ಪ್ರತಿದೇವಸ್ಥಾನಕ್ಕೆ ಹೋಗುವ ಮುನ್ನ ಪಾದರಕ್ಷೆ ಇಲ್ಲಿಯೇ ಬಿಡಿ.ಶಾಂತತೆ ಕಾಪಾಡಿ ಎಂಬ ಬರಹ ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ಬರೆದ ಬೋರ್ಡ್ ಎಲ್ಲೆಡೆ ಸುದ್ದಿಯಗುತ್ತಿದೆ.
ಇಲ್ಲೊಂದು ದೇವಸ್ಥಾನದಲ್ಲಿ ಪದವಿ ಮತ್ತು ಪಾದರಕ್ಷೆ ಇಲ್ಲಿಯೆ ಬಿಡ್ರಿ ಎಂದು ಬರೆಯುವ ಮೂಲಕ ಭಕ್ತರಲ್ಲಿ ಚಿಂತನೆ ಹುಟ್ಟುಹಾಕಲಾಗಿದೆ. ಈ ರೀತಿಯ ಬರಹ ಬರೆದಿರುವುದು ಹಾವೇರಿ ನಗರದ ತೇರುಬೀದಿಯ ಹನುಮಂತ ದೇವರ ದೇವಸ್ಥಾನದಲ್ಲಿ. ಈ ದೇವಸ್ಥಾನದಲ್ಲಿ ಪಾದರಕ್ಷೆ ಬಿಡುವ ಜಾಗದಲ್ಲಿ ಈ ರೀತಿ ಬರಹ ಬರೆಯಲಾಗಿದೆ. ದೇವಸ್ಥಾನದ ಹೊರಗೆ ಪದವಿ, ಹುದ್ದೆ, ಸ್ಥಾನಮಾನ ಮತ್ತು ಬಡವ – ಶ್ರೀಮಂತ. ಆದರೆ, ದೇವಸ್ಥಾನಕ್ಕೆ ಬಂದರೆ ಇಲ್ಲಿ ಎಲ್ಲರೂ ಭಕ್ತರೇ ಎಂಬ ಅರ್ಥದಿಂದ ಈ ಬರಹ ಬರೆಸಲಾಗಿದೆ ಎನ್ನುತ್ತಾರೆ ಇಲ್ಲಿಯ ಅರ್ಚಕರು.
ಹಾವೇರಿಯ ಈ ತೇರು ಬೀದಿ ಹನುಮಂತ ದೇವರ ದೇವಸ್ಥಾನ ವ್ಯಾಸಕಾಲದಲ್ಲಿ ನಿರ್ಮಾಣಗೊಂಡಿದೆ. ದೇವಸ್ಥಾನದಲ್ಲಿ ಪ್ರತಿಗೋಡೆ ಮೇಲೆ ನುಡಿಬರಹಗಳನ್ನು ಬರೆಸಲಾಗಿದೆ.