Home » Team India Coach: ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ

Team India Coach: ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ

0 comments
Team India couch

Team India Coach: ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಕನ್ನಡಿಗ, ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಮುಂದಿನ 3.5 ವರ್ಷಗಳ (1 ಜುಲೈ 2024 ರಿಂದ 31 ಡಿಸೆಂಬರ್ 2027) ಅವಧಿಗೆ ನೂತನ ಕೋಚ್ ಆಯ್ಕೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾಗೆ ನೂತನ ಕೋಚ್ ನೇಮಕವಾಗುವ ಸಾಧ್ಯತೆಗಳಿವೆ. ಅಥವಾ ಹಾಲಿ ಕೋಚ್ ರಾಹುಲ್ ದ್ರಾವಿಡ್ ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೆ ಮರುಅರ್ಜಿ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ: Majaa Talkies: ಅಭಿಮಾನಿಗಳಿಗೆ ‘ಮಜಾ ಟಾಕೀಸ್’ ಹೊಸ ಸೀಸನ್ ಅಪ್ಡೇಟ್ ನೀಡಿದ ಸೃಜನ್ ಲೋಕೇಶ್!

ಟಿ20 ವಿಶ್ವಕಪ್ ಬಳಿಕ ನೂತನ ತರಬೇತುದಾರ 2021ರ ನವೆಂಬರ್‌ನಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ 2 ವರ್ಷಗಳ ಅವಧಿಗೆ ನೇಮಕಗೊಂಡಿದ್ದ ದ್ರಾವಿಡ್ ಅವರ ಕಾರ್ಯಾವಧಿಯನ್ನು 2023ರ ಏಕದಿನ ವಿಶ್ವಕಪ್ ಬಳಿಕ ಅಲ್ಪಾವಧಿಗೆ ವಿಸ್ತರಿಸಲಾಗಿತ್ತು. ಇದೀಗ ಟಿ20 ವಿಶ್ವಕಪ್ ಬಳಿಕ ಜೂನ್‌ನಲ್ಲಿ ದ್ರಾವಿಡ್ ಅವರ ಅವಧಿ ಮುಕ್ತಾಯಗೊಳ್ಳಲಿದ್ದು, ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಶಿಫಾರಸು ಅನ್ವಯ ದ್ರಾವಿಡ್ ಅವರನ್ನು ನೇರವಾಗಿ ಮುಂದುವರಿಸುವ ಬದಲು ಹೊಸ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Rape Case Bhopal: ಹಾಸ್ಟೆಲ್‌ನಲ್ಲಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಶಾಲೆಯ ಮಾಲೀಕ : 2 ವಾರಗಳ ಸತತ ಕಾರ್ಯಾಚರಣೆ ಬಳಿಕ ಅರೆಸ್ಟ್

ಮುಂದಿನ ಕೋಚ್ ಅವಧಿ 3.5 ವರ್ಷ ಅಂದರೆ 2027ರ ಡಿಸೆಂಬರ್‌ವರೆಗೆ ಇರಲಿದೆ. ನೂತನ ಕೋಚ್ ಹುದ್ದೆ ಅಲಂಕರಿಸುವರು 14 ರಿಂದ 16 ಸಹಾಯಕ ಸಿಬ್ಬಂದಿ ಹೊಂದಲಿದ್ದು, ಕೋಚ್ ಹುದ್ದೆಗೆ ಮೇ 27ರೊಳಗೆ ಅರ್ಜಿ ಸಲ್ಲಿಸಬೇಕಿದೆ.

You may also like

Leave a Comment