Home » ಕೆಎಸ್ಆರ್ ಟಿಸಿ ಯಿಂದ ಟೂರ್ ಪ್ಯಾಕೇಜ್ ಬಿಡುಗಡೆ | ವರ್ಷಾಂತ್ಯದ ಪ್ರವಾಸಕ್ಕೆ ಇಲ್ಲಿದೆ ಭರ್ಜರಿ ಆಫರ್

ಕೆಎಸ್ಆರ್ ಟಿಸಿ ಯಿಂದ ಟೂರ್ ಪ್ಯಾಕೇಜ್ ಬಿಡುಗಡೆ | ವರ್ಷಾಂತ್ಯದ ಪ್ರವಾಸಕ್ಕೆ ಇಲ್ಲಿದೆ ಭರ್ಜರಿ ಆಫರ್

0 comments

KSRTC ವರ್ಷಾಂತ್ಯದ ಪ್ರವಾಸಕ್ಕೆ ಇದೀಗ ಭರ್ಜರಿ ಆಫರ್ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಮುರ್ಡೇಶ್ವರದವರೆಗೆ ಟೂರ್ ಪ್ಯಾಕೇಜ್ ಅನ್ನು ಆರಂಭಿಸಿದೆ. ಇನ್ನೂ, ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಪ್ರವಾಸ ಕೈಗೊಳ್ಳುವವರಿಗೆ KSRTC ಗುಡ್ ನ್ಯೂಸ್ ನೀಡಿದ್ದು, ಕಣ್ಮನ ಸೆಳೆಯುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ವಾರಾಂತ್ಯದ ಟೂರ್ ಪ್ಯಾಕೇಜ್ ಆರಂಭಿಸಿದೆ. ಇನ್ನೂ, ಈ ಪ್ರವಾಸ ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಆರಂಭವಾಗಿ ಮುರ್ಡೇಶ್ವರದವರೆಗೆ ಇರಲಿದೆ.

ಕುಮಟಾದಿಂದ ಬೆಳಿಗ್ಗೆ 7:30 ಕ್ಕೆ ಬಸ್ ಹೊರಟು, ಗೋಕರ್ಣ ಮಹಾಗಣಪತಿ ದೇವಸ್ಥಾನದ ದರ್ಶನದಿಂದ ಪ್ರಯಾಣ ಆರಂಭವಾಗುತ್ತದೆ. ನಂತರ ಗೋಕರ್ಣದಿಂದ ಮಿರ್ಜಾನ್ ಕೋಟೆಗೆ ತೆರಳಿ, ಅಲ್ಲಿಂದ ಅಪ್ಸರಕೊಂಡಕ್ಕೆ ಪ್ರಯಾಣ ಬೆಳೆಸಿ. ನಂತರ ಇಡಗುಂಜಿ ಮಹಾಗಣಪತಿ ಸನ್ನಿಧಾನ, ಮುರ್ಡೇಶ್ವರ, ಕಾಸರಕೋಡು ಇಕೋ ಬೀಚ್ ಹಾಗೂ ಶರಾವತಿ ಕಾಂಡ್ಲಾ ವನದ ಸವಾರಿಗೆ ಭೇಟಿ. ಈ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಕೊನೆಗೆ ಗೋಕರ್ಣಕ್ಕೆ ಈ ಪ್ರವಾಸ ಮುಕ್ತಾಯವಾಗಲಿದೆ. ಈ ಟೂರ್ ಪ್ರತಿ ಶನಿವಾರ ಹಾಗೂ ಭಾನುವಾರದಂದು ಇರುತ್ತದೆ.

ಇನ್ನೂ, ಈ ಪ್ರವಾಸ ಕೈಗೊಳ್ಳಬೇಕಾದರೆ ಪಾವತಿಸಬೇಕಾದ ಹಣದ ವಿವರ ಇಲ್ಲಿದೆ. ವಯಸ್ಕರಿಗೆ 300 ರೂ. ಹಾಗೂ ಮಕ್ಕಳಿಗೆ 250 ರೂ‌. ಆಗಿದ್ದು, ಹಾಗೇ ನೀವು ಈ ಪ್ರವಾಸ ಕೈಗೊಳ್ಳುವವರಿದ್ದರೆ ಕೆಎಸ್​ಆರ್​ಟಿಸಿ ವೆಬ್​ಸೈಟ್​ನಲ್ಲಿ ಈ ಪ್ರವಾಸಕ್ಕೆ ಮುಂಗಡ ಬುಕ್ಕಿಂಗ್ ಮಾಡಬಹುದು.

You may also like

Leave a Comment