಿಶ್ವದ ಮೊದಲ ಮರದ ಇಲಿಯನ್ನು ತಯಾರಿಸಿದ್ದ ಎಂಬುದು ತಿಳಿದರೆ ನಿಮಗೂ ಆಶ್ಚರ್ಯವಾಗುತ್ತದೆ.
ಕಂಪ್ಯೂಟರ್ ಮೌಸ್ ಅನ್ನು ಮೌಸ್ ಎಂದು ಏಕೆ ಹೆಸರಿಸಲಾಯಿತು ಎಂಬುದರ ಕುರಿತು ಹೇಳುವುದಾದರೆ, ವಾಸ್ತವದಲ್ಲಿ ಮೌಸ್ ಆವಿಷ್ಕಾರವಾದ ನಂತರ ಅದಕ್ಕೆ ಹೆಸರನ್ನಿಡುವ ಸಮಯ ಬಂದಾಗ ಮೌಸ್ ಒಂದು ಚಿಕ್ಕ ಸಾಧನವಾಗಿದ್ದು, ಇಲಿಯು ಕುಣಿದು ಕುಪ್ಪಳಿಸಿದಂತೆ ಕಾಣುತ್ತದೆ. ಅದರ ಬೆನ್ನಿನಿಂದ ಹೊರಬರುವ ತಂತಿಯು ಇಲಿಯ ಬಾಲದಂತಿದೆ. ಇದಲ್ಲದೇ ಇಲಿ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವಂತೆಯೇ ಈ ಮೌಸ್ ಕೆಲಸವೂ ನಮ್ಮ ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಇಷ್ಟೆಲ್ಲಾ ಯೋಚಿಸಿದ ಮೇಲೆ ಅದಕ್ಕೆ ಮೌಸ್ ಎಂದು ಹೆಸರಿಡದಿದ್ದರೆ ಬಹುಶಃ ಮೌಸ್ ಗೆ ಅನ್ಯಾಯವಾಗುತ್ತಿತ್ತು ಎಂಬ ಮಾಹಿತಿ ಇದೆ.
ಸದ್ಯ ಮೌಸ್ ಇಲಿಯಂತೆ ಕಾಣುತ್ತದೆ ಮತ್ತು ಇಲಿಯಂತೆ ಕಾರ್ಯನಿರ್ವಹಿಸುತ್ತದೆ ಅನ್ನೋದು ನಾವುಗಳೆಲ್ಲ ಒಪ್ಪಿರುವ ವಿಚಾರ.
