Home » Husband and wife: ಕಚೇರಿಯಿಂದ ನೇರವಾಗಿ ಮನೆಗೆ ಬಂದ ಗಂಡನಿಗೆ ಹೆಂಡತಿಯಿಂದ ಬಿತ್ತು ಗೂಸಾ!!! ಕಾರಣ ಕೇಳಿದರೆ ಖಂಡಿತ ಅಚ್ಚರಿ ಪಡ್ತೀರ!

Husband and wife: ಕಚೇರಿಯಿಂದ ನೇರವಾಗಿ ಮನೆಗೆ ಬಂದ ಗಂಡನಿಗೆ ಹೆಂಡತಿಯಿಂದ ಬಿತ್ತು ಗೂಸಾ!!! ಕಾರಣ ಕೇಳಿದರೆ ಖಂಡಿತ ಅಚ್ಚರಿ ಪಡ್ತೀರ!

0 comments
Husband and wife

Husband and wife: ದಂಪತಿಗಳು (Husband and wife) ಅಂದಮೇಲೆ ಅವರ ನಡುವೆ ಸಣ್ಣ ಪುಟ್ಟ ಇರಿಸು ಮುರಿಸು ಇರುವುದು ಸಹಜ. ಇನ್ನು ಕೆಲವರು ಬಹಳ ಪ್ರೀತಿಯಿಂದ ಇರುತ್ತಾರೆ. ಆದರೆ ಇಲ್ಲೊಬ್ಬಳು ಗಂಡನನ್ನು ಪ್ರಾಣಿಯ ತರಹ ಜೀವ ಬಾಯಿಗೆ ಬರುವಷ್ಟು ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ.

ಸಾಮಾನ್ಯವಾಗಿ ಪತಿ ತನ್ನ ಪತ್ನಿಗೆ ಹಿಂಸೆ ಕೊಟ್ಟಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ, ಆದರೆ ಇಲ್ಲೊಬ್ಬ ಪತ್ನಿ ಪತಿ ಕಚೇರಿಯಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದು, ಬಂದ ಕೂಡಲೇ ಹಿಗ್ಗಾಮುಗ್ಗ ಥಳಿಸಿದ್ದಾಳೆ.

ಆಕೆಯ ಗಂಡ ಮನೆಗೆ ಬಂದು ಟೇಬಲ್ ಮೇಲೆ ಹೆಲ್ಮೆಟ್​ ಇಟ್ಟ ತಕ್ಷಣ ಹೆಂಡತಿ ಓಡಿ ಬಂದು ಥಳಿಸಲು ಶುರು ಮಾಡುತ್ತಾಳೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ನೋಡಿ ಆಶ್ಚರ್ಯಚಕಿತರಾಗಿದ್ದು, ಮೋಸ ಮಾಡುವಾಗ ಹೆಂಡತಿ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರಬಹುದು ಎಂದು ಕೆಲವರು ಭಾವಿಸಿದ್ದರು.

ವಾಸ್ತವವಾಗಿ, ಪತಿ 14 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಿದ ನಂತರ ಮನೆಗೆ ಮರಳಿದ್ದಾರೆ. ಆದರೆ ಬೆಳಗ್ಗೆ ಕಚೇರಿಗೆ ಹೋಗುವಾಗ ಮನೆಯ ತ್ಯಾಜ್ಯವನ್ನು ತೆಗೆದುಕೊಂಡು ಹೋಗುವುದನ್ನು ಮರೆತಿದ್ದರು. ಈ ಕಾರಣಕ್ಕೆ ಕೋಪಗೊಂಡ ಪತ್ನಿ ಆತನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

 

ಸದ್ಯ ಈ ವೀಡಿಯೊವನ್ನು ಕ್ರೇಜಿ ಕ್ಲಿಪ್ ಹೆಸರಿನ ಟ್ವಿಟರ್ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ಈ ವಿಡಿಯೋಗೆ 50 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿದ್ದು, ಸುಮಾರು 18 ಸಾವಿರ ಮಂದಿ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ:ಟ್ರಕ್​ ಹಾಗೂ ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ! 6 ಮಂದಿ ಸಾವು, 25 ಜನರಿಗೆ ಗಾಯ

You may also like

Leave a Comment